ಮಡಿಕೇರಿ, ಅ. 4: ಮಡಿಕೇರಿ ತಾಲೂಕು ಬಿಜೆಪಿ ಹಿಂದುಳಿದ ಮೋರ್ಚಾದ ಸಭೆ ಮಡಿಕೇರಿಯ ಬಿಜೆಪಿ ಕಚೇರಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಹಿಂದುಳಿದ ಮೋರ್ಚಾದ ಅಧ್ಯಕ್ಷ ಪಿ.ವಿ. ಆನಂದ ಪೂಜಾರಿ ತಾಳತ್‍ಮನೆ ಅವರು ವಹಿಸಿದ್ದರು. ಸಭೆಗೆ ಹಿಂದುಳಿದ ಮೋರ್ಚಾದ ಜಿಲ್ಲಾ ಅಧ್ಯಕ್ಷ ಬಿ.ವೈ ಆನಂದ ರಘು, ಪ್ರಧಾನ ಕಾರ್ಯದರ್ಶಿ ಕೆ.ಎನ್. ದೇವರಾಜ್, ಕೆ.ಎಸ್. ಪ್ರಕಾಶ್ ಕಡಂಗ, ಕೊಟ್ಟಂಡ ಅನಿತಾ, ದಿನೇಶ್ ಚೆಟ್ಟಿಮಾನಿ ಹಾಗೂ ಮಡಿಕೇರಿ ತಾಲೂಕು ಹಿಂದುಳಿದ ಮೋರ್ಚಾದ ಉಪಾಧ್ಯಕ್ಷ ಕೆ.ಯು. ಗಿರೀಶ್ ಕಡಂಗ, ಬಿ.ಎಸ್. ಸೋಮಪ್ಪ ಕರಡ, ಬಿ.ಬಿ. ಪುಷ್ಪ ಮೇಕೇರಿ, ಬಿ.ಎಸ್. ರತ್ನ ಕಾಟಕೇರಿ, ಬಿ.ಇ. ಶಾಂತಿ ಕೋಕೇರಿ, ಬಿ.ಹೆಚ್. ಲೋಕೇಶ್ ಮೂರ್ನಾಡು, ಅಶೋಕ ಚೇರಂಬಾಣೆ, ಕಾರ್ಯದರ್ಶಿ ತೊರೇರ ಕಾಶಿ ಕಾರ್ಯಪ್ಪ ಮರಗೋಡು ಹಾಜರಿದ್ದರು.