ಮಡಿಕೇರಿ, ಸೆ. 15: ‘ಕೆಸದ ಸಾರು.., ಕೆಂಡದ ಹಿಟ್ಟು, ಚರ್ಮೆ ಕೊಡಿ ಪಲ್ಯ.., ಬಾಳೆ ಕೂಂಬೆ ಪಲ್ಯ.., ಪುದಿನ ಚಟ್ನಿ.., ರೊಟ್ಟಿ.., ಹೀಗೆ ಬಗೆ ಬಗೆಯ ತಿನಿಸುಗಳು ಇಂದಿನ ವಿಶೇಷವಾಗಿತ್ತು. ಆಟಿ ತಿಂಗಳು ಮತ್ತು ನಾಟಿ ಕೆಲಸದಲ್ಲಿ ಸೇವಿಸುವ ಸಾಂಪ್ರದಾಯಿಕ ತಿನಿಸುಗಳು ಇಂದಿನ ಸವಿರುಚಿಯಾಗಿತ್ತು.ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮರಗೋಡು ಗೌಡ ಸಮಾಜದ ಸಹಯೋಗದೊಂದಿಗೆ ಏರ್ಪಡಿಸಲಾಗಿರುವ ಅರೆಭಾಷೆ ಸಂಸ್ಕøತಿಯಲ್ಲಿ ಸಾಂಪ್ರದಾಯಿಕ ಅಡುಗೆ ತರಬೇತಿ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿಂದು ಅವಂದೂರಿನ ಶ್ರೀ ಗೋಪಾಲಕೃಷ್ಣ ಯುವ ಸಂಘದವರು ತರಬೇತಿ ನೀಡಿದರು.

ಕೆಸದ ಸಾರು ಮತ್ತು ರೊಟ್ಟಿ, ಕೆಂಡದ ಹಿಟ್ಟು, ಕಾಯಿ ತಂಬಿಟ್ಟು, ಅಪ್ಪತಿಟ್ಟು, ಚರ್ಮೆಕೊಡಿ ಪಲ್ಯ, ತೊಳಸ್ಲಿಟ್ಟು, ಮುದ್ದೆ ಹಿಟ್ಟು, ಅಡಿಕೆ ಹಿಟ್ಟು, ಬಾಳೆಕೂಂಬೆ ಪಲ್ಯ, ಸೂಸಿಲಿಟ್ಟು, ಪಾಪಿಟ್ಟು, ಲಾರ್ವಪಲ್ಯ, ಪುದೀನ ಚಟ್ನಿಗಳನ್ನು ಮಾಡುವ ವಿಧಾನಗಳ ಬಗ್ಗೆ ತಿಳಿಸಿಕೊಟ್ಟರು. ಇದರೊಂದಿಗೆ ಇಂದು ವಿಶೇಷವಾಗಿ 57 ಬಗೆ ಬಗೆಯ ತಿಂಡಿ-ತಿನಿಸುಗಳ ಪ್ರದರ್ಶನ ಮಾಡಲಾಯಿತು. ಕಟ್ಟೆಮನೆ ಸೋನಾಜಿತ್ ಕಾರ್ಯಕ್ರಮ ನಡೆಸಿಕೊಟ್ಟರು.