ಶನಿವಾರಸಂತೆ ಡಿ. 12: ಕೊಡ್ಲಿಪೇಟೆ ಹೋಬಳಿ ದಲಿತ ಸಂಘಟನೆ ವತಿಯಿಂದ ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 60ನೇ ಪರಿ ನಿರ್ವಾಣ ದಿನದ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪರಿ ನಿರ್ವಾಣ ಸಮಿತಿ ಅಧ್ಯಕ್ಷ ಡಿ.ಆರ್. ಕೆಂಚೇಶ್ವರ್ ವಹಿಸಿದ್ದರು

ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಹಂಡ್ಲಿ ಕ್ಷೇತ್ರದ ತಾ.ಪಂ. ಸದಸ್ಯ ಕುಶಾಲಪ್ಪ ಮಾತನಾಡಿ, ದಲಿತರು ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳಬೇಕು. ಬೇಡಬಾರದು ಕಿತ್ತು ತೆಗೆದುಕೊಳ್ಳಬೇಕು, ನಮ್ಮ ಉದ್ದಾರ ನಮ್ಮ ಕೈಯಲ್ಲಿದೆ ಎಂದರು

ಉಪನ್ಯಾಸಕ ಕೆ.ಪಿ. ಜಯಕುಮಾರ್ ಮಾತನಾಡಿ, ಬಿ.ಆರ್. ಅಂಬೇಡ್ಕರ್ ಸಾವಿಲ್ಲದ ವ್ಯಕ್ತಿ. ಇಂದು ಸತ್ತಿರುವವರನ್ನು ಎಚ್ಚರ ಮಾಡುವ ದಿನವಾಗಿದೆ. ಜನಾಂಗವನ್ನು ಜತೆಗೂಡಿಸಿರುವ ವ್ಯಕ್ತಿ. ಬಾಬಾ ಸಾಹೇಬ್ ಅವರು ವ್ಯಕ್ತಿಯಲ್ಲ ದೇಶದ ಶಕ್ತಿ. ಇವರನ್ನು ದಲಿತರ ನಾಯಕ ಎನ್ನುವದನ್ನು ಕಿತ್ತುಹಾಕಿ ವಿಶ್ವ ನಾಯಕ ಎನ್ನಿ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೂವಯ್ಯ, ನಿವೃತ್ತ ಶಿಕ್ಷಕ ಎಂ. ಕಾಳಯ್ಯ ಮಾತನಾಡಿದರು. ಸಮಾರಂಭದಲ್ಲಿ ಪ್ರಮುಖರಾದ ಡಿ.ಬಿ. ವಿಜಯ, ಪ್ರಸನ್ನ, ಪುಟ್ಟಯ್ಯ, ರಾಜೇಶ್, ರವೀಂದ್ರ, ಚಂದ್ರು, ವಸಂತ ಸೂರ್ಯಕುಮಾರ್, ಹೇಮಾವತಿ, ಗೌರಮ್ಮ ಇತರಿದ್ದರು. ಡಿ.ಎನ್. ವಸಂತ್ ಸ್ವಾಗತಿಸಿ, ವೇದಕುಮಾರ್ ನಿರೂಪಿಸಿದರೆ, ಡಿ.ಕೆ. ವೀರಭದ್ರ ವಂದಿಸಿದರು.