ಸಿದ್ದಾಪುರ, ಡಿ. 12: ಜಿಲ್ಲೆಯಲ್ಲಿ ಬಡವರನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಎ.ಕೆ. ಸುಬ್ಬಯ್ಯ ಆರೋಪಿಸಿದರು.

ಮಾಲ್ದಾರೆ ಸಮೀಪದ ದಿಡ್ಡಳ್ಳಿ ಯಲ್ಲಿ ಗುಡಿಸಲು ಕಳೆದುಕೊಂಡಿ ರುವ ನಿರಾಶ್ರಿತರನ್ನು ಭೇಟಿ ಮಾಡಿ ಸಮಸ್ಯೆಯನ್ನು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ದರು. ಅಧಿಕಾರಿಗಳು ಮೇಲ್ವರ್ಗದ ಮಂದಿಗೆ ಅನುಕೂಲ ಕಲ್ಪಿಸುತ್ತಾ ಕೆಳವರ್ಗದವರನ್ನು ತುಳಿಯುತ್ತಿ ದ್ದಾರೆ. ಬಡವರ್ಗದವರಿಗೆ ಹಾಗೂ ಗಿರಿಜನರಿಗೆ ಶಾಶ್ವತ ಸೂರು ಒದಗಿಸಿ ಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಮೀಸಲು ಅರಣ್ಯವನ್ನು ಬದಲಾಯಿಸಿ ಸೂರು ಕಲ್ಪಿಸಲು ಸಹಕಾರ ನೀಡಬೇಕೆಂದು ಆಗ್ರಹಿಸಿದರು. ಗಿರಿಜನರನ್ನು ಉದ್ಧಾರ ಮಾಡುವದೆಂದು ಹೇಳಿ ಕೆಲವು ಸಂಘಟನೆಗಳು ತಪ್ಪು ಮಾಹಿತಿ ನೀಡಿ ಸ್ವಾರ್ಥಲಾಭವನ್ನು ಪಡೆಯುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸಾಕಷ್ಟು ಮಂದಿ ಪ್ರಭಾವಿ ವ್ಯಕ್ತಿಗಳು ಅರಣ್ಯವನ್ನು ಒತ್ತುವರಿ ಮಾಡಿಕೊಂಡಿದ್ದು, ಅಂತಹವರಿಂದ ಜಾಗವನ್ನು ತೆರವುಗೊಳಿಸಿ ಬಡವರಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿದರು. ಅರಣ್ಯ ಇಲಾಖೆ ದಿಡ್ಡಳ್ಳಿ ಅರಣ್ಯ ವ್ಯಾಪ್ತಿ ಪ್ರದೇಶದಿಂದ 577 ಕುಟುಂಬಗಳನ್ನು ತೆರವುಗೊಳಿಸಿದ ವಿಚಾರವನ್ನು ಸದ್ಯದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾಹಿತಿ ನೀಡುವ ದಾಗಿ ಹೇಳಿದರು. ಈ ಸಂದರ್ಭ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಸಲಾಂ ಇದ್ದರು.