ನಾಪೆÇೀಕ್ಲು, ಅ. 31: ಮೂರು ದಿನದ ಸಂಭ್ರಮ. ಎಲ್ಲಿ ನೋಡಿದರೂ ಜನ ಜಂಗುಳಿ, ನೆಂಟರಿಷ್ಟರು, ಗ್ರಾಮಸ್ಥರದ್ದೇ ಓಡಾಟ. ಇದು ಯಾವದೇ ಜಾತ್ರೆ ಅಲ್ಲ. ಸಮೀಪದ ವೆಸ್ಟ್ ಕೊಳಕೇರಿ ಗ್ರಾಮದ ಕುಂಡ್ಯೋಳಂಡ ಕುಟುಂಬಸ್ಥರ ಐನ್‍ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ.ಕುಟುಂಬದ ಹಿರಿಯರು ಹೇಳುವ ಪ್ರಕಾರ ಈ ಐನ್‍ಮನೆಗೆ 800 ವರ್ಷದ ಇತಿಹಾಸವಿದೆ. ಈಗಿರುವ ನಾಲ್ಕುಕಟ್ಟಿನ ಐನ್‍ಮನೆ ನಿರ್ಮಿಸಿ 475 ವರ್ಷಗಳೇ ಕಳೆದಿದೆ. ಆದರೆ ಆಧುನೀಕತೆ ಬದಲಾದಂತೆ ತಮ್ಮ ಐನ್‍ಮನೆಗೆ ಮರು ಕಾಯಕಲ್ಪ ನೀಡಲು ಉದ್ದೇಶಿಸಿದ ಕುಟುಂಬದ ಸದಸ್ಯರು ಹಳೇ ಮನೆ ಶೈಲಿಗೆ ಯಾವದೇ ಚ್ಯುತಿ ಬಾರದಂತೆ ಮಣ್ಣಿನ ಗೋಡೆಗೆ ಬದಲಾಗಿ ಕಲ್ಲಿನ ಗೋಡೆ ನಿರ್ಮಿಸಿ ಹಾಳಾದ ಮರವನ್ನು ಮಾತ್ರ ಬದಲಿಸಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಐನ್‍ಮನೆ ನಿರ್ಮಿಸಿ ಅದಕ್ಕೆ ಆಧುನಿಕ ಸ್ಪರ್ಶ ನೀಡುವದರ ಮೂಲಕ ಜಿಲ್ಲೆಗೆ ಮಾದರಿ ಎನಿಸಿದ್ದಾರೆ.

ಈ ವಿಶೇಷ ಸಂದರ್ಭದಲ್ಲಿ 800 ವರ್ಷಗಳಿಂದೀಚೆ ಕುಟುಂಬಸ್ಥ ರೊಂದಿಗಿನ ನೆಂಟಸ್ತಿಕೆಯನ್ನು ಗುರುತಿಸಿ ಅವರನ್ನು ಆಹ್ವಾನಿಸಿ, ಸತ್ಕರಿಸಿ ಸಂಬಂಧವನ್ನು ಮತ್ತೆ ಬೆಸೆಯುವ ಮೂಲಕ ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ಇದರ ಪ್ರಯುಕ್ತ ನಡೆದ ಸಮಾರಂಭದಲ್ಲಿ ಕುಟುಂಬದ ಅತಿಥಿಯಾಗಿ ಆಗಮಿಸಿ ಮಾತನಾಡಿದ ಪೆÇ್ರ. ಬಿದ್ದಾಟಂಡ ಪೆÇನ್ನಪ್ಪ, ಹುತ್ತರಿ - ಕೈಲ್ ಪೆÇೀಳ್ದ್ ಕಾರ್ಯಕ್ರಮದಂತೆ ವರ್ಷಂಪ್ರತಿ ಐನ್‍ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು. ಯಾವದಕ್ಕೂ ಮಿತಿ ಮೀರಿದರೆ ಆಪತ್ತು ಖಂಡಿತ. ದುರಭಿಮಾನ ಮತ್ತು ದುರಹಂಕಾರ ಬಿಟ್ಟರೆ ಮಾತ್ರ ವ್ಯಕ್ತಿಯ ಏಳಿಗೆ ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಅತಿಥಿಗಳಾದ ಬೊಳಿಯಾಡಿರ ರಾಜಾ ಸೋಮಣ್ಣ, ಮಾತಂಡ ಅರುಣ್, ಬಾದುಮಂಡ ಕಾಮವ್ವ, ಕನ್ನಂಬಿರ ಚಂಗಪ್ಪ, ಕಲಿಯಂಡ ಕಾಳಪ್ಪ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಮತ್ತಿತರರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಡ್ಯೋಳಂಡ ಕುಟುಂಬದ ಪಟ್ಟೇದಾರ ನಾಣಯ್ಯ ವಹಿಸಿದ್ದರು.

ಕುಂಡ್ಯೋಳಂಡ ಕಾವೇರಿ ಪೆಮ್ಮಯ್ಯ ಪ್ರಾರ್ಥನೆ, ಕುಂಡ್ಯೋಳಂಡ ಗಣೇಶ್ ಮುತ್ತಪ್ಪ ಸ್ವಾಗತಿಸಿ, ಕಡೇಮಾಡ ರಾಣಿ ತಿಮ್ಮಯ್ಯ ನಿರೂಪಿಸಿದರು. ಕಾರ್ಯಕ್ರಮದ ಪ್ರಯುಕ್ತ ಯುವತಿಯರಿಂದ ಉಮ್ಮತ್ತಾಟ್ ಪ್ರದರ್ಶನ ನಡೆಯಿತು.

-ಪಿ.ವಿ.ಪ್ರಭಾಕರ್