ವೀರಾಜಪೇಟೆ, ಅ. 31: ಕಾಕೋಟುಪರಂಬು ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮೈದಾದಲ್ಲಿ ನಡೆಯುತ್ತಿರುವ 4ನೇ ವರ್ಷದ ನಾಕೌಟ್ ಹಾಕಿ ಪಂದ್ಯಾಟದ ಅಂತಿಮ ಹಣಾಹಣಿ ತಾ. 1ರಂದು (ಇಂದು) ವೀರಾಜಪೇಟೆ ಟವರ್ಸ್ ಸ್ಪೋಟ್ರ್ಸ್ ಕ್ಲಬ್ ಹಾಗೂ ಹಾತೂರು ಸ್ಪೋಟ್ರ್ಸ್ ಕ್ಲಬ್‍ಗಳ ನಡುವೆ ಅಪರಾಹ್ನ 2 ಗಂಟೆಗೆ ನಡೆಯಲಿದೆ.

ಇಂದು ನಡೆದ ಸೆಮಿಫೈನಲ್ಸ್‍ನಲ್ಲಿ ವೀರಾಜಪೇಟೆ ಟವರ್ಸ್ ಕ್ಲಬ್ 3-1 ಗೋಲುಗಳಿಂದ ಮಡಿಕೇರಿ ಚಾರ್ಮರ್ಸ್ ತಂಡವನ್ನು ಮಣಿಸಿತು. ಆರಂಭದಿಂದಲೇ ಸಂಘಟಿತ ಹೋರಾಟಕ್ಕೆ ಒತ್ತು ನೀಡಿದ ಟವರ್ಸ್ ತಂಡಕ್ಕೆ ಗೆಲುವು ಸುಲಭವಾಯಿತು. ಟವರ್ಸ್ ತಂಡದ ನಾಣಯ್ಯ (25,34ನಿ), ರಾಹಿಲ್ (59ನಿ) ಗೋಲು ದಾಖಲಿಸದರೆ ಪರಾಜಿತ ತಂಡದ ಕಿರುಬ ಶಂಕರ್ (21ನಿ)ದಲ್ಲಿ ಬಾರಿಸಿ ಏಕೈಕ ಗೋಲಿಗೆ ತೃಪ್ತಿ ಪಟ್ಟು ಕೊಳ್ಳಬೇಕಾಯಿತು.

ಹಾತೂರು ಸ್ಫೋಟ್ರ್ಸ್ ಕ್ಲಬ್ ತಂಡವು 1-0 ಗೋಲಿನಿಂದ ವೀರಾಜಪೇಟೆ ಕೊಡವ ಸಮಾಜದ ಸ್ಪೋಟ್ಸ್ ಅಂಡ್

ರಿಕ್ರಿಯೇಷನ್ ಕ್ಲಬ್ ತಂಡವನ್ನು ಪ್ರಯಾಸದಿಂದ ಸೋಲಿಸಿತು. ಇದೇ ಮೊದಲ ಬಾರಿಗೆ ಪ್ರವೇಶ ಪಡೆದ ಕೊಡವ ಸಮಾಜ ತಂಡವು ಆರಂಭದಿಂದಲೇ ಉತ್ತಮವಾಗಿ ಆಡಿದರು ಗೆಲುವಿನ ದಡ ಸೇರುವಲ್ಲಿ ಎಡವಿದರು. ಡಿ ಆವರಣದಲ್ಲಿ ಅನೇಕ ಅವಕಾಶಗಳನ್ನು ಕೈಚೆಲ್ಲಿದ ಕಾರಣ ಹಾತೂರು ತಂಡಕ್ಕೆ ವರದಾನವಾಯಿತು. ಹಾತೂರು ತಂಡದ ಶಾನ್ 14 ನಿಮಿಷದಲ್ಲಿ ಬಾರಿಸಿದ ಏಕೈಕ ಗೋಲು ಫೈನಲ್ ತಲಪಲು ಕಾರಣವಾಯಿತು.

ಪಂದ್ಯಾಟದ ತೀರ್ಪುಗಾರರಾಗಿ ಕೊಕ್ಕಂಡ ರೋಷನ್, ಕಾಟ್‍ಮಣಿಯಂಡ ಉಮೇಶ್, ಮೂಕಚಂಡ ನಾಚಪ್ಪ, ಚೋಯಮಾಡಂಡ ಚಂಗಪ್ಪ, ತಾಂತ್ರಿಕ ಸಮಿತಿಯಲ್ಲಿ ಕುಪ್ಪಂಡ ದಿಲನ್, ಮಳವಂಡ ಅಯ್ಯಪ್ಪ, ತಾಂತ್ರಿಕ ನಿರ್ದೇಶಕರಾಗಿ ಮೂಳೆರ ಪೂವಯ್ಯ ಕಾರ್ಯ ನಿರ್ವಹಿಸಿದರು.

ಇದೇ ಸಂದರ್ಭದಲ್ಲಿ ಕಾಕೋಟುಪರಂಬು ಗ್ರಾಮ ಪಂಚಾಯಿತಿ ಹಾಗೂ ಕಾಕೋಟುಪರಂಬು ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್‍ನ ಸಹಯೋಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. 100ಕ್ಕೂ ಅಧಿಕ ಜನರು ಶಿಬಿರದಲ್ಲಿ ಭಾಗವಹಿಸಿದ್ದರು.

ಸಮಾರೋಪ: ಪಂದ್ಯಾಟದ ಫೈನಲ್ ಪಂದ್ಯಾಟವು ಅಪರಾಹ್ನ 2 ಗಂಟೆಗೆ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ಕಾಕೋಟುಪರಂಬು ಸ್ಫೋಟ್ರ್ಸ್ ಅಂಡ್ ರಿಕ್ರೀಯೇಷನ್ ಕ್ಲಬ್‍ನ ಅಧ್ಯಕ್ಷ ಮೇವಡ ಚಿಣ್ಣಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಮೈಸೂರು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯೆ ಶಾಂತೇಯಂಡ ವೀಣಾ ಅಚ್ಚಯ್ಯ, ಮಂಡೇಪಂಡ ಸುನೀಲ್ ಸುಬ್ರಮಣಿ, ಹಾಕಿ ಕೂರ್ಗ್‍ನ ಕಾರ್ಯದರ್ಶಿ ಪಳಂಗಂಡ ಲವಕುಮಾರ್, ಕ್ಲಬ್ ಮಹೀಂದ್ರದ ರೆಸಾರ್ಟ್ ವ್ಯವಸ್ಥಾಪಕ ಸಪ್ನಾ ಕುಮಾರ್‍ದಾಸ್ ಉಪಸ್ಥಿತಲಿರುವರು.