*ಗೋಣಿಕೊಪ್ಪಲು, ಆ. 21: ಕರ್ನಾಟಕ ನಾಯರ್ ಸೊಸೈಟಿಯ ಗೋಣಿಕೊಪ್ಪಲು ಶಾಖೆಯ ಮಹಾಸಭೆ ಇಲ್ಲಿನ ಆರ್.ಎಂ.ಸಿ. ಸಂಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಸಂಜೀವ್ ಅಧ್ಯಕ್ಷತೆಯಲ್ಲಿ ಮೈಸೂರು ಶಾಖೆಯ ಬಾಲನ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಸಮಾಜದ ಒಳಿತಿಗಾಗಿ ಸಂಘಟನೆಯನ್ನು ಬಲಗೊಳಿಸಬೇಕು ಎಂದು ಕರೆ ನೀಡಿದರು. ಖಜಾಂಚಿ ಪಿ. ಭಾಸ್ಕರ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ವಾರ್ಷಿಕ ವರದಿ ಬಿ. ಅಜಿತ್ ವಾಚಿಸಿದರು. ಈ ಸಂದರ್ಭ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಕೆ.ಬಿ. ಸಂಜೀವ್, ಉಪಾಧ್ಯಕ್ಷರಾಗಿ, ಪಿ.ಜಿ. ಪವಿತ್ರನ್, ಪ್ರಧಾನ ಕಾರ್ಯದÀರ್ಶಿ ಅಜಿತ್, ಸಹ ಕಾರ್ಯದರ್ಶಿ ಮೋಹನ್, ಕೋಶಾಧಿಕಾರಿ ಪಿ. ಭಾಸ್ಕರನ್, ಸಹಕೋಶಾಧಿಕಾರಿ ಜಿ. ಮುಕುಂದನ್, ನಿರ್ದೇಶಕರಾಗಿ ವೇಣುಗೋಪಾಲ್ ಮೇನನ್, ಪಿ.ವಿ. ಚಂದ್ರನ್, ಸದಸ್ಯರಾಗಿ ಕೆ. ಶ್ರೀಧರನ್, ಸುರೇಶ್ ಬಾಬು, ರಾಧಕೃಷ್ಣ, ಪ್ರದೀಪ್, ಎನ್.ಸಿ. ಶಶಿಕುಮಾರ್, ಪಿ.ಎನ್. ಮೋಹನ್, ಎಂ.ಜಿ. ಭರತ್ ಕುಮಾರ್, ಎಂ.ಎನ್. ರಾಧಕೃಷ್ಣ, ಭಾಸ್ಕರ್ ಕೃಪ, ಸಿ.ಕೆ. ಕಣ್ಣನ್, ಎಂ.ಕೆ. ಕೃಷ್ಣ, ಪಿ. ರಾಧಕೃಷ್ಣ, ಆರ್. ಪ್ರೇಮ್‍ಚಂದ್ರ. ಕೆ.ಬಿ. ಕೃಷ್ಣ. ಸಿ.ಕೆ. ವೇಣು, ಎ.ಕೆ. ಸುಬ್ರಮಣಿ, ಎನ್.ಆರ್. ರಾಜ, ಸುರೇಶ್ ಕುಮಾರ್ ಆಯ್ಕೆಯಾಗಿದ್ದಾರೆ.