ಗೋಣಿಕೊಪ್ಪಲು, ಅ. 30: ಪೆÇನ್ನಂಪೇಟೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡರ ಬಣ) ವತಿಯಿಂದ 5ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಲಾಗುವದು ಎಂದು ಪೆÇನ್ನಂಪೇಟೆ ಹೋಬಳಿ ಘಟಕದ ಅಧ್ಯಕ್ಷ ಟಿ.ಎಸ್.ಪುಟ್ಟಸ್ವಾಮಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 1 ರಂದು ಪೆÇನ್ನಂಪೇಟೆ ಮಹಿಳಾ ಸಮಾಜ ಮುಂಭಾಗದಿಂದ ಶ್ರೀ ರಾಮಕೃಷ್ಣ ಶಾರದಾಶ್ರಮದವರೆಗೆ ಕನ್ನಂಡಾಂಬೆಯ ಮೆರವಣಿಗೆ. ಹೂವಿನ ಅಲಂಕೃತ ಕನ್ನಡಮಾತೆಯ ರಥ, ಕಳಸ ಹೊತ್ತ ಮಹಿಳೆಯರು, ವೀರಗಾಸೆ. ಡೊಳ್ಳುಕುಣಿತ, ಮಕ್ಕಳ ಪೂಜಾ ಕುಣಿತ ಮತ್ತು ಇತರೆ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆ ಬೆಳಿಗ್ಗೆ 10 ಗಂಟೆಗೆ ಆರಂಭಗೊಳ್ಳಲಿದೆ. ಪೆÇನ್ನಂಪೇಟೆ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಪೆÇನ್ನಂಪೇಟೆ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಭಾಕಾರ್ಯಕ್ರಮ ಜರುಗಲಿದ್ದು, ಸರ್ಕಾರಿ ಶಾಲೆಯ 7 ನೇ ತರಗತಿ ಮತ್ತು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ತಲಾ ಇಬ್ಬರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ.

ಕನ್ನಡಾಂಬೆಯ ಮೆರವಣಿಗೆಯನ್ನು ಪೆÇನ್ನಂಪೇಟೆ ಪೆÇಲೀಸ್ ಉಪನಿರೀಕ್ಷಕ ಜಯರಾಮ್ ಮತ್ತು ಗೌರವಾಧ್ಯಕ್ಷ( ಕರವೇ) ಬಿ.ಎಸ್.ಸುಂದರ್ ಉದ್ಘಾಟಿಸಲಿದ್ದಾರೆ.

ಕರವೇ ಹೋಬಳಿ ಅಧ್ಯಕ್ಷ ಟಿ.ಎಸ್. ಪುಟ್ಟಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜರುಗುವ ಸಭಾಕಾರ್ಯಕ್ರಮದಲ್ಲಿ ಕರವೇ ಜಿಲ್ಲಾಧ್ಯಕ್ಷ ವೆಂಕಟೇಶ ಪೂಜಾರಿ, ವೀರಾಜಪೇಟೆ ತಾಲೂಕು ಅಧ್ಯಕ್ಷ ವಿ.ಬಿ. ರುದ್ರಪ್ಪ, ಕರವೇ ತಾಲ್ಲೂಕು ಕಾನೂನು ಸಲಹೆಗಾರ ವಿ.ಜಿ. ಮಂಜುನಾಥ್, ಪೆÇನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ, ಗ್ರಾ.ಪಂ.ಉಪಾಧ್ಯಕ್ಷೆ ಮಂಜುಳಾ ಸುರೇಶ್, ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ .ಪಾಂಡು ಪಾಲ್ಗೊಳ್ಳಲಿದ್ದಾರೆ.

ಮುಖ್ಯ ಭಾಷಣಕಾರರಾಗಿ ಗೋಣಿಕೊಪ್ಪಲು ಪೆÇಲೀಸ್ ವೃತ್ತ ನಿರೀಕ್ಷಕ ಪಿ.ಕೆ. ರಾಜು, ಅರಣ್ಯ ಕಾಲೇಜು ಪ್ರಾಧ್ಯಾಪಕ ಅಶೋಕ ಬಿ. ದಿವಕರ ಅವರು ದಿನದ ಮಹತ್ವ ಕುರಿತು ಮಾತನಾಡಲಿದ್ದಾರೆ. ಕರವೇ ಕಾರ್ಯದರ್ಶಿ ಪಿ.ಟಿ. ಸುರೇಶ್ ವರದಿ ವಾಚನ ಹಾಗೂ ಸಭಾ ಕಾರ್ಯಕ್ರಮದ ನಂತರ ಸಾಮೂಹಿಕ ಭೋಜನ ಏರ್ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಇದೇ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐವರು ಸಮಾಜಸೇವಕರಿಗೆ ಸನ್ಮಾನ ಕಾರ್ಯಕ್ರಮವಿದೆ.

ಗೋಷ್ಠಿಯಲ್ಲಿ ತಾಲೂಕು ಕರವೇ ಅಧ್ಯಕ್ಷ ವಿ.ಬಿ. ರುದ್ರಪ್ಪ, ಮಾಜಿ ಅಧ್ಯಕ್ಷ ಹೆಚ್.ಎಸ್. ಮಹೇಶ್ ಮತ್ತು ಹೋಬಳಿ ಘಟಕದ ಕಾರ್ಯದರ್ಶಿ ಪಿ.ಟಿ. ಸುರೇಶ್ ಇದ್ದರು.