ಜಬಲ್ಪುರ-ಮಧ್ಯಪ್ರದೇಶ, ಜೂ. 16: ವಾಟ್ಸಾಪ್‍ನಲ್ಲಿ ಸೋನಿಯಾ ಗಾಂಧಿ ಪಾತ್ರೆ ತೊಳೆಯುವ ಆಕ್ಷೇಪಾರ್ಹ ಫೆÇೀಟೋ ಕಾಣಿಸಿಕೊಂಡ ಕಾರಣ ಭುಗಿಲೆದ್ದ ಗುಂಪು ಘರ್ಷಣೆಗೆ ಓರ್ವ ಬಲಿಯಾಗಿ ಇತರ ಐದು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಇಂದಿಲ್ಲಿ ನಡೆದಿದೆ. ಗುಂಪು ಘರ್ಷಣೆಯಲ್ಲಿ ತೀವ್ರವಾಗಿ ಗಾಯಗೊಂಡ ಉಮೇಶ್ ವರ್ಮಾ ಎಂಬವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕೊನೆಯುಸಿರೆಳೆದರೆಂದು ನಗರ ಪ್ರದೇಶ ಪೆÇಲೀಸ್ ಸುಪರಿಂಟೆಂಡೆಂಟ್ ಇಂದ್ರಜಿತ್ ಬಲ್ಸಾವರ್ ತಿಳಿಸಿದ್ದಾರೆ.
ವಾಟ್ಸಾಪ್‍ನಲ್ಲಿ ಸೋನಿಯಾ ಪಾತ್ರೆ ತೊಳೆಯುವ ಫೆÇೀಟೋ ಕಾಣಿಸಿಕೊಂಡ ಹಿನ್ನೆಲೆ ಭುಗಿಲೆದ್ದ ವಿವಾದದಲ್ಲಿ ಕಾಂಗ್ರೆಸ್ ಕಾಪೆರ್Çರೇಟರ್ ಜತಿನ್ ರಾಜ್ ಅವರ ಗುಂಪು ದೂರು ಕೊಡಲು ವಿಜಯ ನಗರ ಪೆÇಲೀಸ್ ಠಾಣೆಗೆ ಹೋಗಿತ್ತು. ಆಗ ಅದೇ ವೇಳೆ ಎದುರಾಳಿ ಗುಂಪು ಕೂಡ ದೂರು ನೀಡಲು ಅಲ್ಲಿಗೆ ಬಂದಿತ್ತು. ಆ ಸಂದರ್ಭ ಉಭಯ ಗುಂಪುಗಳಲ್ಲಿದ್ದವರು ಠಾಣೆಯೊಳಗೇ ಪರಸ್ಪರ ಹೊಡೆದಾಡಿಕೊಂಡು ಚೂರಿ ಮುಂತಾದ ಮಾರಕಾಯುಧಗಳನ್ನು ಬಳಸಿದರು.