ಮಡಿಕೇರಿ, ನ. 19: ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಇವರ ವತಿಯಿಂದ ಮೈಕ್ರೋ ಕ್ರೆಡಿಟ್ ಯೋಜನೆಯಡಿ ಸಾಲ ಸೌಲಭ್ಯ ಚೆಕ್ ಅನ್ನು ಫಲಾನುಭವಿಗಳಿಗೆ ಶಾಸಕರುಗಳಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ಅವರು ನಗರದ ಕೋಟೆಯಲ್ಲಿರುವ ತಮ್ಮ ಕಚೇರಿಯಲ್ಲಿ ಶುಕ್ರವಾರ ವಿತರಿಸಿದರು.

ಮೈಕ್ರೋ ಕ್ರೆಡಿಟ್ ಯೋಜನೆಯಡಿ 6 ಜನ ಫಲಾನುಭವಿಗಳಿಗೆ ತಲಾ ರೂ. 15 ಸಾವಿರದಂತೆ ಒಟ್ಟು ರೂ. 90 ಸಾವಿರಗಳ ಚೆಕ್ಕನ್ನು ಶಾಸಕರಾದ ಅಪ್ಪಚ್ಚು ರಂಜನ್ ಅವರು ಹಾಗೂ 10 ಜನ ಫಲಾನುಭವಿಗಳಿಗೆ ರೂ. 15 ಸಾವಿರದಂತೆ ಒಟ್ಟು 1 ಲಕ್ಷದ 50 ಸಾವಿರಗಳ ಚೆಕ್ಕನ್ನು ಶಾಸಕರದ ಕೆ.ಜಿ. ಬೋಪಯ್ಯ ಫಲಾನುಭವಿಗಳಿಗೆ ವಿತರಿಸಿದರು.

ಈ ಸಂದರ್ಭ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಕುಮಾರ್ ಇದ್ದರು.