ವೀರಾಜಪೇಟೆ, ಸೆ. 10: ಪಟ್ಟಣದ ಸಂತ ಅನ್ನಮ್ಮ ದೇವಾಲಯದಲ್ಲಿ ವಿಜೃಂಭಣೆಯಿಂದ ಮರಿಯ ಜಯಂತಿಯನ್ನು ಆಚರಿಸಲಾಯಿತು. ಮೈಸೂರು ಡಯಾಸಿಸ್ನ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರೆ.ಫಾ. ಕೆ.ಎ. ವಿಲಿಯಂ, ಸಂತ ಅನ್ನಮ್ಮ ದೇವಾಲಯದ ಪ್ರಧಾನ ಗುರುಗಳಾದ ರೆ.ಫಾ. ಮದಲೈಮುತ್ತು ಹಾಗೂ ಸಹಗುರುಗಳು ಧಾರ್ಮಿಕ ಪೂಜೆಯ ನೇತೃತ್ವವನ್ನು ವಹಿಸಿದ್ದರು. ದಿವ್ಯ ಬಲಿಪೂಜೆಯಲ್ಲಿ ಭಾಗವಹಿಸಿದ್ದ ಕ್ರೈಸ್ತ ಬಾಂಧವರು ಪುಷ್ಪಾರ್ಚನೆ ಸಲ್ಲಿಸಿದರು.