ವೀರಾಜಪೇಟೆ, ಡಿ. 22: ಕಂಡಂಗಾಲ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ 4ನೇ ವರ್ಷದ ಜಿಲ್ಲಾ ಮಟ್ಟದ ಚಂದುರ ಕಮಲ ಸ್ಮಾರಕ ಲೋಟಸ್ ಕಪ್ ನಾಕೌಟ್ ಹಾಕಿ ಪಂದ್ಯಾಟದಲ್ಲಿ ಬೇರಳಿನಾಡು ಗ್ರೀನ್, ಎಂಆರ್‍ಎಫ್ ಮೂರ್ನಾಡ್, ಈವೈಸಿ ಬೇಗೂರ್, ಡ್ರಿಬಲರ್ಸ್ ಕುತ್ತುನಾಡು ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿವೆ.
ಬೇರಳಿನಾಡು ಗ್ರೀನ್ ತಂಡವು ಗೋಣಿಕೊಪ್ಪದ ಬಿಬಿಸಿ ತಂಡವನ್ನು 3-2 ಗೋಲುಗಳಿಂದ ಪರಾಭವಗೊಳಿಸಿತು. ಬೇರಳಿನಾಡು ಗ್ರೀನ್ ತಂಡದ ಪರ ಮಹೇಂದ್ರ(29ನಿ), ಭರತ್(60ನಿ) ಬಿಪಿನ್(69ನಿ), ಬಿಬಿಸಿ ತಂಡದ ಪರ ಸುಬ್ಬಯ್ಯ(19,45ನಿ)ದಲ್ಲಿ ಗೋಲು ಬಾರಿಸಿದರು,
ಎಂಆರ್‍ಎಫ್ ಮೂರ್ನಾಡು ತಂಡವು ಅಮ್ಮತ್ತಿಯ ಈಗಲ್ಸ್ ತಂಡವನ್ನು 6-5 ಗೋಲುಗಳಿಂದ ಪೆನಾಲ್ಟಿ ಶೂಟೌಟ್‍ನಲ್ಲಿ ಪರಾಭವಗೊಳಿಸಿತು. ನಿಗದಿತ ಅವದಿಯಲ್ಲಿ ಎರಡು ತಂಡಗಳು ತಲಾ 2-2 ಗೋಲುಗಳಿಂದ ಸಮಬಲ ಸಾಧಿಸಿತು. ಅಮ್ಮತ್ತಿ ಈಗಲ್ಸ್ ಪರ ಡ್ಯಾನಿ (41ನಿ), ಕಾರ್ಯಪ್ಪ (61ನಿ), ಪೆನಾಲ್ಟಿ ಶೂಟೌಟ್‍ನಲ್ಲಿ ಕಾರ್ಯಪ್ಪ, ಆಕಾಶ್, ದಿನೇಶ್, ಎಂಆರ್‍ಎಫ್ ಮೂರ್ನಾಡು ತಂಡದ ಪರ ಮೋಕ್ಷಿತ್(38ನಿ), ಬೆಳ್ಯಪ್ಪ(54ನಿ), ಪೆನಾಲ್ಟಿ ಶೂಟೌಟ್‍ನಲ್ಲಿ ಬೆಳ್ಳಿಯಪ್ಪ, ದಿಕ್ಷೀತ್, ಪಳಂಗಪ್ಪ, ವಿಪನ್ ಗೋಲು ದಾಖಲಿಸಿದರು.
ಈವೈಸಿ ಬೇಗೂರು 2-0 ಗೋಲುಗಳಿಂದ ಕುತ್ತುನಾಡು ಡ್ರಿಬ್‍ಲರ್ಸ್ ತಂಡವನ್ನು ಮಣಿಸಿತು. ಈವೈಸಿ ಪರ ನಿರಂಜನ್ (27,38ನಿ) ದಲ್ಲಿ ಗೋಲು ಬಾರಿಸಿದರು.
ಕುತ್ತುನಾಡು ಡ್ರಿಬಲರ್ಸ್ ತಂಡವು ವೀರಾಜಪೇಟೆ ಟವರ್ಸ್ ತಂಡವನ್ನು 2-0 ಗೋಲುಗಳಿಂದ ಪರಾಭವ ಗೊಳಿಸಿತು. ಡ್ರಿಬಲರ್ಸ್ ತಂಡದ ಪರ ಸಂತೋಷ್ (42ನಿ), ತಮ್ಮಯ್ಯ (45ನಿ)ದಲ್ಲಿ ಗೋಲು ದಾಖಲಿಸಿದರು.
ಪಂದ್ಯಾಟದ ತೀರ್ಪುಗಾರರಾಗಿ ನೆಲ್ಲಮಕ್ಕಡ ಪವನ್, ಬೊಳ್ಳಚಂಡ ನಾಣಯ್ಯ, ಐನಂಡ ಲಾಲ ಅಯ್ಯಣ್ಣ, ಮೂಕಚಂಡ ನಾಚಪ್ಪ, ಕೋಡಿಮಣಿಯಂಡ ಗಣಪತಿ, ಮೂಳೇರ ಪೂವಯ್ಯ, ಚೋಯಮಾಡಂಡ ಚಂಗಪ್ಪ, ಕೊಕ್ಕಂಡ ರೋಷನ್, ತಾಂತ್ರಿಕ ಸಮಿತಿಯಲ್ಲಿ ಮೇಕತಂಡ ಟೀಶಾ ಬೋಪಯ್ಯ, ವಿನೋದ್ ಜೆಸಿಬಿ, ಐಪುಮಣಿಯಂಡ ಗಣಪತಿ, ತಾಂತ್ರಿಕ ನಿರ್ಧೇಶಕರಾಗಿ ಕುಪ್ಪಂಡ ದಿಲನ್ ಕಾರ್ಯ ನಿರ್ವಹಿಸಿದರು.