ಮಡಿಕೇರಿ, ನ. 19: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನೀಡಲ್ಪಡುವ 2015ನೇ ಸಾಲಿನ ಗೌರವ ಪ್ರಶಸ್ತಿಗೆ ವಿದ್ವಾನ್ ಟಿ.ಜಿ ಮುಡೂರು, ಲೇಖಕಿ ಹಾಗೂ ಹಿರಿಯ ರಂಗ ಕಲಾವಿದೆ ಗೀತಾ ಮೋಂಟಡ್ಕ ಮತ್ತು ಬರಹಗಾರ್ತಿ ಜಾನಕಿ ಬೆಳ್ಯಪ್ಪ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ತಾ. 26 ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ತಾ. 26 ರಂದು ಸಂಜೆ 4 ಗಂಟೆಗೆ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಚಿವೆ
(ಮೊದಲ ಪುಟದಿಂದ) ಉಮಾಶ್ರೀ ಉದ್ಘಾಟಿಸಲಿದ್ದಾರೆ. ನವದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾನಿಲಯದ ಭಾರತೀಯ ಭಾಷೆಗಳ ಅಧ್ಯಯನ ವಿಭಾಗದ ಕನ್ನಡ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ಪ್ರಶಸ್ತಿ ಪ್ರಧಾನ ಭಾಷಣ ಮಾಡಲಿದ್ದಾರೆ. ಕೇಂದ್ರ ಸಾಂಖ್ಯಿಕ ಯೋಜನಾ ಅನುಷ್ಠಾನದ ಸಚಿವ ಡಿ.ಪಿ. ಸದಾನಂದ ಗೌಡರು ಪುಸ್ತಕ ಬಿಡುಗಡೆಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಂಖ್ಯಿಕ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಂ, ಅರಣ್ಯ ಸಚಿವÀ ಬಿ. ರಮಾನಾಥ್ ರೈ, ವಸತಿ ಸಚಿವ ಎಂ. ಕೃಷ್ಣಪ್ಪ, ಶಾಸಕರುಗಳಾದ ಕೆ.ಜಿ. ಬೋಪಯ್ಯ, ವಾಸು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕ ಕೆ.ಎ. ದಯಾನಂದ, ಜಂಟಿ ನಿರ್ದೇಶಕÀ ಮಲ್ಲಿಕಾರ್ಜುನ ಸ್ವಾಮಿ, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಅಧ್ಯಕ್ಷÀ ಪದ್ಮಾ ಕೋಲ್ಚಾರ್, ಬೆಂಗಳೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ಅಮ್ಮವನ ವಾಸು, ಬಿಬಿಎಂಪಿ ಜಂಟಿ ಆಯುಕ್ತÀ ಪಾಣತ್ತಲೆ ಪಳಂಗಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸಂಜೆ 6 ಗಂಟೆಗೆ ನಡೆಯಲಿರುವ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಕಾವ್ಯ ಮತ್ತು ತಂಡದಿಂದ ಅರುಣೋದಯ ಕಲಾ ಪ್ರಕಾರ, ಶ್ರೀರಾಮ ಯುವಕ ಸಂಘದಿಂದ ಸಿದ್ಧವೇಷ, ಶಶಿಧರ ಮಾವಿನ ಕಟ್ಟೆ ಅವರಿಂದ ಅರೆಭಾಷೆ ಹಾಡ್, ಬೆಂಗಳೂರಿನ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಸದಸ್ಯರಿಂದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ ಯೆಂದು ಕೊಲ್ಯದ ಗಿರೀಶ್ ಮಾಹಿತಿ ನೀಡಿದರು.
ಪ್ರಶಸ್ತಿ ವಿಜೇತರಾಗಿರುವ ಟಿ.ಜಿ. ಮುಡೂರು ಅವರು ಹಿರಿಯ ತಲೆಮಾರಿನ ಸಾಹಿತ್ಯ ಸೇವಾಸಕ್ತರಾಗಿ ದ್ದಾರೆ, ಸೃಜನ ಶೀಲ ಬರಹಗಾರ ಹಾಗೂ ಸಂಘಟಕರಾಗಿರುವ ಇವರಿಗೆ ಈಗಾಗಲೆ ತಾಲೂಕು , ಜಿಲ್ಲಾ ಮಟ್ಟದಲ್ಲಿ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ. ಇದೀಗ ಅರೆ ಭಾಷಾ ಅಕಾಡೆಮಿಯ 2015ರ ಪ್ರಶಸ್ತಿಗೂ ಟಿ.ಜಿ. ಮುಡೂರು ಅವರು ಭಾಜನರಾಗಿದ್ದಾರೆ.
ರಂಗ ನಿರ್ದೇಶಕಿ, ನಟಿ, ಗಾಯಕಿ, ನಾಟಕ ರಚನೆಕಾರ್ತಿ, ಯಕ್ಷಗಾನ ಕಲಾವಿದೆ, ಅಣಕು ಕಲಾವಿದೆ, ಕÀನ್ನಡ ಹಾಗೂ ಅರೆಭಾಷೆ ಕನ್ನಡದ ಲೇಖಕಿ, ಕವಿ ಹೀಗೆ ಬಹುಮುಖ ಪ್ರತಿಭೆಯ ಗೀತಾ ಮೋಂಟಡ್ಕ ಅವರು ಪ್ರಸ್ತುತ ರಂಗಾಯಣ ಮೈಸೂರು ಇಲ್ಲಿ ಹಿರಿಯ ರಂಗಕಲಾವಿದೆಯಾಗಿ ಸೇವೆ ಸಲ್ಲಿಸುತ್ತಿದ್ದು, ಇದೀಗ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಸೇವೆ ಮತ್ತು ಸಾಧನೆ ಹಾಗೂ ಕೃತಿಗಳ ರಚನೆಗಾಗಿ ಮಡಿಕೆÉೀರಿಯ ಬೈತಡ್ಕ ಜಾನಕಿ ಬೆಳ್ಯಪ್ಪ ಅವರು ಕೂಡ ಅಕಾಡೆಮಿಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈಗಾಗಲೆ ಇವರು ಕೊಡಗಿನ ಗೌರಮ್ಮ ಪ್ರಶಸ್ತಿ, ಜಾನಪದ ಕ್ಷೇತ್ರದ ಸಾಧನೆಗಾಗಿ ಮಹಿಳಾ ಜಿಲ್ಲಾ ಪ್ರಶಸ್ತಿ , ಮಹಿಳಾ ರಾಜ್ಯ ಪ್ರಶಸ್ತಿ, ಕಾವ್ಯ ಶ್ರೀ ಪ್ರಶಸ್ತಿ, ಸುವರ್ಣ ಕರ್ನಾಟಕ ಪ್ರಶಸ್ತಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಚಾಲಕ ಡಾ. ಪೂವಪ್ಪ ಕಣಿಯೂರು, ಅಕಾಡೆಮಿ ಸದಸ್ಯರಾದ ಮಂದ್ರೀರ ಮೋಹನ್ದಾಸ್ ಮತ್ತು ಕುಡೆಕಲ್ ಸಂತೋಷ್ ಉಪಸ್ಥಿತರಿದ್ದರು.