ಸುಂಟಿಕೊಪ್ಪ, ನ. 19: ಬೋಯಿಕೇರಿ ಕಡಗದಾಳು ವಿಭಾಗದಲ್ಲಿ ನಿರಂತರವಾಗಿ ಸಂಚರಿಸಿಕೊಂಡು ಹಾದಿಹೋಕರಿಗೆ ವಾಹನಗಳಿಗೆ ಅಟ್ಟಾಡಿಸುತ್ತಿದ್ದ ಮರಿಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಆ ಮೂಲಕ ಈ ತಿಂಗಳು ಜಿಲ್ಲೆಯಲ್ಲಿ ಐದನೇ ಪುಂಡಾನೆ ಸೆರೆಯಾದಂತಾಗಿದೆ. ಬೋಯಿಕೇರಿಯ ಮಾಜಿ ಸಂಸದ ಎಫ್.ಎಂ. ಖಾನ್ ಅವರ ಕಾಫಿತೋಟ ಹಾಗೂ ಕಡಗದಾಳು ಕಾಫಿ ತೋಟಗಳಲ್ಲಿ ನಿರಂತರವಾಗಿ ಸುತ್ತಾಡಿಕೊಂಡು ಕೃಷಿಫಸಲನ್ನು ದ್ವಂಸಗೊಳಿಸುತ್ತ, ಹಾದಿಹೋಕರು
(ಮೊದಲ ಪುಟದಿಂದ) ಮತ್ತು ವಾಹನಗಳನ್ನು ಅಟ್ಟಾಡಿಸುತ್ತಾ ಭೀತಿ ಹುಟ್ಟಿಸಿದ್ದ 12 ರಿಂದ 15 ಪ್ರಾಯದ ಪುಂಡ ಕಾಡಾನೆಯನ್ನು ಸೆರೆಹಿಡಿಯಲು ತಾ. 18 ರಂದು ಮಡಿಕೇರಿ ಡಿ.ಎಫ್.ಓ ಏಡುಕೊಂಡಲು ನೇತ್ರತ್ವದಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಗಳು ಹಾಗೂ ಆನೆ ಕ್ಷೀಪ್ರ ಕಾರ್ಯಾಚರಣ ತಂಡವನ್ನು ರಚಿಸಲಾಗಿತ್ತು.
ಕೊಡಗರಹಳ್ಳಿಯ ಕೂರ್ಗ್ಹಳ್ಳಿ ತೋಟದಲ್ಲಿ ಮಧ್ಯಾಹ್ನ ವೇಳೆ ಪತ್ತೆಯಾಗಿದ್ದು ಸಾಕಾನೆಗಳಾದ ಅಭಿಮನ್ಯು, ಹರ್ಷ, ಗಜೇಂದ್ರ, ದ್ರೋಣ ಇವುಗಳೊಂದಿಗೆ ಮಾವುತರು ಹಾಗೂ ವೈದÀ್ಯರಾದ ಡಾ. ಉಮಾಶಂಕರ್ ಸಹಾಯಕ ವೆಂಕಟೇಶ್ ಅವರು ಕೂರ್ಗ್ಹಳ್ಳಿ ತೋಟದೊಳಗೆ ಮರಿಯಾನೆಗೆ ಅರವಳಿಕೆ ಚುಚ್ಚುಮದ್ದನ್ನು ಹಾರಿಸಿ ಸೆರೆಹಿಡಿಯುವಲ್ಲಿ ಂiÀiಶಸ್ವಿಯಾದರು.
ಕಾರ್ಯಾಚರಣೆ ಸಂದರ್ಭದಲ್ಲಿ ಮಾತನಾಡಿದ ಮಡಿಕೇರಿ ಡಿ.ಎಫ್.ಓ ಏಡುಕೊಂಡಲು ಈ ಪುಂಡಾನೆಯ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಅವರ ಆದೇಶದ ಮೇರೆಗೆ ಕೊಡಗಿನಲ್ಲಿ ಮಾನವ ಆನೆ ಸಂಘರ್ಷಕ್ಕೆ ಕಡಿವಾಣ ಹಾಕುವ ದಿಸೆಯಲ್ಲಿ ಕಳೆದ 10 ದಿನಗಳಿಂದ ದಿನದ 24 ಗಂಟೆಯು ಕಾರ್ಯಾಚರಣೆ ನಡೆಸುವ ಮೂಲಕ 4 ಕಾಡಾನೆಗಳನ್ನು ಸೆರೆಹಿಡಿದಿದ್ದು, ಇದೀಗ ಮತ್ತೊಂದು ಕಾಡಾನೆಯನ್ನು ಹಿಡಿಯುವ ಮೂಲಕ ಮೊದಲ ಬಾರಿಗೆ ಕಾಡಾನೆಯೊಂದನ್ನು ಹಿಡಿಯಲಾಗಿದೆ.
ಕಾರ್ಯಾಚರಣೆ ಸಂದರ್ಭ ಎ.ಸಿ.ಎಫ್. ಎಂ.ಎಸ್. ಚಿಣ್ಣಪ್ಪ, ಸುರೇಶ್, ಆರ್.ಎಫ್.ಓ. ನೆಹರು, ಡಿ.ಆರ್.ಎಫ್ ರಂಜನ್, ದೇವಯ್ಯ, ದೇವಿಪ್ರಸಾದ್, ಶಿವರಾಂ, ಶೈಲಜ, ಅರಣ್ಯ ರಕ್ಷಕರುಗಳಾದ ಪೂಣಚ್ಚ, ಮಂಜೇಗೌಡ, ರಾಜೇಶ್ವರಿ, ಸಿಬ್ಬಂದಿಗಳು ಹಾಗೂ ಕಾವಾಡಿಗಳು ಭಾಗಿಯಾಗಿದ್ದರು.