ಗೋಣಿಕೊಪ್ಪಲು, ಡಿ. 2: ತಾ. 4 ರಂದು ಗೋಣಿಕೊಪ್ಪ ಚಿನ್ನ-ಬೆಳ್ಳಿ ವರ್ತಕರ ಹಾಗೂ ಕೆಲಸಗಾರರ ಸಂಘದ ಸ್ವರ್ಣ ಭವನ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಗೌರವ ಅಧ್ಯಕ್ಷ ಎಂ.ಜಿ. ಗಜಾನನ ತಿಳಿಸಿದ್ದಾರೆ.

ಬೋಪಯ್ಯ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಚಿನ್ನ-ಬೆಳ್ಳಿ ವರ್ತಕರ ಹಾಗೂ ಕೆಲಸಗಾರರ ಸಂಘದ ಜಿಲ್ಲಾಧ್ಯಕ್ಷ ಕೆ.ಕೆ. ಶ್ರೀನಿವಾಸ್, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಉಪಸ್ಥಿತರಿರುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಳಿಗ್ಗೆ 6ಕ್ಕೆ ಗಣಪತಿ ಹೋಮ, 10.30ಕ್ಕೆ ಉದ್ಘಾಟನೆ ನಡೆಯಲಿದೆ ಎಂದರು.

ಹಲವು ವರ್ಷಗಳಿಂದ ಸಾರ್ವಜನಿಕ ವಿಭಾಗದಲ್ಲಿ ಕಲೆ, ಸಾಹಿತ್ಯ ಹಾಗೂ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಸಂಘವು ಸ್ವಂತ ಕಟ್ಟಡ ಉದ್ಘಾಟನೆಗೊಳ್ಳುತ್ತಿರುವದು ಸದಸ್ಯರಲ್ಲಿನ ಒಮ್ಮತವನ್ನು ತೋರಿಸುತ್ತಿದೆ. 60 ಸದಸ್ಯರನ್ನು ಹೊಂದಿರುವ ಸಂಘದ ಸದಸ್ಯರು ಸಾರ್ವಜನಿಕರಿಂದ ವಂತಿಗೆ ಸಂಗ್ರÀ್ರಹಿಸದೆ ನಿರ್ಮಿಸಿರುವದು ಹೆಮ್ಮೆಯ ವಿಚಾರ ಎಂದರು.

ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಗಜಾನನ ಸೇಠ್, ಉಪಾಧ್ಯಕ್ಷ ಎಂ.ಜಿ. ನಾರಾಯಣ, ಕಾರ್ಯದರ್ಶಿ ವಿ.ವಿ. ಜಿತೇಂದ್ರ ಹಾಗೂ ಖಜಾಂಚಿ ಕೆ.ಬಿ. ಪ್ರಶಾಂತ್ ಉಪಸ್ಥಿತರಿದ್ದರು.