ಮಡಿಕೇರಿ, ಜ. 24: ಸಮಾಜದಲ್ಲಿ ಶಾಂತಿ ಸೌಹಾರ್ದತೆಯ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಗಣರಾಜ್ಯೋತ್ಸವ ದಂದು ನಾಪೆÀÇೀಕ್ಲುವಿನಲ್ಲಿ ಸೌಹಾರ್ದ ಸಮ್ಮೇಳನ ಮತ್ತು ಸೌಹಾರ್ದ ಸಂದೇಶ ಜಾಥಾ ನಡೆಸಲು ಎಸ್ಕೆಎಸ್ ಎಸ್ಎಫ್ ಸಂಘಟನೆ ನಿರ್ಧರಿಸಿದೆಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ತಮ್ಲಿಖ್ ದಾರಿಮಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಈ ದೇಶದ ಪ್ರತಿಯೊಬ್ಬ ನಾಗರಿಕರು ಪರಸ್ಪರ ಪ್ರೀತಿ ಸೌಹಾರ್ಧತೆಯೊಂದಿಗೆ ಸಾಗಲು ಸಂವಿಧಾನವನ್ನು ಕ್ರಿಯಾತ್ಮಕವಾಗಿ ಬಳಸಿಕೊಳ್ಳಬೇಕು. ಈ ಹಿನ್ನೆಲೆ ಗಣರಾಜ್ಯೋತ್ಸವದಂದು ಸೌಹಾರ್ದ ತೆಯ ಸಂದೇಶವನ್ನು ಪಸರಿಸುವ ಚಿಂತನೆಯಡಿ ಕಾರ್ಯಕ್ರಮವನ್ನು ಆಯೋಜಿಸಿರುವದಾಗಿ ತಿಳಿಸಿದರು.
ತಾ. 26 ರಂದು ಮಧ್ಯಾಹ್ನ 3 ಗಂಟೆಗೆ ಎಮ್ಮೆಮಾಡಿನ ದರ್ಗಾ ಶರೀಫ್ನಲ್ಲಿ ಕೊಡಗು ಜಿಲ್ಲಾ ಸಮಸ್ತ ಖಾಝಿ ಎಂ. ಅಬ್ದುಲ್ಲಾ ಫೈಝಿ ಉಸ್ತಾದರ ನೆÉೀತೃತ್ವದಲ್ಲಿ ಝಿಯಾರತ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಸಂಜೆ 4 ಗಂಟೆಗೆ ನಾಪೋಕ್ಲುವಿನ ಪೆಟ್ರೋಲ್ ಬಂಕ್ನಿಂದ ಮಾರುಕಟ್ಟೆಯವರೆಗೆ ಸೌಹಾರ್ದ ಸಂದೇಶ ಜಾಥಾ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜಾಥಾದ ಬಳಿಕ ಮಾರುಕಟ್ಟೆಯ ಬಳಿ ಸೌಹಾರ್ದ ಸಂದೇಶ ಸಾರುವ ಮಾನವ ಸರಪಳಿ ನಡೆಯಲಿದೆ. ಕೊಡಗು ಜಿಲ್ಲಾ ಎಸ್ವೈಎಸ್ ಅಧ್ಯಕ್ಷ ವಿ.ಪಿ.ಎಸ್. ಮುತ್ತುಕೋಯ ತಂಞಳ್ ಅಧ್ಯಕ್ಷತೆ ವಹಿಸಿ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಕಾರ್ಯಕ್ರಮವನ್ನು ಎಸ್ಕೆಎಸ್ಎಸ್ಎಫ್ ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಎಂ. ಆರಿಫ್ ಫೈಝಿ ಉದ್ಘಾಟಿಸಲಿದ್ದಾರೆ. ಸಮ್ಮೇಳನದಲ್ಲಿ À ಅಬ್ದುಲ್ ಅಜೀಝ್ ದಾರಿಮಿ ಮುಖ್ಯ ಭಾಷಣ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಬಸವ ಪಟ್ಟಣದ ಶ್ರೀ ಬಸವಲಿಂಗ ಸ್ವಾಮೀಜಿ ಶುಶಾಂತಾಶ್ರಮ, ಕರ್ನಾಟಕ ವೇದ ವಿದ್ಯಾಲಯದ ಮಂಗಳೂರಿನ ರೆ.ಫಾ. ಫೆಡ್ರಿಕ್ ಅನಿಲ್ ಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ. ಕೊಡಗು ಮುಸ್ಲಿಂ ಸಮಾಜದ ಉಪಾಧ್ಯಕ್ಷ ಪಿ.ಎಂ. ಖಾಸಿಂ, ಸಿದ್ದಾಪÀÅರ ಎಸ್ಎಂಒ ಅಧ್ಯಕ್ಷರಾದ ಕೆ.ಯು. ಉಸ್ಮಾನ್ ಹಾಜಿ, ಕೆ.ಎ. ಯಾಕೂಬ್, ವಕ್ಫ್ ಮಂಡಳಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಎ.ಬಿ. ಉಮರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಮ್ಲಿಖ್ ದಾರಿಮಿ ತಿಳಿಸಿದರು.
ಗೋಷ್ಠಿಯಲ್ಲಿ ಎಸ್ಕೆಎಸ್ಎಸ್ಎಫ್ ಜಿಲ್ಲಾ ಅಧ್ಯಕ್ಷ ನೌಶಾದ್ ಫೈಝಿ, ಉಪಾಧ್ಯಕ್ಷ ಅಬ್ದುಲ್ ರಶೀದ್ ದಾರಿಮಿ, ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಆರಿಫ್ ಫೈಝಿ, ರಾಜ್ಯ ಸಮಿತಿ ಸದಸ್ಯ ಇಕ್ಬಾಲ್ ಮುಸ್ಲಿಯಾರ್ ಹಾಗೂ ನಿರ್ದೇಶಕ ವೈ.ಎಂ. ಉಮ್ಮರ್ ಫೈಝಿ ಉಪಸ್ಥಿತರಿದ್ದರು.