ಸೋಮವಾರಪೇಟೆ, ಸೆ. 12: ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಗಡಿಕಟ್ಟೆ ಸೇತುವೆ ಬಳಿ ರಸ್ತೆಗೆ ಆವರಿಸಿದ್ದ ಕಾಡು, ಗಿಡಗಂಟಿಗಳನ್ನು ಅಲ್ಲಿನ ಅಯ್ಯಪ್ಪ ಕಾಲೋನಿ ಗ್ರಾಮಸ್ಥರು ಹಾಗೂ ಸ್ಥಳೀಯರು ಕಡಿದು ಸ್ವಚ್ಛಗೊಳಿಸಿ ದರು. ಶ್ರಮದಾನದಲ್ಲಿ ಕೆ.ಕೆ. ರಘು, ಪಿ.ಕೆ. ಆನಂದ, ಇಸ್ಮಾಯಿಲ್, ಗಂಗಾಧರ, ಗಿರಿಧರ್, ವಿಜಯ್ ಮತ್ತಿತರು ಇದ್ದರು. ತಿರುವು ರಸ್ತೆ ಹಾಗೂ ಸೇತುವೆ ಇರುವದರಿಂದ ವಾಹನಗಳ ಅವಘಡ ತಪ್ಪಿಸುವ ಉದ್ದೇಶದಿಂದ ಕಾಡು ಕಡಿಯಲಾಗಿದೆ ಎಂದು ಆನಂದ್ ಹೇಳಿದರು.