ಸೋಮವಾರಪೇಟೆ, ಸೆ. 12: ತಾಲೂಕಿನ ಕಾನ್‍ಬೈಲ್ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಜಿ.ಕೆ. ಪಾರ್ವತಿ ಅವರನ್ನು ಸುಂಟಿಕೊಪ್ಪ ವಲಯ ಮಟ್ಟದ ಕ್ರೀಡಾಕೂಟದ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಉತ್ತಮ ಕ್ರೀಡಾಕೂಟ ಸಂಘಟನೆ ಮತ್ತು ಕಾರ್ಯದಕ್ಷತೆಯ ಹಿನ್ನೆಲೆಯಲ್ಲಿ ಶಿಕ್ಷಕಿಯನ್ನು ಗಣ್ಯರು ಸನ್ಮಾನಿಸಿದರು. ಅಧ್ಯಕ್ಷತೆಯನ್ನು ಎಸ್‍ಡಿಎಂಸಿ ಅಧ್ಯಕ್ಷೆ ಪ್ರೇಮಾ ವಹಿಸಿದ್ದರು. ತಾ.ಪಂ. ಸದಸ್ಯೆ ಮಣಿ, ಗ್ರಾ.ಪಂ. ಉಪಾಧ್ಯಕ್ಷೆ ಯಶೋದ, ಸದಸ್ಯ ಅಂಬೆಕಲ್ ಚಂದ್ರಶೇಖರ್, ವಸಂತ, ದಾನಿ ಕೃಷ್ಣಭಟ್, ಸ.ಮಾ.ಪ್ರಾ. ಶಾಲಾ ಮುಖ್ಯ ಶಿಕ್ಷಕ ಚೆನ್ನಪ್ಪ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ದಿನೇಶ್ ಸೇರಿದಂತೆ ಇತರರು ಸನ್ಮಾನಿಸಿದರು. ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ವೆಂಕಟೇಶ್, ಪ್ರೌಢಶಾಲಾ ಶಿಕ್ಷಕರಾದ ಸುಮ, ಲತ, ನವೀನ್, ಮಾಲಾದೇವಿ, ಉತ್ತಪ್ಪ ಸೇರಿದಂತೆ ಸುಂಟಿಕೊಪ್ಪ ವಲಯದ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.