*ಗೋಣಿಕೊಪ್ಪಲು, ಜ. 2: ಕದನೂರು ಕೊಟ್ಟೋಳಿ ಕೊಡವ ಸಂಘದ 13ನೇ ವಾರ್ಷಿಕೋತ್ಸವ ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆಯಿತು. ಸಂಘದ ಅಧ್ಯಕ್ಷೆ ಅಮ್ಮಣಿಚಂಡ ಗಂಗಮ್ಮ ಬೆಳ್ಳಿಯ್ಯಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ನಡೆಯಿತು. ಸಾಹಿತ್ಯ, ಶಿಕ್ಷಣ, ಕ್ರೀಡಾ, ಸಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಸಾಮಾಜಿಕ ಕ್ಷೇತ್ರದಲ್ಲಿ ಅಮ್ಮಣಿಚಂಡ ವಿಜು ಕುಶಾಲಪ್ಪ, ಸಾಹಿತ್ಯದಲ್ಲಿ ನಾಯಕಂಡ ಬೇಬಿ ಚಿಣ್ಣಪ್ಪ, ಶಿಕ್ಷಣ ಕ್ಷೇತ್ರದಲ್ಲಿ ಮುಂಡ್ಯೋಳಂಡ ಭೂಮಿಕಾ ಪೊನ್ನಪ್ಪ, ಮುಂಡ್ಯೋಳಂಡ ಬ್ರಿಜೇಶ್ ಗಣಪತಿ, ಕೆ. ಪೊನ್ನಣ್ಣ ಚಿನ್ನಪ್ಪ, ಅಮ್ಮಣಿಚಂಡ ಆಕಾಶ ಅಯ್ಯಣ್ಣ, ಪಿ. ದಿಶಾ ದೇಚಕ್ಕ, ಕ್ರೀಡಾ ಕ್ಷೇತ್ರದಲ್ಲಿ ಕುಂಚೀರ ಅದ್ವೈತ್ ನಾಚಪ್ಪ, ಕೊಟ್ಟಂಗಡ ಬೋಪಣ್ಣ, ಕೊಟ್ಟಂಗಡ ನಿತ್ಯ ಗಣಪತಿ, ಮಾಳೇಟ್ಟಿರ ಕಿಲನ್ ಮಹೇಶ್ ಇವರುಗಳನ್ನು ಸನ್ಮಾನಿಸಲಾಯಿತು.

ನಂತರ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಕೋಣೇರಿರ ಕವಿತಾ ಸಂಪತ್ ಪ್ರಾರ್ಥಿಸಿ, ಗಂಗಮ್ಮ ಸ್ವಾಗತಿಸಿದರು. ಸೌಮ್ಯ ನವೀನ್ ನಿರೂಪಿಸಿ, ಗೌರವ್ ಸುರೇಶ್ ವಂದಿಸಿದರು.

ನಿರ್ದೇಶಕರಾದ ಅಮ್ಮಣಿಚಂಡ ಪ್ರವೀಣ್, ಎ. ಶರಿ ಸೋಮಣ್ಣ, ಪಳಗಂಡ ರಮೇಶ್, ನಡಿಕೇರಿಯಂಡ ನಂದ, ಕೋಣೇರಿರ ಡಾನ್, ಬೊಳಕಾರಂಡ ರಂಜಿ ಉಪಸ್ಥಿತರಿದ್ದರು.