ಗೋಣಿಕೊಪ್ಪಲು, ಜ. 2 : ತಮಿಳುನಾಡುವಿನ ರಾಮನಾಥಪುg Àದಲ್ಲಿ ತಾ. 5 ರಿಂದ ನಡೆಯಲಿರುವ 7 ನೇ ಹಾಕಿ ಇಂಡಿಯಾ ಸಬ್ ಜೂನಿಯರ್ ಬಾಲಕಿಯರ ರಾಷ್ಟ್ರೀಯ ಕ್ರೀಡಾಕೂಟವನ್ನು ಪ್ರತಿನಿಧಿಸುತ್ತಿರುವ ಹಾಕಿಕೂರ್ಗ್ ಬಾಲಕಿಯರ ತಂಡಕ್ಕೆ ಜೆರ್ಸಿ ವಿತರಿಸುವ ಮೂಲಕ ಹಾಕಿ ಕೂರ್ಗ್ ವತಿಯಿಂದ ಶುಭಕೋರಿ ಕಳುಹಿಸಿಕೊಡಲಾಯಿತು.ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಕಿಕೂರ್ಗ್ ಉಪಾಧ್ಯಕ್ಷ ಕಳ್ಳಿಚಂಡ ಪ್ರಸಾದ್, ಕಾರ್ಯದರ್ಶಿ ಪಳಂಗಂಡ ಲವಕುಮಾರ್, ಕ್ರೀಡಾಕೂಟ ನಿರ್ದೇಶಕ ಬುಟ್ಟಿಯಂಡ ಚೆಂಗಪ್ಪ, ನಿರ್ದೇಶಕ ಐನಂಡ ಲಾಲಾ ಅಯ್ಯಣ್ಣ, ತಂಡದ ವ್ಯವಸ್ಥಾಪಕಿ ಹರಿಣಾಕ್ಷಿ, ತರಬೇತುದಾರ ಅರುಣ್ ಜೆರ್ಸಿ ವಿತರಿಸಿದರು.

ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಆಟಗಾರರುಗಳಾದ ಧನುಶ್ರಿ, ಕೆ. ಎ. ಪಾರ್ವತಿ, ಎಂ. ಜಿ. ಧನ್ಯ, ಕೆ. ಎ. ದೀಪ್ತಿ, ಬಿ. ಎಸ್. ಭೂಮಿಕ, ಎಸ್. ಆದಿರಾ, ಎಸ್. ಲಕ್ಷ್ಮಿ, ಬಿ. ವೈ. ಗಾಹ್ನವಿ, ಕೆ. ಆರ್. ಭೂಮಿಕ, ಜಿ ಎಸ್ ಕಾವ್ಯ, ಪದ್ಮಾವತಿ, ಬಿ. ಎಂ. ನಿತ್ಯಾ, ಹೆಚ್. ಪಿ. ಸಿಂಚನಾ, ಹೆಚ್. ಎಸ್. ಜಾಹ್ನವಿ, ರಿಶ್ಚಿತಾ ತಿಮ್ಮಯ್ಯ, ಟಿ. ಸಿ. ಸುಚಿತಾ, ಪಿ. ಜಿ. ದೇಚಮ್ಮ ಹಾಗೂ ಯಶಿಕಾ ಕಾವೇರಮ್ಮ ಉಪಸ್ಥಿತರಿದ್ದರು.