ಮಡಿಕೇರಿ, ಡಿ. 4: ಸೋಮವಾರಪೇಟೆ ತಾಲೂಕಿನ ಕಿರಗಂದೂರು ಸರಕಾರಿ ಪ್ರೌಢಶಾಲೆ 2015-2016 ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದು, ಇದಕ್ಕೆ ಕಾರಣಕರ್ತರಾದ ಈ ಶಾಲೆಯ ಶಿಕ್ಷಕರುಗಳನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ತಾ. 9 ರಂದು ಸನ್ಮಾನಿಸಲಾಗುವದೆಂದು ಸಮಿತಿ ಸಂಚಾಲಕ ಹೆಚ್.ಎಲ್. ದಿವಾಕರ್ ತಿಳಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾಲ್ಕು ಬಾರಿ ಶೇ. 99 ರಷ್ಟು ಫಲಿತಾಂಶ ಗಳಿಸಿದ್ದ ಶಾಲೆ ಕಳೆದ ಎರಡು ವರ್ಷಗಳಿಂದ ಶೇ. 100 ರಷ್ಟು ಸಾಧನೆ ಮಾಡಿದ್ದು, ಇದಕ್ಕೆ ಶಿಕ್ಷಕರುಗಳ ಪರಿಶ್ರಮವೇ ಕಾರಣವೆಂದು ಅಭಿಪ್ರಾಯಪಟ್ಟಿದ್ದಾರೆ. ತಾ. 9 ರಂದು ಮಧ್ಯಾಹ್ನ 2.30 ಗಂಟೆಗೆ ಕಿರಗಂದೂರು ಸರಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆಯುವÀ ಸನ್ಮಾನ ಸಮಾರಂಭವನ್ನು ಜಿಲ್ಲಾ ಆಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿ ಡಾ. ಎಂ. ದೇವದಾಸ್ ಉದ್ಘಾಟಿಸಲಿದ್ದಾರೆ. ನೇತ್ರ ತಜ್ಞ ಡಾ. ಪ್ರಶಾಂತ್ ಮುಖ್ಯ ಭಾಷಣ ಮಾಡಲಿದ್ದಾರೆ. ಶೇ. 100 ರಷ್ಟು ಸಾಧನೆ ಮಾಡಲು ಕಾರಣಕರ್ತರಾದ ಶಿಕ್ಷಕರುಗಳನ್ನು ಉದ್ಯಮಿ ಎಂ.ಸಿ. ಕಾರ್ಯಪ್ಪ ಸನ್ಮಾನಿಸಲಿದ್ದಾರೆ. ಸಮಿತಿ ಅಧ್ಯಕ್ಷ ಹೆಚ್.ಎಲ್. ದಿವಾಕರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಸನ್ಮಾನಿಸಲ್ಪಡುವ ಶಿಕ್ಷಕರುಗಳು

ಡಿ.ಪಿ. ಧರ್ಮಪ್ಪ, ಎ. ವಿಜು, ಕೆ.ಜಿ. ರೇಷ್ಮ, ಹೆಚ್.ಎಂ. ರಮೇಶ್, ಇ. ಸುಲೇಮಾನ್, ಹೆಚ್.ಎನ್. ಮಂಜುನಾಥ್, ಮನು ಹಾಗೂ ಕೆ. ಸುರೇಶ್.