ಮೂರ್ನಾಡು, ಡಿ. 4: ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಮೂರ್ನಾಡು ಕೊಡವ ಸಮಾಜದ ಆಶ್ರಯದಲ್ಲಿ ಏರ್ಪಡಿಸಲಾದ ಕೊಡವ ಆಟ್-ಪಾಟ್-ಪಡಿಪು ಶಿಬಿರದ ಉದ್ಘಾಟನೆ ನಡೆಯಿತು. ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಲಾದ ಶಿಬಿರವನ್ನು ಮೂರ್ನಾಡು ಮಹಿಳಾ ಮಂಡಳದ ಅಧ್ಯಕ್ಷೆ ಬಡುವಂಡ ಸೀತಾದೇವಿ ಕಾರ್ಯಪ್ಪ ಉದ್ಘಾಟಿಸಿದರು. ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡವ ಸಂಸ್ಕøತಿಯನ್ನು ಬೆಳೆಸಿ-ಉಳಿಸುವಲ್ಲಿ ಇಂತಹ ಕಾರ್ಯಕ್ರಮ ಅತ್ಯಂತ ಸಹಕಾರಿ ಆಗಿದೆ. ಆಟ್-ಪಾಟ್ ಶಿಬಿರಗಳಲ್ಲಿ ಇಂದು ಅನೇಕ ಮಂದಿ ಯುವಕ-ಯುವತಿಯರು ಬೊಳಕಾಟ್, ಕೋಲಾಟ್, ಉಮ್ಮತ್ತಾಟ್ ಕಲಿಯುವಲ್ಲಿ ಆಸಕ್ತಿ ತೋರುತ್ತಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ಪಳಂಗಂಡ ಗಣೇಶ್, ಕಾರ್ಯದರ್ಶಿ ಬಡುವಂಡ ಚಂಗಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಮೇಚಿರ ಸುಭಾಶ್ ನಾಣಯ್ಯ ಇತರರು ಉಪಸ್ಥಿತರಿದ್ದರು.