ಮಡಿಕೇರಿ, ಅ. 8: ರೋಟರಿ ಮಿಸ್ಟಿಹಿಲ್ಸ್ ಪ್ರಾಯೋಜಕತ್ವದಲ್ಲಿ ಜನರಲ್ ತಿಮ್ಮಯ್ಯ ಶಾಲೆಯಲ್ಲಿ ವಾಕ್ ಶ್ರವಣ ಮತ್ತು ಆಡಿಯೋಲಜಿ ಕುರಿತಾಗಿ ಉಚಿತ ತಪಾಸಣಾ ಶಿಬಿರ ನಡೆಯಿತು. ಡಾ. ಅಖಿಲೇಶ್ ನೇತೃತ್ವದಲ್ಲಿ ಫಾದರ್ ಮುಲ್ಲರ್ ವಾಕ್ ಶ್ರವಣ ಕಾಲೇಜು ಸಹಯೋಗ ದೊಂದಿಗೆ ನಡೆದ ಶಿಬಿರದಲ್ಲಿ ಮಕ್ಕಳಲ್ಲಿ ಕಂಡು ಬರುವ ಉಚ್ಚಾರ ದೋಷ, ಉಗ್ಗುವಿಕೆ, ಕಲಿಕಾ ನ್ಯೂನ್ಯತೆ, ಸ್ವರ ದೋಷ, ಕಿವಿಯ ಸಮಸ್ಯೆ, ಶಬ್ಧಕ್ಕೆ ಗಮನ ಕೊಡದಿರುವದು ಇತ್ಯಾದಿ ತಪಾಸಣೆ ನಡೆಸಿ ಅಗತ್ಯವಿರುವ ತರಬೇತಿಯನ್ನು ಡಾ. ಅಖಿಲೇಶ್ ಮತ್ತು 7 ಜನ ವೈದ್ಯರ ತಂಡ ನೀಡಿದರು.
ಸುಮಾರು 25 ಮಕ್ಕಳು, ಸಾರ್ವಜನಿಕರು, ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದರು. ಕಳೆದ ಒಂದು ವರ್ಷದ ಹಿಂದಿನಿಂದ ಮಾತು ನಿಂತ ಸಿದ್ದಾಪುರದ ವಿದ್ಯಾರ್ಥಿನಿಗೆ ಮಾತು ಪುನರರಾಂಭಿಸಲು ತರಬೇತಿ ನೀಡಲಾಯಿತು.
ವೇಗವಾಗಿ ಮಾತನಾಡುವದ ರಿಂದ ಸಂವಹನ ತೊಂದರೆಯ ವಿದ್ಯಾರ್ಥಿಯನ್ನು ಗುರುತಿಸಿ ಹೆಚ್ಚಿನ ತರಬೇತಿಗೆ ಫಾ. ಮುಲ್ಲಾರ್ಸ್ ಕಾಲೇಜಿಗೆ ಬರಮಾಡಿ ಕೊಳ್ಳಲು ವ್ಯವಸ್ಥೆ ಮಾಡಲಾಯಿತು.
ಡಾ. ಪ್ರಶಾಂತ್ ದೀಪ ಬೆಳಗಿಸಿದರು. ಕೊಡವ ಸಮಾಜ ಅಧ್ಯಕ್ಷ ಕೆ.ಎಸ್. ದೇವಯ್ಯ, ಪ್ರಾಂಶುಪಾಲೆ ಸರಸ್ವತಿ ಹಾಗೂ ಕಾರ್ಯಾಧ್ಯಕ್ಷ ಚಿನ್ನಪ್ಪ, ಸಿ. ಕಾಳಪ್ಪ, ಆಡಳಿತಾಧಿಕಾರಿ ಪೊನ್ನಮ್ಮ ಉಪಸ್ಥಿತರಿದ್ದರು. ಮಿಸ್ಟಿಹಿಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅಧ್ಯಕ್ಷತೆ ವಹಿಸಿದ್ದರು.
ರೋಟರಿ ಪೂರ್ವ ಅಧ್ಯಕ್ಷರು ಗಳಾದ ಬಿ.ಜಿ. ಅನಂತಶಯನ, ರವೀಂದ್ರ ರೈ, ವಿಶ್ವನಾಥ್, ಭಾಗವಹಿಸಿದ್ದರು.