ಮೂರ್ನಾಡು, ಅ. 14: ಮಾನವರ ಪ್ರತಿಯೊಂದು ಆಲೋಚನೆಗಳು ಸಕರಾತ್ಮಕವಾಗಿರ ಬೇಕು ಆಗ ಮಾತ್ರ ಜೀವನದಲ್ಲಿ ಸಾಧನೆಗೈಯಲು ಸಾಧ್ಯ ಎಂದು ಕಾಫಿ ಬೆಳೆಗಾರರಾದ ಬಡುವಂಡ ಕಾವೇರಿ ಅಪ್ಪಚ್ಚು ಹೇಳಿದರು.
ಕುಂಬಳದಾಳು ಶಾಲೆಯಲ್ಲಿ ಏರ್ಪಡಿಸಲಾದ ಮೂರ್ನಾಡು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿಶೇಷ ವಾರ್ಷಿಕ ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಮನಸ್ಸು ಎಲ್ಲವನ್ನು ತಕ್ಷಣ ಗ್ರಹಿಸುವಂತಹದಾಗಿದ್ದು, ನಕರಾತ್ಮಕ ವಿಷಯಗಳಿಗೆ ನಮ್ಮ ಮನಸ್ಸು ಸ್ಪಂದಿಸದಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಸಮಯ ಅನ್ನುವದು ಇದೆ. ಅಂತಹ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪರರಿಗೆ ಸಣ್ಣ ಪುಟ್ಟ ಸಹಾಯ, ಸೇವೆಗಳನ್ನು ಮಾಡುವ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿ ಶಿಕ್ಷಕರು ತ್ಯಾಗ ಮನೋಭಾವ ವುಳ್ಳವರಾಗಿದ್ದು, ವಿದ್ಯಾರ್ಥಿಗಳು ಧನ್ಯತಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಮೂರ್ನಾಡು ವಿದ್ಯಾಸಂಸ್ಥೆ ನಿರ್ದೇಶಕ ನಂದೇಟಿರ ರಾಜ ಮಾದಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾಫಿ ಬೆಳೆಗಾರರಾದ ದಂಬೆಕೋಡಿ ಚಂಗಪ್ಪ, ಕರ್ಣಯ್ಯನ ಮಮತ, ಶಿಬಿರಾಧಿಕಾರಿ ಯು.ಸಿ. ಮಾಲತಿ, ಉಪನ್ಯಾಸಕಿ ಕಾವೇರಮ್ಮ, ನಿರ್ದೇಶಕ ವೇಣು ಅಪ್ಪಣ್ಣ ಉಪಸ್ಥಿತರಿದ್ದರು.