ನಾಪೆÇೀಕ್ಲು, ಸೆ. 2: ಸ್ಥಳೀಯ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಪ್ರತೀ ವರ್ಷ ಆಚರಿಸಲಾಗುವ ಆಯುಧ ಪೂಜೆ ಕಾರ್ಯಕ್ರಮವನ್ನು ಈ ವರ್ಷವೂ ಅದ್ಧೂರಿಯಾಗಿ ಆಚರಿಸಲು ಸಂಘದ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಆಯುಧ ಪೂಜೆ ದಿನ 2.30 ಗಂಟೆಗೆ ಸಮೀಪದ ಹಳೇ ತಾಲೂಕಿನಿಂದ ಅಲಂಕೃತ ವಾಹನಗಳ ಭವ್ಯ ಮೆರವಣಿಗೆ ನಡೆಯಲಿದ್ದು, ನಂತರ ಪೆÇಲೀಸ್ ಮೈದಾನದಲ್ಲಿ ಸಾಮೂಹಿಕ ಆಯುಧ ಪೂಜೆ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಯಿಂದ ಪ್ರಖ್ಯಾತ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎಂ.ಇ. ರಜಾಕ್, ಕಾರ್ಯದರ್ಶಿ ಕೆ.ಕೆ. ಲೋಕೇಶ್, ಖಜಾಂಚಿ ನಾಗರಾಜ್ ಎ.ಕೆ. ಮನೋಹರ್, ಕೆ.ಎಂ. ರಮೇಶ್, ಹರೀಶ್, ದಿನೇಶ್, ಮಂಜ, ಶ್ರೀಜೇಶ್, ರಾಮಕೃಷ್ಣ ಮತ್ತಿತರರು ಇದ್ದರು.