ಮಡಿಕೆÉೀರಿ, ಅ.30 : ಮುಸಲ್ಮಾನರು ಟಿಪ್ಪು ಜಯಂತಿ ಆಚರಿಸಿ ಎಂದು ಕೇಳದಿದ್ದರೂ ಸರ್ಕಾರ ಟಿಪ್ಪು ನಡೆಸಿದ ಉತ್ತಮ ಆಡಳಿತÀವನ್ನು ಪರಿಗಣಿಸಿ ಜಯಂತಿ ಆಚರಣೆಯ ನಿರ್ಧಾರಕ್ಕೆ ಬಂದಿದ್ದು, ಸರಕಾರದ ಕಾರ್ಯಕ್ರಮದಂತೆ ಜಯಂತಿ ಆಚರಣೆ ಶಾಂತಿಯುತವಾಗಿ ನಡೆಯಲಿ ಎಂದು ಟಿಪ್ಪು ಅಭಿಮಾನಿ ವೇದಿಕೆ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸಾಕ್ ಖಾನ್, ಟಿಪ್ಪು ಸುಲ್ತಾನ್ ಕೆÉೀವಲ ಮುಸಲ್ಮಾನರಿಗೆ ಸೀಮಿತವಾದ ವ್ಯಕ್ತಿಯಲ್ಲವೆಂದು ಅಭಿಪ್ರಾಯಪಟ್ಟರು. ಟಿಪ್ಪು ಜಯಂತಿಯನ್ನು ಘೋಷಿಸಿರುವ ಸರ್ಕಾರವೇ ಜಯಂತಿ ಆಚರಣೆ ಯನ್ನು ಶಾಂತಿಯುತವಾಗಿ ಮಾಡಲಿ ಎಂದು ಅವರು ತಿಳಿಸಿದರು.

ಶಾಂತಿ ಸೌಹಾರ್ದತೆಗೆ ಹೆಸರಾಗಿರುವ ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಶಾಂತಿಯುತವಾಗಿ ನಡೆಯಬೇಕೆನ್ನುವದೆ ನಮ್ಮ ಉದ್ದೇಶವೆಂದರು. ಟಿಪ್ಪು ಸುಲ್ತಾನ್ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿ ಎನ್ನುವ ಹೆಮ್ಮೆಯನ್ನು ನಾವು ಹೊಂದಿದ್ದೇವೆಯೇ ಹೊರತು ಟಿಪ್ಪು ಒಂದು ಸಮುದಾಯಕ್ಕೆ ಸೇರಿದವರಲ್ಲ ವೆಂದು ತಿಳಿಸಿದರು.

ಕಳೆದ ಬಾರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕಾರ್ಯಕ್ರಮ ನಡೆದ ಕಾರಣ ಗಲಭೆ ನಡೆದಿರಬಹುದೆಂದು ಅಭಿಪ್ರಾಯಪಟ್ಟ ಇಸಾಕ್ ಖಾನ್ ಈ ಬಾರಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ನಡೆಯುವ ಟಿಪ್ಪು ಜಯಂತಿ ಶಾಂತಿಯುತವಾಗಿ ನಡೆಯಲಿ ಎಂದರು.