ಮಡಿಕೇರಿ, ಜ. 25: ಕೊಡಗು ಜಿಲ್ಲಾ ಛಾಯಾಗ್ರಾಹಕರ ಸಂಘÀದ ವತಿಯಿಂದ ತಾ. 27 ರಂದು ನಗರದ ಕೆಳಗಿನ ಗೌಡ ಸಮಾಜದಲ್ಲಿ ‘ಛಾಯಾಗ್ರಾಹಕರ ಛಾಯಾ ಸಮ್ಮಿಲನ’ ಮತ್ತು ಸಂಘದ ದಿನಚರಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ವಿಶ್ವ ಕುಮಾರ್ ಗುಡ್ಡೆಮನೆ, ಛಾಯಾ ಸಮ್ಮಿಲನ ಕಾರ್ಯಕ್ರಮದಂದು ಬೆಳಿಗ್ಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ, ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ ಮತ್ತು ಜನರಲ್ ತಿಮ್ಮಯ್ಯ ಸ್ಮಾರಕಕ್ಕೆ ಸಂಘÀದ ಸದಸ್ಯರು ಮರೆವಣಿಗೆಯ ಮೂಲಕ ತೆರಳಿ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಿದ್ದಾರೆ ಎಂದರು.

ಗೌಡ ಸಮಾಜದಲ್ಲಿ ಕಾರ್ಯಕ್ರಮವನ್ನು ಚಲನಚಿತ್ರ ನಟ ಹಾಗೂ ಬೆಂಗಳೂರಿನ ಉದಯ ಕಲರ್ ಲ್ಯಾಬ್‍ನ ಹೆಚ್.ಎಸ್. ಉದಯ್ ಉತ್ತಿನಗದ್ದೆ ಉದ್ಘಾಟಿಸಲಿದ್ದಾರೆ. ಸಂಘದ ದಿನಚರಿ ಪುಸ್ತಕವನ್ನು ಕರ್ನಾಟಕ ಛಾಯಾಗ್ರಾಹಕರ ಸಂಘÀದ ಉಪಾಧ್ಯಕ್ಷ ಹೆಚ್.ಎಸ್. ನಾಗೇಶ್ ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಅತಿಥಿಗಳಾಗಿ ಕೆ.ಪಿ.ಎ. ದಕ್ಷಿಣ ವಲಯ ಸಮಿತಿ ಅಧ್ಯಕ್ಷ ವಾಸುದೇವನ್, ಮಡಿಕೇರಿ ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಮಡಿಕೇರಿಯ ಮಂಜಿನ ನಗರಿ ಛಾಯಾಗ್ರಾಹಕರ ಸಂಘÀದ ಅಧ್ಯಕ್ಷ ಲೂಯಿಸ್, ವೀರಾಜಪೇಟೆ ಛಾಯಾ ಚಿತ್ರಗ್ರಾಹಕರ ಸಂಘದ ಅಧ್ಯಕ್ಷ ಟಿ. ಶಿವಕುಮಾರ್, ಸೊಮವಾರಪೇಟೆ ಪುಷ್ಪಗಿರಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಸುಬ್ರಮಣಿ, ಕುಶಾಲನಗರ ಶ್ರೀ ಕಾವೇರಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಬಿ. ಶಾಂತಪ್ಪ, ಶನಿವಾರಸಂತೆ ಇಮೇಜ್ ಛಾಯಾಗ್ರಾಹಕರ ಸಂಘÀದ ಅಧ್ಯಕ್ಷ ಎಸ್.ಡಿ. ಲಿಂಗರಾಜು ಗೌಡ ಪಾಲ್ಗೊಳ್ಳಲಿದ್ದಾರೆ.ಕರ್ನಾಟಕ ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ಹೆಚ್.ಎಸ್. ನಾಗೇಶ್, ಚಲನಚಿತ್ರನಟ ಹೆಚ್.ಎಸ್. ಉದಯ್ ಉತ್ತಿನಗದ್ದೆ ಹಾಗೂ ಹಿರಿಯ ಛಾಯಾಗ್ರಾಹಕರನ್ನು ಸನ್ಮಾನಿಸಲಾಗುವದೆಂದು ವಿಶ್ವ ಕುಮಾರ್ ತಿಳಿಸಿದರು. ಸಮಾವೇಶದಂದು ವೃತ್ತಿಪರ ಛಾಯಾಗ್ರಾಹಕರಿಗಾಗಿ ಉಚಿತ ಕ್ಯಾಮೆರಾ ಸರ್ವೀಸ್ ನಡೆಸಲಾಗುವದು. ಆಸಕ್ತರು 10 ಗಂಟೆಯ ಒಳಗೆ ತಮ್ಮ ಕ್ಯಾಮೆರಾಗಳನ್ನು ತಲಪಿಸುವಂತೆ ಅವರು ಮನವಿ ಮಾಡಿದರು.ಗೋಷ್ಠಿಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಮಾವಟ್ಕರ್, ಖಜಾಂಚಿ, ಸುದರ್ಶನ್ ಹಾಗೂ ಕುಶಾಲನಗರ ಹೋಬಳಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಬಿ. ಶಾಂತಪ್ಪ ಉಪಸ್ಥಿತರಿದ್ದರು.