ಕೂಡಿಗೆ, ಜೂ. 11: ಹಾರಂಗಿ ಉದ್ಯಾನವನ ವೀಕ್ಷಣೆಗೆ ಬರುತ್ತಿದ್ದ ಪ್ರವಾಸಿಗರಿಗೆ ಕಳೆದ 5 ವರ್ಷಗಳಿಂದ ನಿರಾಸೆಯಾಗುತ್ತಿತ್ತು. ಈಗಾಗಲೇ ಜಲಾಶಯ ಸೊಬಗನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಉದ್ಯಾನವನದ ಪರಿಕಲ್ಪನೆಯನ್ನು ಒದಗಿಸುವ ಮಹತ್ವಾಕಾಂಕ್ಷೆಯಿಂದ ನೀರಾವರಿ ನಿಗಮದ ವತಿಯಿಂದ ರೂ. 5 ಕೋಟಿ ವೆಚ್ಚದಲ್ಲಿ ಉದ್ಯಾನವನವನ್ನು ರೂಪಿಸಲಾಗಿತ್ತು. ಇದೀಗ ಕಳೆದ 5 ವರ್ಷಗಳಿಂದ ಎಡರು-ತೊಡರುಗಳ ಮೂಲಕ ಸಾಗುತ್ತಾ ಬಂದು ಅನೇಕ ಆರೋಪ ಮತ್ತು ಪ್ರತ್ಯಾರೊಪ ವಿರೋಧಗಳ ನಡುವೆಯೂ ತಾ. 17 ರಂದು ಉದ್ಘಾಟನೆಗೊಳ್ಳಲು ಸಿದ್ಧಗೊಂಡಿದೆ. ಉದ್ಯಾನವನದಲ್ಲಿ ಅಳವಡಿಸಿರುವ 14 ನೀರಿನ ಕಾರಂಜಿಗಳನ್ನು ಸುವ್ಯವಸ್ಥೆಗೊಳಿಸುವ ಮೂಲಕ ವಿದ್ಯುತ್ ಅಳವಡಿಕೆಯನ್ನು ಸರಿಪಡಿಸಿ, ಇದೀಗ ಎಲ್ಲಾ ಹಂತ ದಾಟಿ ಸಿದ್ಧಗೊಂಡಿದೆ.

ಮೈಸೂರಿನ ಕೆಆರ್‍ಎಸ್ ಮಾದರಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ವ್ಯವಸ್ಥೆಯಲ್ಲಿ ರೂ. 2 ಕೋಟಿ ವೆಚ್ಚದ ನೀರಿನ ಸಂಗೀತ ಕಾರಾಂಜಿಯನ್ನು ಅಳವಡಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಹಾರಂಗಿಯ ಕಾರ್ಯಪಾಲಕ ಅಭಿಯಂತರ ರಂಗಸ್ವಾಮಿ ತಿಳಿಸಿದ್ದಾರೆ.

- ಕೆ.ಕೆ. ನಾಗರಾಜ ಶೆಟ್ಟಿ.