ಸುಂಟಿಕೊಪ್ಪ, ಜು. 23: ದಕ್ಷಿಣ ಭಾರತದ ಧಾರ್ಮಿಕ ವಿದ್ಯಾ ಸಂಸ್ಥೆಯಾದ ಜಾಮೀಯ ಸೂರಿಯ ಅರೆಬಿಕ್ ಕಾಲೇಜಿನ 53ನೇ ಅಂಗ ಸಂಸ್ಥೆಯಾಗಿ ಸುಂಟಿಕೊಪ್ಪದಲ್ಲಿ ಜೂನಿಯರ್ ಶರೀಹತ್ ಕಾಲೇಜಿನ ಉದ್ಘಾಟನೆಯನ್ನು ಕಲ್ಲಿಕೋಟೆಯ ಖಾಝಿ ಮಹಮ್ಮದ್ ಕೋಯ ಜಮುಲೈಲಿ ತಂಞಳ್ ನೆರವೇರಿಸಿದರು.

ನಂತರ ಮಾತನಾಡಿದ ಅವರು, ದೇಶವು ಅಭಿವೃದ್ಧಿ ರಾಷ್ಟ್ರವಾಗ ಬೇಕಾದರೆ ಪ್ರತಿಯೊಬ್ಬ ಪ್ರಜೆಗೂ ಶಿಕ್ಷಣ ಸಿಗಬೇಕು, ಪೋಷಕರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಬೇಕು. ವಿದ್ಯಾರ್ಥಿಗಳು ಶಿಸ್ತಿನಿಂದ, ಶ್ರದ್ಧೆಯಿಂದ ವಿದೆÉ್ಯಯನ್ನು ಕಲಿತು ಮುಂದೆ ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕು ಎನ್ನುವ ಚಿಂತನೆಯೊಂದಿಗೆ ಶಿಕ್ಷಣಕ್ಕೆ ಆದ್ಯತೆ ನೀಡುವ ದಿಸೆಯಲ್ಲಿ ಕಾಲೇಜು ವಿದ್ಯಾಸಂಸ್ಥೆಗೆ ಹೆಚ್ಚಿನ ಒತ್ತು ಕೊಡಲಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಜಾಗ ದಾನಿಗಳು ವಿಟ್ಲದ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾತನಾಡಿ, ಈ ಕಾಲೇಜಿನಲ್ಲಿ ಸಮಾಜದ ಯಾರೂ ಶಿಕ್ಷಣದಿಂದ ವಂಚಿತರಾಗಬಾರದೆಂದು ಹತ್ತನೇ ತರಗತಿಯಲ್ಲಿ ಶೇಕಡ ಅಂಕಕ್ಕಿಂತ ಕಡಿಮೆ ಅಂಕ ಪಡೆದ ಬಾಲಕರನ್ನು ಈ ಕಾಲೇಜಿಗೆ ಸೇರಿಸಿ ಉಚಿತ ಹಾಸ್ಟೇಲ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.ಲೌಕಿಕ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣ ನೀಡುವ ಈ ಸಂಸ್ಥೆಯಲ್ಲಿ ಅರೆಬಿಕ್, ಕನ್ನಡ, ಉರ್ದು, ಇಂಗ್ಲೀಷ್, ಮಲೆಯಾಳಂ ಭಾಷೆ ಶಿಕ್ಷಣ ಕಲಿಸಲಾಗುವದು. ಕಾಲೇಜಿನ ಕೊಠಡಿಯನ್ನು ಕಲ್ಲಿಕೋಟೆಯ ಸಂಯುಕ್ತ ಖಾಝಿ ಮಹಮ್ಮದ್ ಕೋಯ ಜಮಲುಲೈಲಿ ತಂಞಳ್ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಹಾಗೆಯೇ ಮತ್ತೊಂದು ಕೊಠಡಿ ಕೊಡಗರಹಳ್ಳಿಯ ಬಾಪ್ಪುಹಾಜಿ, ಎ.ಬಿ. ಅಜೀಜ್, ಉಸ್ಮಾನ್ ಹಾಜಿ ಸಿದ್ದಾಪುರ, ಎ.ಟಿ. ಅಬ್ಬೂಕ್ಕರ್, ತಬ್ಬುಸಲ್ ಅವರು ನಿರ್ಮಿಸಿಕೊಡುವದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ಅವರು ಹೇಳಿದರು.

ಮುಖ್ಯ ಭಾಷಣವನ್ನು ಕಾಲೇಜಿನ ಪ್ರಾಂಶುಪಾಲ ಜೈನುದ್ದೀನ್ ಫೈಝಿ ಕಾಸರಗೋಡು ಹಾಗೂ ಉಪ ಪ್ರಾಂಶುಪಾಲ ಜಭಾರ್ ಹುದವಿ ಮಾತನಾಡಿದರು. ಈ ಸಂದರ್ಭ ಸಮಸ್ತ ಕೇಂದ್ರ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಮುಸ್ಲಿಯರ್, ಸುಂಟಿಕೊಪ್ಪ ಮುದರಿಸ್ ಉಸ್ಮಾನ್ ಫೈಝಿ, ಕೊಡಗು ಉಪಖಾಝಿ ಅಬ್ದುಲ್ಲಾ ಫೈಝಿ, ಕೊಡಗರಹಳ್ಳಿ ಬಾಪ್ಪುಹಾಜಿ, ಸಿದ್ದಾಪುರ ಉಸ್ಮಾನ್ ಹಾಜಿ, ಸಂಷುಲ್ ಉಲಮ್ಮ ಅಧ್ಯಕ್ಷ ಬಶೀರ್ ಹಾಜಿ, ಎಸ್.ಕೆ.ಎಸ್‍ಎಸ್.ಎಫ್. ಜಿಲ್ಲಾಧ್ಯಕ್ಷ ನೌಷದ್ ಫೈಝಿ, ರಾಜ್ಯ ಕಾರ್ಯದರ್ಶಿ ಹಾರೀಫ್ ಫೈಝಿ, ರಾಜ್ಯ ಸಮಿತಿ ಸದಸ್ಯ ಇಕ್ಬಾಲ್ ಮೌಲವಿ, ಜಿಲ್ಲಾ ಕಾರ್ಯದರ್ಶಿ ತಮ್ಲಿಕ್ ಧಾರಿಮಿ, ಜಮಾಅತ್ ಅಧ್ಯಕ್ಷ ಹಸನ್ ಕುಂಞ ಹಾಜಿ, ಕಾಲೇಜಿನ ಅಧ್ಯಕ್ಷ ಉಮ್ಮರ್ ಫೈಝಿ ಮತ್ತಿತರರು ಉಪಸ್ಥಿತರಿದ್ದರು. ಕಾಲೇಜಿನ ಕಾರ್ಯದರ್ಶಿ ಸಿ.ಎಂ. ಹಮೀದ್ ಮೌಲವಿ ಸ್ವಾಗತಿಸಿ, ವಂದಿಸಿದರು.