ಶ್ರೀಮಂಗಲ, ಜು. 22: ಗೋಣಿಕೊಪ್ಪಲು- ಪೊನ್ನಂಪೇಟೆ ಮುಖ್ಯ ರಸ್ತೆಯಲ್ಲಿ ವಾಹನ ಸರಣಿ ಅಪಘಾತಗೊಳಿಸಿ ತೀವ್ರ ನಜ್ಜುಗುಜ್ಜಾಗಿರುವ ಘಟನೆ ನಡೆದಿದೆ.ಗೋಣಿಕೊಪ್ಪಲು ಕಡೆಯಿಂದ ಪೊನ್ನಂಪೇಟೆಯತ್ತ ತೆರಳುತ್ತಿದ್ದ ಕಾರು ಕೆ.ಎ. 05 ಜೆಡ್. 4665 ಪೊನ್ನಂಪೇಟೆ ರಸ್ತೆಯ ಜಯಾಸಿಸ್ ಕ್ಲಬ್ ಹತ್ತಿರ ನಿಂತಿದ್ದ ಕೆ.ಎ. 12 ಪಿ.143 ಕಾರಿಗೆ ಡಿಕ್ಕಿ ಹೊಡೆದು ಮುಂದೆ ಚಲಿಸಿ ಬಲಬದಿಯಲ್ಲಿ ನಿಂತಿದ್ದ ಪಿಕ್‍ಅಪ್ ವಾಹನಕ್ಕೆ ಡಿಕ್ಕಿಯಾದ ಪರಿಣಾಮ ಆಟೋವೊಂದಕ್ಕೆ ಡಿಕ್ಕಿಯಾಗಿ ಪಿಕ್‍ಅಪ್ ಚೇಂದ್ರಿಮಾಡ ಮಂಜು ಅವರ ಮನೆಗೆ ಅಪ್ಪಳಿಸಿದೆ. ಇದರ ಪರಿಣಾಮ ಮನೆಯಗೋಡೆಗೆ ಹಾನಿಯಾಗಿ ಹೆಂಚುಗಳು ಪುಡಿಯಾಗಿದೆ. ಡಿಕ್ಕಿ ಪಡಿಸಿದ ಕಾರಿನಲ್ಲಿ ಇಬ್ಬರು ಇದ್ದರೆನ್ನಲಾಗಿದ್ದು, ಸಣ್ಣ ಪುಟ್ಟ ಗಾಯವಾಗಿದೆ.