ನಾಪೋಕ್ಲು, ಜು. 2: ಕೊಡಗಿನಲ್ಲಿ ಮಳೆಗಾಲ ಬಂತೆಂದರೆ ಕಾನನಗಳಲ್ಲಿ ವಿವಿಧ ಝರಿ- ತೊರೆಗಳು ತುಂಬಿ ಹರಿಯುತ್ತಾ ಸೊಬಗಿನಿಂದ ಧುಮ್ಮಿಕ್ಕುವ ಸೊಬಗು ಮನಸೂರೆಗೊಳ್ಳುವದು ಸಾಮಾನ್ಯ. ಅದರಲ್ಲಿಯೂ ಕಲ್ಲುಬಂಡೆಗಳ ಮೇಲಿನಿಂದ ಧುಮ್ಮಿಕ್ಕುವ ಜಲಪಾತಗಳು ರುದ್ರರಮಣೀಯವಾಗಿದ್ದು ಜೀವತುಂಬಿ ಕಂಗೊಳಿಸುತ್ತವೆ. ನೋಡುವವರ ಮನಸೂರೆಗೊಳ್ಳುವ ಜಲಪಾತಗಳ ಪೈಕಿ ಇಗ್ಗುತ್ತಪ್ಪ (ಮಲ್ಮ) ಬೆಟ್ಟದಿಂದ ಹರಿದು ಬರುವ ತೊರೆಯೊಂದು ನೆಲಜಿ ಇಗ್ಗುತ್ತಪ್ಪ ದೇವಾಲಯದ ಬಳಿ ಚೀಯಕಪೂವಂಡ ಕುಟುಂಬಸ್ಥರ ಮನೆಯ ಬಳಿ ಪಾರೆಕಟ್ಟು ಜಲಪಾತವಾಗಿ ಇದೀಗ ಮೈದುಂಬಿಕೊಂಡು ಗಮನ ಸೆಳೆಯುತ್ತಿದೆ. ಬಂಡೆಕಲ್ಲುಗಳ ಮೇಲಿನಿಂದ ಭೋರ್ಗರೆಯುತ್ತಾ ಬೆಳ್ನೊರೆಯಾಗಿ ನೋಡುಗರಿಗೆ ರಮಣೀಯ ದೃಶ್ಯವಾಗಿ ಮನಸೂರೆಗೊಳ್ಳುತ್ತಿದೆ.

-ದುಗ್ಗಳ ಸದಾನಂದ.