ಮಡಿಕೇರಿ, ಆ. 31: ಗಣೇಶ ವಿಗ್ರಹಗಳನ್ನು ತಯಾರಿಸುವವರು, ಬಳಸುವವರು ಪ್ಲಾಸ್ಟಿರ್ ಆಫ್ ಪ್ಯಾರಿಸ್ ಮತ್ತು ರಾಸಾಯನಿಕ ಬಣ್ಣದ ವಿಗ್ರಹಗಳಿಂದ ಪರಿಸರಕ್ಕೆ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ದಕ್ಕೆಯಾಗು ವಂತಹ ವಿಗ್ರಹಗಳನ್ನು ತಯಾರಿಸ ಲಾಗಿದ್ದು, ಇದರಿಂದ ಕೆರೆ ಮತ್ತು ಇತರೆ ಜಲ ಮೂಲಗಳಲ್ಲಿ ವಿಸರ್ಜನೆಯನ್ನು ಮಾಡುತ್ತಿರುವದರಿಂದ ಮಾಲಿನ್ಯ ಉಂಟಾಗುತ್ತಿದೆ. ಇದರಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶ ಉಲ್ಲಂಘಿಸಿದ್ದಲ್ಲಿ ಜಲ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ 1974, 01 ಕಲಂ 45-ಎ ಅನ್ವಯ ದಂಡ ರೂ. 10 ಸಾವಿರ ಮತ್ತು ಜೈಲು ವಾಸ ವಿಧಿಸುವ ಅವಕಾಶವಿರುವದರಿಂದ ವಿಗ್ರಹವನ್ನು ಸಂಪೂರ್ಣ ಮಣ್ಣಿನಿಂದ ಹಾಗೂ ಬಣ್ಣ ಲೇಪಿತವಲ್ಲದ ವಿಗ್ರಹಗಳನ್ನು ಮಾತ್ರ ಕೆರೆಗಳಲ್ಲಿ ಸಂಪೂರ್ಣ ಸೂಕ್ತ ವ್ಯವಸ್ಥೆಯನ್ನು ಮಾಡಿ ವಿಸರ್ಜಿಸಬೇಕಾಗಿರುವದರಿಂದ ತಾ. 5 ರಂದು ನಡೆಯುವ ಗಣೇಶ ಹಬ್ಬದಂದು ಸಾರ್ವಜನಿಕರು ಮಣ್ಣ್ಣಿನಿಂದ ತಯಾರಿಸಿದ ವಿಗ್ರಹಗಳನ್ನು ಇಡಲು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ಮನವಿ ಮಾಡಿದ್ದಾರೆ.