ಮಡಿಕೇರಿ, ಆ. 19: ರಿಯೋ ಒಲಂಪಿಕ್ಸ್‍ನಲ್ಲಿ ಭಾರತ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಗೆದ್ದುಕೊಂಡಿದೆ. ಬ್ಯಾಡ್‍ಮಿಂಟನ್‍ನಲ್ಲಿ ಸಿಂಧು ಬೆಳ್ಳಿ ಪದಕ ಗಳಿಸಿದ್ದಾಳೆ. ಚಿನ್ನ ಗೆಲ್ಲಬಹುದೆಂಬ ಬಹುನಿರೀಕ್ಷೆಯಿತ್ತಾದರೂ ಅಂತಿಮ ಹಣಾಹಣಿಯಲ್ಲಿ ಸ್ಪೇನ್‍ನ ಮರಿನ್ ಅವರೆದುರು 21-19, 12-21, 15-21 ಸೆಟ್‍ಗಳಿಂದ ಸೋನಲುಭವಿಸಿದರು.

ತೀವ್ರ ಹಣಾಹಣಿ ಹಾಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕೊನೆಗೂ ಮರಿನ್ ಎದುರು ಶರಣಾಗಬೇಕಾಯಿತು. ಕುಸ್ತಿಯಲ್ಲಿ ಸಾಕ್ಷಿ ಕಂಚು ಪದಕ ಗಳಿಸಿದರೆ, ಇದೀಗ ಬ್ಯಾಡ್‍ಮಿಂಟನ್ ಸಿಂಧು ಬೆಳ್ಳಿ ಪದಕ ಗಳಿಸುವ ಮೂಲಕ ಭಾರತಕ್ಕೆ ಎರಡು ಪದಕ ಸಿಕ್ಕಿದಂತಾಗಿದೆ. ಅದರಲ್ಲೂ ಬ್ಯಾಡ್‍ಮಿಂಟನ್ ಬೆಳ್ಳಿ ಪದಕ ಗಳಿಸಿದ ಪ್ರಥಮ ಮಹಿಳೆ ಎಂಬ ಕೀರ್ತಿಗೆ ಸಿಂಧು ಪಾತ್ರರಾಗಿದ್ದಾರೆ.