ಗೋಣಿಕೊಪ್ಪಲು, ನ. 23: ಹಾತೂರು ಯೂತ್ ಕ್ಲಬ್ ಹಾಗೂ ಹಾಕಿ ಕೂರ್ಗ್ ಆಶ್ರಯದಲ್ಲಿ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಚೊಚ್ಚಲ ಬಾರಿ ಆರಂಭಗೊಂಡ ಫೀಲ್ಡ್ ಮಾರ್ಷಲ್ ಕೊಡಂದೇರ ಕಾರ್ಯಪ್ಪ ಹಾಕಿ ಪಂದ್ಯಾವಳಿಗೆ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ಚಾಲನೆ ನೀಡಿದರು.ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಒಲಿಂಪಿಯನ್ ಬಾಳೆಯಡ ಸುಬ್ರಮಣಿ, ತಾನು ಸೇರಿದಂತೆ ದೇಶಕ್ಕೆ ಹಾಕಿ ಪ್ರತಿಭೆಯನ್ನು ನೀಡಿದ ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನ ಇಂದು ಟರ್ಫ್ ಮೈದಾನವಾಗಿ ಅಭಿವೃದ್ಧಿü ಹೊಂದಿರುವದು ಕ್ರೀಡೆಗೆ ಪ್ರೋತ್ಸಾಹ ನೀಡಿದಂತಾಗಿದೆ. ದೇಶಕ್ಕೆ ಇನ್ನಷ್ಟು ಹಾಕಿ ಪ್ರತಿಭೆಯನ್ನು ಜಿಲ್ಲೆ ನೀಡುವಂತಾಗಲು ಹಾಕಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಹಾತೂರು ಗ್ರಾ.ಪಂ. ಉಪಾಧ್ಯಕ್ಷ ಕುಪ್ಪಂಡ ಪೂವಣ್ಣ, ದಾನಿಗಳಾದ ಕಿಲನ್ ಗಣಪತಿ, ಕೇಳಪಂಡ ಬಾಬು, ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಎ.ಕೆ. ಪಾರ್ವತಿ, ಪೊನ್ನಂಪೇಟೆ ಪ್ರೌಢÀಶಾಲೆ ಮುಖ್ಯ ಶಿಕ್ಷಕಿ ಚಂದನ, ಹಾಕಿಕೂರ್ಗ್ ಉಪಾಧ್ಯಕ್ಷ ಕಳ್ಳಿಚಂಡ ಪ್ರಸಾದ್, ಕಾರ್ಯದರ್ಶಿ ಪಳಂಗಂಡ ಲವ, ಹಾತೂರು ಯೂತ್ ಕ್ಲಬ್ ಪದಾಧಿಕಾರಿಗಳಾದ ಸೋಮೆಯಂಡ ಅಪ್ಪಯ್ಯ, ಸಣ್ಣುವಂಡ ಲೋಕೇಶ್ ಹಾಗೂ ಮುಕ್ಕಾಟಿರ ಚಿಣ್ಣಪ್ಪ ಉಪಸ್ಥಿತರಿದ್ದರು.

ಫಲಿತಾಂಶ : ಪಂದ್ಯಾವಳಿಯಲ್ಲಿ ಎಎಸ್‍ಸಿ ಅಮ್ಮತ್ತಿ, ಇವೈಸಿ ಬಾಡಗ ಹಾಗೂ ಈಗಲ್ಸ್ ಅಮ್ಮತ್ತಿ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶ ಪಡೆದಿವೆ.

ಎಎಸ್‍ಸಿ ಅಮ್ಮತ್ತಿ ತಂಡವು ಡ್ರಿಬ್‍ಲ್ ಹೆಂಪ್ ತಂಡವನ್ನು ಶೂಟೌಟ್‍ನಲ್ಲಿ 5-4 ಗೋಲುಗಳಿಂದ ಮಣಿಸಿ ಗೆಲುವು ದಾಖಲಿಸಿತು. ಡ್ರಿಬ್‍ಲ್ ತಂಡದ ಆಟಗಾರ ಶ್ರೀಧರ್ 3ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್‍ನ್ನು ಗೋಲಾಗಿ ಪರಿವರ್ತಿಸಿದರು. 46ನೇ ನಿಮಿಷದಲ್ಲಿ ಅಮ್ಮತ್ತಿ ಪರ ಮಹೇಂದ್ರ ಗೋಲು ಹೊಡೆದು ಸಮಬಲಗೊಳಿಸಿದರು. ಶೂಟೌಟ್‍ನಲ್ಲಿ ಅಮ್ಮತ್ತಿ ಪರ ತಮಿಳರಸ್, ವೀರಾತಮಿಳ್, ರಮೇಶ್, ರಾಜಾ, ಡ್ರಿಬ್‍ಲ್ ಪರ ಶ್ರೀಧರ್, ಅರೋನ್, ಧನುಶ್ ಗೋಲು ಹೊಡೆದರು.

ಬೇಗೂರು ಈಶ್ವರ ಯೂತ್ ಕ್ಲಬ್ ತಂಡವು ಆರ್‍ಎಸ್‍ಸಿ ಬಾಡಗ ತಂಡವನ್ನು 7-6 ಗೋಲುಗಳಿಂದ ಶೂಟೌಟ್‍ನಲ್ಲಿ ಸೋಲಿಸಿತು. 3-3 ಗೋಲುಗಳ ಸಮಬಲ ಸಾಧಿಸಿದ್ದು, ಶೂಟೌಟ್‍ನಲ್ಲಿ ಬೇಗೂರು ಪರ ಮಿಲನ್ ಬಾರಿಸಿದ ಏಕೈಕ ಗೋಲಿನಿಂದ ಗೆಲುವು ಪಡೆಯಿತು. ಈಶ್ವರ ತಂಡದ ಪರ 9 ರಲ್ಲಿ ಮಿಲನ್, 43ರಲ್ಲಿ ದೀಪಕ್, 45ನೇ ನಿಮಿಷದಲ್ಲಿ ಗುರು, ಬಾಡಗ ಪರ 12 ಹಾಗೂ 41ನೇ ನಿಮಿಷದಲ್ಲಿ ದೀಕ್ಷಿತ್, 36ರಲ್ಲಿ ಪ್ರತಿಕ್ ಗೋಲು ಹೊಡೆದರು.

ಅಮ್ಮತ್ತಿ ಈಗಲ್ಸ್ ತಂಡವು ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡವನ್ನು 4-1 ಗೋಲುಗಳಿಂದ ಮಣಿಸಿತು. ಈಗಲ್ಸ್ ಪರ ಡ್ಯಾನಿ 34 ಹಾಗೂ 47ನೇ ನಿಮಿಷದಲ್ಲಿ 2 ಗೋಲು ಹೊಡೆಯುವ ಮೂಲಕ ಗೆಲುವಿನ ರೂವಾರಿಯಾದರು. 48ನೇ ನಿಮಿಷದಲ್ಲಿ ಚಿರಂತ್, 59ನೇ ನಿಮಿಷದಲ್ಲಿ ಆಕಾಶ್ ಗೋಲು ಹೊಡೆದರು. ಹಾಸ್ಟೆಲ್ ಪರ 15ನೇ ನಿಮಿಷದಲ್ಲಿ ಭಾಷಾ ಏಕೈಕ ಗೋಲು ಹೊಡೆದರು.

ವೀಕ್ಷಕ ವಿವರಣೆಯನ್ನು ಚೆಪ್ಪುಡೀರ ಕಾರ್ಯಪ್ಪ, ಸುಳ್ಳಿಮಾಡ ಸುಬ್ಬಯ್ಯ ಹಾಗೂ ಅಜ್ಜಮಾಡ ಪೊನ್ನಪ್ಪ ನೀಡಿದರು. ತೀರ್ಪು ಗಾರರುಗಳಾಗಿ ಬೊಳ್ಳಚಂಡ ನಾಣಯ್ಯ, ಕುಪ್ಪಂಡ ದಿಲನ್, ವಾಟೇರಿರ ಮೊಣ್ಣಪ್ಪ, ಕೋಡಿಮಣಿ ಯಂಡ ಗಣಪತಿ, ನೆಲ್ಲಮಕ್ಕಡ ಪವನ್ ಹಾಗೂ ಕೊಂಡೀರ ಕೀರ್ತಿ, ತಾಂತ್ರಿಕ ವರ್ಗದಲ್ಲಿ ಹರಿಣಾಕ್ಷಿ, ಮತ್ರಂಡ ಬೋಪಣ್ಣ ಹಾಗೂ ವಿನೋದ್ ಕಾರ್ಯನಿರ್ವಹಿಸಿದರು.