ಕುಶಾಲನಗರ, ಸೆ 12: ಅಕ್ರಮವಾಗಿ ಬೀಟೆ ಮರ ಸಾಗಾಟ ನಡೆಸುತ್ತಿದ್ದ ಆರೋಪಿಗಳನ್ನು ಮಾಲು ಸಹಿತ ಕುಶಾಲನಗರ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿ ದ್ದಾರೆ. ಸ್ವರಾಜ್ ಮಜ್ದಾ ವಾಹನ (ಕೆಎ.21 ಎ.1549)ದಲ್ಲಿ ಬೀಟೆ ಮರದ ನಾಟಾಗಳನ್ನು ಸಾಗಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮುಂಜಾನೆ 3.30 ರ ಸಮಯದಲ್ಲಿ ಧಾಳಿ ನಡೆಸಿದ ಅಧಿಕಾರಿಗಳು ಮಾಲು ಸಹಿತ ವಾಹನವನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಕುಶಾಲನಗರ ಅರಣ್ಯ ವಲಯಾಧಿಕಾರಿ ಕೆ.ಎ. ನೆಹರು ತಿಳಿಸಿದ್ದಾರೆ. ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ ಮಾರ್ಗದರ್ಶನ ದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗುಡ್ಡೆಹೊಸೂರು ಬಳಿ ವಾಹನ ಸಹಿತ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳ ಲಾಯಿತು. ಓರ್ವ ಆರೋಪಿ ಕೊಟ್ಟಮುಡಿಯ ಅಬ್ಬಾಸ್ ಎಂಬಾತ ಪರಾರಿಯಾಗಿದ್ದಾನೆ. ಚೆರಿಯ ಪರಂಬು ಗ್ರಾಮದ ಶಾಹಿದ್ ಮತ್ತು ಕೆಆರ್ ನಗರದ ರಾಜೇಶ್ ಎಂಬವರು ಬಂಧಿತ ಆರೋಪಿಗಳು ಎಂದು ನೆಹರು ಮಾಹಿತಿ ನೀಡಿದ್ದಾರೆ. ನಾಪೋಕ್ಲು ಕಡೆಯಿಂದ ಮೈಸೂರು ಕಡೆಗೆ ಈ ಮರ ಸಾಗಾಟವಾಗುತ್ತಿದ್ದು, ಅಂದಾಜು ರೂ. 5 ಲಕ್ಷ ಮೌಲ್ಯದ ಮರ ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ, ವಲಯ ಅರಣ್ಯಾಧಿಕಾರಿ ಕೆ.ಎ. ನೆಹರು, ಸಹಾಯಕ ವಲಯ ಅರಣ್ಯಾಧಿಕಾರಿಗಳಾದ ರಂಜನ್, ಶಿವರಾಂ, ದೇವಯ್ಯ, ಸಿಬ್ಬಂದಿ ಗಳಾದ ಸುನೀಲ್, ಪೂಣಚ್ಚ, ಮಂಜೇಗೌಡ, ಚಂದ್ರ ಮತ್ತಿತರರು ಇದ್ದರು.