ಮಡಿಕೇರಿ ಡಿ.14 :ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ರಚನೆಗೊಂಡ ದಿನವಾದ ಡಿಸೆಂಬರ್ 15 ರಂದು ಅರೆಭಾಷೆ ಸೌಹಾರ್ದ ದಿನಾಚರಣೆÉಯನ್ನು ಆಚರಿಸಲು ಅಕಾಡೆಮಿ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.2011 ಡಿಸೆಂಬರ್ 15 ರಂದು ಅಂದಿನ ಮುಖ್ಯ ಮಂತ್ರಿ ಡಿ.ವಿ. ಸದಾನಂದ ಗೌಡರು ಹಾಗೂ ವಿಧಾನ ಸಭಾ ಅಧ್ಯಕ್ಷರಾಗಿದ್ದ ಕೆ.ಜಿ. ಬೋಪಯ್ಯ ಅವರ ಸಹಕಾರದಿಂದ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ರಚನೆಗೊಂಡಿದೆ. ಇದರ ಪ್ರಯುಕ್ತ ತಾ.15 ರಂದು (ಇಂದು) ನಗರದ ಕೆಳಗಿನ ಗೌಡ ಸಮಾಜದಲ್ಲಿ ಅರೆಭಾಷೆ ಸೌಹಾರ್ದ ದಿನಾಚರಣೆ ನಡೆಯಲಿದೆಯೆಂದು ತಿಳಿಸಿದರು.

ಶಾಸಕ ಕೆ.ಜಿ. ಬೋಪಯ್ಯ ಅವರು ಕಾರ್ಯಕ್ರಮ ಉದ್ಘಾಟಿಸ ಲಿದ್ದು, ಪಟ್ಟಡ ಶಿವಕುಮಾರ್ ಅರೆಭಾಷೆ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ. ಅರೆ ಭಾಷೆ, ಕಲೆ, ಸಾಹಿತ್ಯ ಸಂಸ್ಕøತಿ, ಜನಪದ ಇವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅರೆಭಾಷೆಯ ಸಂಘ ಸಂಸ್ಥೆಗಳ ಹಾಗೂ ಸಮಾಜ ಬಾಂಧವರ ಅಭಿಪ್ರಾಯ ಸಲಹೆ ಸೂಚನೆಗಳಿಗೆ ಕಾರ್ಯಕ್ರಮದಲ್ಲಿ ಅವಕಾಶ ಕಲ್ಪಿಸಲಾಗುವದೆಂದು ಹೇಳಿದರು.

ಕಲಾವಿದರಿಗೆ ಅವಮಾನ ಮಾಡಿಲ್ಲ

ಕಲಾವಿದೆ ಮಿಲನಾ ಭರತ್ ತಂಡಕ್ಕೆ ಅಕಾಡೆಮಿಯಿಂದ ಆರು ಬಾರಿ ಕಾರ್ಯಕ್ರಮ ನೀಡಲು ಅವಕಾಶ ನೀಡಲಾಗಿತ್ತು. ತೃಪ್ತಿ ಇಲ್ಲದ ಅವರು ಪ್ರತಿ ಸಂದರ್ಭ ಕಿರಿಕಿರಿವುಂಟು ಮಾಡಿದ್ದಾರೆಂದು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಹೇಳಿದ್ದಾರೆ.

ಹೊಸದಿಲ್ಲಿ, ಮೈಸೂರು, ಕುಶಾಲನಗರ, ಚೆಂಬು, ಪುತ್ತೂರಿನಲ್ಲಿ ನಡೆದ ಅಕಾಡೆಮಿ ಕಾರ್ಯಕ್ರಮದಲ್ಲಿ ನೃತ್ಯ ರೂಪಕ ಪ್ರದರ್ಶಿಸಲು ಅವಕಾಶ ನೀಡಲಾಗಿದೆ. ಹೀಗಿದ್ದರೂ ತಮ್ಮನ್ನು ಸರಿಯಾಗಿ ನೋಡಲಿಲ್ಲ ಎಂದು ಪದೇ ಪದೇ ನಮಗೆ ತೊಂದರೆ - ಕಿರಿಕಿರಿವುಂಟು ಮಾಡಿದ್ದಾರೆಂದು ದೂರಿದರು.

ಮಿಲನಾ ಭರತ್ ಒಳ್ಳೆಯ ಕಲಾವಿದರಾಗಿದ್ದು, ಪ್ರತಿಭಾನ್ವಿತ ರಾಗಿದ್ದಾರೆ. ಅವರು ಹೇಳುವಂತೆ ಮರಗೋಡು ತಂಡ ಯಾವದೇ ಕಾರ್ಯಕ್ರಮ ನಕಲು ಮಾಡುತ್ತಿಲ್ಲ. ಅವರ ಕಾರ್ಯಕ್ರಮ ಅಪಾರ ಜನಮನ್ನಣೆ ಪಡೆದಿದೆ. ತಾವು ಮಾಡುವ ಕಾರ್ಯಕ್ರಮವನ್ನು ಅವರು ಮಾಡಬಾರದೆಂದು ಹೇಳುವದರಲ್ಲಿ ಅರ್ಥವಿಲ್ಲ. ತಮ್ಮ ಕಾರ್ಯಕ್ರಮ ಬೇರೆಯವರು ಮಾಡದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ವಕೀಲರ ಮೂಲಕ ರಿಜಿಸ್ಟ್ರಾರ್‍ಗೆ ಹೇಳಿಸಿದ್ದಾರೆ. ನ್ಯಾಯಾಲಯದ ಆದೇಶದ ಪ್ರತಿ ಇಲ್ಲದೇ ಅದನ್ನು ಪಾಲನೆ ಮಾಡಲಾಗದೆಂದು ರಿಜಿಸ್ಟ್ರಾರ್ ಸಮಜಾಯಿಷಿ ನೀಡಿದ್ದಾರೆ.

ಸುಳ್ಯದ ಸಮ್ಮೇಳನಕ್ಕೆ ಅಭಿನಯ ಕಲಾ ಮಿಲನಾ ಟ್ರಸ್ಟ್ ತಂಡವನ್ನು ಕಾರ್ಯಕ್ರಮ ನೀಡಲು ಆಹ್ವಾನಿಸಿರಲಿಲ್ಲ. ನಮ್ಮ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿರುವಾಗ ನಮ್ಮ ಬ್ಯಾನರ್‍ನಡಿ ಅವರು ಕಾರ್ಯಕ್ರಮ ನೀಡುವದು ಬೇಡ ಎಂದು ಸುಳ್ಯದ ಗೌಡರ ಯುವ ಸೇವಾ ಸಂಘಕ್ಕೆ ಸ್ಪಷ್ಟವಾಗಿ ಹೇಳಿದ್ದೆವು. ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸುವ ಉದ್ದೇಶದಿಂದ ನಮ್ಮ ವೇದಿಕೆಯಲ್ಲಿ ಕಾರ್ಯಕ್ರಮ ನೀಡುವ ಪ್ರಯತ್ನ ನಡೆಸಿರುವ ಅನುಮಾನ ಮೂಡಿತ್ತೆಂದರು.

ಅಕಾಡೆಮಿ ಕಚೇರಿಗೆ ಕರೆ ಮಾಡಿದ್ದ ಮಿಲನಾ ಭರತ್ ತನ್ನ ಕಲಾತಂಡದ ಹೆಸರು ಆಹ್ವಾನ ಪತ್ರದಲ್ಲಿ ಮುದ್ರಿಸದೇ ಇರುವದನ್ನು ಪ್ರಶ್ನಿಸಿದ್ದರು. ಅಲ್ಲದೇ ನಾವು ಬರಬೇಕಾ ಎಂದು ವಿಚಾರಿಸಿದ್ದರು. ಸಂಘಟಕರು ಬರುವದು ಬೇಡ ಎಂದು ಹೇಳಿದ್ದ ಬಳಿಕವೂ ಆಗಮಿಸಿದ್ದರು. ಕಪ್ಪು ಬಾವುಟ ಪ್ರದರ್ಶಿಸಿದಾಗ, ಸಂಘಟಕರು ಹೊರಗೆ ಕಳುಹಿಸಿದ್ದಾರೆ. ಈ ವೇಳೆ ತಳ್ಳಾಟ ನಡೆದಿದ್ದು, ಕಲಾವಿದರಿಗೆ ಅಪಮಾನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಾರ್‍ನಲ್ಲಿ ಮದ್ಯ ಸೇವಿಸುತ್ತಿದ್ದ ಮೂವರು ತನಗೆ ಗುಂಡು ಹೊಡೆಯುತ್ತೇವೆಂದು ಹೇಳಿದ್ದಾರೆ. ಆಟೋದಲ್ಲಿ ತೆರಳುತ್ತಿದ್ದ ವೇಳೆ ನನ್ನ ಮೇಲೆ ಹಲ್ಲೆ ನಡೆಸುವ ಮಾತುಕತೆ ನಡೆಸಿದ್ದಾರೆ. ಕಪ್ಪು ಬಾವುಟದೊಂದಿಗೆ ಪ್ರತಿಭಟನೆ ನಾಡಲು ಸಿದ್ಧತೆ ಮಾಡಿಕೊಂಡು ಬಂದಿದ್ದರೆಂದು ದೂರಿದರು. ಸದಸ್ಯರಾದ ಮಂದ್ರೀರ ಮೋಹನ್ ದಾಸ್, ಕುಡೆಕಲ್ ಸಂತೋಷ್ ಇದ್ದರು.