ಮಡಿಕೇರಿ, ಡಿ. 12: ಜಿಲ್ಲೆಯಲ್ಲಿ ಶಾಫಿ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.ಈದ್ ಮಿಲಾದ್ ಪ್ರಯುಕ್ತ ಜಿಲ್ಲೆಯ ವಿವಿಧ ಮಸೀದಿ, ಮದ್ರಸಗಳಲ್ಲಿ ವಿಶೇಷ ಪ್ರಾರ್ಥನೆ, ಧಾರ್ಮಿಕ ಗುರುಗಳಿಂದ ಧಾರ್ಮಿಕ ಪ್ರವಚನಗಳು ನಡೆದವು. ಸಿದ್ದಾಪುರ ದಿಡ್ಡಳ್ಳಿಯ ನಿರಾಶ್ರಿತರರೊಂದಿಗೆ ಕೊಡಗು ಮುಸ್ಲಿಂ ಸಮಾಜ ಭಾಂದವರು ಈದ್ ಮಿಲಾದ್ ಹಬ್ಬವನ್ನು ಆಚರಣೆ ಮಾಡಿದರು.ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ ಸಂದೇಶಗಳನ್ನು ಅದಿವಾಸಿಗಳೊಂದಿಗೆ ಹಂಚಿಕೊಂಡು ಈದ್ ಮಿಲಾದ್ ಅಂಗವಾಗಿ ನಿರಾಶ್ರಿತರುಗಳಿಗೆ ಅಹಾರ ವಸ್ತುಗಳನ್ನು ವಿತರಣೆ ಮಾಡಿದರು.

ಕೊಡಗು ಮುಸ್ಲಿಂ ಸಮಾಜದ ಉಪಾಧ್ಯಕ್ಚ ಖಾಸಿಂ ಪ್ರಮುಖರಾದ ವಕೀಲ ಕುಞÂ ಅಬ್ದಲ್ಲಾ, ಎಂ.ಎಚ್. ಹನೀಫ್, ಹಂಸು, ಎ.ಕೆ. ಅಬ್ದಲ್ಲಾ, ಹನೀಫ್, ಬಶೀರ್, ರಜಾಕ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಕುಶಾಲನಗರ

ಕುಶಾಲನಗರದ ವಿವಿಧೆಡೆ ಮಸೀದಿಗಳಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್‍ರವರ 1491ನೇ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಬೈಚನಹಳ್ಳಿಯ ಶಾದಿಮಹಲ್, ಹಿಲಾಲ್ ಮಸೀದಿ, ದಾರುಲ್ ಉಲೂಂ ಮದ್ರಸ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಈದ್ ಮಿಲಾದ್ ಆಚರಣೆ ಸಾಮೂಹಿಕವಾಗಿ ನಡೆಯಿತು

(ಮೊದಲ ಪುಟದಿಂದ) ಹಿರಿಯ ನಿವೃತ್ತ ಶಿಕ್ಷಕರಾದ ಜನಾಬ್ ಹಾಜಿ ಎಂ.ಹೆಚ್.ನಝೀರ್ ಅಹ್ಮದ್ ಮಾತನಾಡಿ, ಇಂದಿನ ಯುವ ಪೀಳಿಗೆಯು ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ, ಸಂಸ್ಕøತಿಯನ್ನು ದೂರಮಾಡುತ್ತಿರುವದರಿಂದ ಧರ್ಮದ ಆಚಾರ ವಿಚಾರಗಳನ್ನು ಮರೆಯುತ್ತಿದ್ದಾರೆ ಎಂದು ಪ್ರವಚನದಲ್ಲಿ ಕರೆ ನೀಡಿದರು.

ಕುಶಾಲನಗರದ ಬೈಚನಹಳ್ಳಿಯ ಶಾದಿಮಹಲ್‍ನಲ್ಲಿ ಹಿಲಾಲ್ ಮಸೀದಿ ಹಾಗೂ ದಾರುಲ್ ಉಲೂಂ ಮದ್ರಸ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಅವರು, ಆಧುನಿಕ ಜಗತ್ತಿಗೆ ಯುವ ಪೀಳಿಗೆ ತುತ್ತಾಗಿ ಸಂಸ್ಕøತಿಯನ್ನು ದೂರ ಮಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಧರ್ಮ ಆಚಾರ ವಿಚಾರಗಳನ್ನು ಮರೆಯುತ್ತಿದ್ದಾರೆ. ಆಧುನಿಕ ಜಗತ್ತಿನಲ್ಲಿ ಯುವ ಪೀಳಿಗೆ ಮೊಬೈಲ್, ಸ್ಮಾರ್ಟ್‍ಫೋನ್, ವಾಟ್ಸಾಪ್, ಫೇಸ್ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಬಿಟ್ಟಿದ್ದಾರೆ. ಇದರಿಂದ ಧರ್ಮದ ಆಚಾರಗಳನ್ನು ಕೈಬಿಡುತ್ತಿದ್ದಾರೆ. ಯುವ ಪೀಳಿಗೆಯನ್ನು ದಾರಿತಪ್ಪಿಸುತ್ತಿರುವ ಈ ಚಟುವಟಿಕೆಗಳನ್ನು ಬಿಟ್ಟು, ಸಂಸ್ಕøತಿಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಯುವ ಪೀಳಿಗೆಗೆ ಸಲಹೆ ನೀಡಿದರು.

ಹಿಲಾಲ್ ಮಸೀದಿಯ ಧರ್ಮಗುರುಗಳಾದ ಮುಹಮ್ಮದ್ ಫೈಝಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರವಾದಿ ಮುಹಮ್ಮದ್ ಪೈಗಂಬರ್‍ರವರ ಸಂದೇಶಗಳನ್ನು ಸಾರಿದರು.

ದಾರುಲ್ ಉಲೂಂ ಮದ್ರಸದ ವಿದ್ಯಾರ್ಥಿಗಳು, ವಿದ್ಯಾರ್ಥಿ ಫೆಸ್ಟ್, ಬುರ್ದಾ, ದಫ್ ಮುಂತಾದ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ವಿಜೇತರಿಗೆ ಹಿಲಾಲ್ ಮಸೀದಿಯ ಅಧ್ಯಕ್ಷ ಜನಾಬ್, ಎ.ಸಲೀಂ ರವರು ಬಹುಮಾನ ವಿತರಿಸಿದರು.

ಕಾರ್ಯಕ್ರಮದ ಭಾಗವಾಗಿ ನುಸ್ರತುಲ್ ಇಸ್ಕಾಂ ಯೂತ್ ಅಸೋಸಿಯೇಶನ್ ವತಿಯಿಂದ ಜನಾಬ್ ಹಾಜಿ ಎಂ.ಹೆಚ್. ನಝೀರ್ ಅಹಮ್ಮದ್, ಹಿಲಾಲ್ ಮಸೀದಿ ಅಧ್ಯಕ್ಷರಾದ ಜನಾಬ್ ಎ.ಸಲೀಂ, ನುಸ್ರತುಲ್ ಇಸ್ಕಾಂ ಯೂತ್ ಅಸೋಸಿಯೇಶನ್‍ನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಶಾಜಿಮೋನ್, ದಾರುಲ್ ಉಲೂಂ ಮದ್ರಸದ ಅಧ್ಯಾಪಕರಾದ ನಾಸಿರ್‍ರವರಿಗೆ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಕಳೆದ ಅವಧಿಯಲ್ಲಿ ದಾರುಲ್ ಉಲೂಂ ಮದ್ರಸದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. .

ದಾರುಲ್ ಉಲೂಂ ಮದ್ರಸದ ವಿದ್ಯಾರ್ಥಿ ಸ್ವತಃ ಕೈಬರಹದಿಂದ ರಚಿಸಿದ ಸುಗರ್ದಂ ಎಂಬ ಮಾಸಿಕವನ್ನು ಹಿರಿಯ ಶಿಕ್ಷಕರಾದ ಜನಾಬ್ ಎಂ.ಹೆಚ್. ನಝೀರ್ ಅಹ್ಮದ್ ಹಾಗೂ ಹಿಲಾಲ್ ಮಸೀದಿ ಅಧ್ಯಕ್ಷ ಜನಾಬ್ ಎ. ಸಲೀಂ ಬಿಡುಗಡೆ ಮಾಡಿದರು. ಹಿಲಾಲ್ ಮಸೀದಿ ಕಾರ್ಯದರ್ಶಿ ಜನಾಬ್ ರಹಮುಲ್ಲಾ ಸಾಹೇಬ್ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಸ್ವಾಗತ ಕೋರಿದರು.

ಕಾರ್ಯಕ್ರಮಕ್ಕೂ ಮುನ್ನ ಕುಶಾಲನಗರದ ಮುಖ್ಯಬೀದಿಗಳಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್‍ರವರ ಸಂದೇಶ ಸಾರುವ ಮೀಲಾದ್ ರ್ಯಾಲಿ ನಡೆಸಿದರು.

ಕೂಡಿಗೆ: ಮೊಯಿದ್ದೀನ್ ಜುಮ್ಮಾ ಮಸೀದಿಯ ವತಿಯಿಂದ ಈದ್-ಮಿಲಾದ್ ಆಚರಿಸಲಾಯಿತು.

ಈದ್-ಮಿಲಾದ್ ಆಚರಣೆಯ ಅಂಗವಾಗಿ ಮಸೀದಿಯ ಆವರಣದಿಂದ ಕೂಡಿಗೆಯ ಪ್ರಮುಖ ಬೀದಿಗಳಲ್ಲಿ ಕೂಡುಮಂಗಳೂರು ಡೈರಿ ಸರ್ಕಲ್ ವರೆಗೆ ಮೆರವಣಿಗೆ ನಡೆಸಲಾಯಿತು.

ಸಮುದಾಯದ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕøತಿಕ ಕಾರ್ಯ ಕ್ರಮಗಳನ್ನು ಏರ್ಪಡಿಸಲಾಗಿತ್ತು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಈ ಸಂದರ್ಭ ಸಮಿತಿಯ ಅಧ್ಯಕ್ಷÀ ಪ್ರಕ್ರುದ್ದೀನ್, ಉಪಾಧ್ಯಕ್ಷ ರಜಾಕ್, ಕಾರ್ಯದರ್ಶಿ ಕೆ. ನೌಫಲ್, ಕೊಡಗು ಜಿಲ್ಲಾ ಐಎನ್‍ಟಿಯೂಸಿ ಅಧ್ಯಕ್ಷ ಟಿ.ಪಿ.ಹಮೀದ್ ಸೇರಿದಂತೆ ಸಮಿತಿಯ ಸದಸ್ಯರು ಭಾಗವಹಿಸಿದ್ದರು.

ಸೋಮವಾರಪೇಟೆ: ಮಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ ಈದ್‍ಮಿಲಾದ್ ಹಬ್ಬವನ್ನು ಸೋಮವಾರಪೇಟೆ ವ್ಯಾಪ್ತಿಯ ಮುಸ್ಲಿಂ ಬಾಂಧವರು ಸಂಭ್ರಮ ಸಡಗರದಿಂದ ಆಚರಿಸಿದರು.

ಬೆಳಿಗ್ಗೆ ಮಸೀದಿಗಳಲ್ಲಿ ದಿನದ ಅಂಗವಾಗಿ ವಿಶೇಷ ಪ್ರಾರ್ಥನೆ ನಡೆಯಿತು. ನಂತರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ದಫ್‍ನೊಂದಿಗೆ ಮೆರವಣಿಗೆ ನಡೆಸಲಾಯಿತು. ಖಬರಸ್ಥಾನಕ್ಕೆ ತೆರಳಿ ಅಗಲಿದ ಅತ್ಮಗಳಿಗೆ ಶಾಂತಿ ಕೋರಲಾಯಿತು.

ಸಮೀಪದ ಹೊಸತೋಟ ಗ್ರಾಮದಲ್ಲಿ ಈದ್‍ಮಿಲಾದ್‍ನ್ನು ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮದ ಜಾಮೀಯಾ ಮಸೀದಿ ಆವರಣದಲ್ಲಿ ಜಮಾತ್ ಅಧ್ಯಕ್ಷ ಸೈದು ಹಾಜಿ ಅವರು ಧ್ವಜಾರೋಹಣ ಮಾಡಿದರು. ಸ್ಥಳೀಯ ಖತೀಬರಾದ ಅಬೂಬಕರ್ ಪ್ರಾರ್ಥನೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಪ್ರವಾದಿ ಮಹಮ್ಮದ್ ಪೈಗಂಬರ್ ಅವರ 1491ನೇ ಜನ್ಮ ದಿನವನ್ನು ವಿಶ್ವದ ಸಮಸ್ತ ಮುಸಲ್ಮಾನ ಬಾಂಧವರು ಈದ್ ಮಿಲಾದ್ ಹಬ್ಬವಾಗಿ ಆಚರಿಸಲಾಗುತ್ತಿದ್ದು, ಅವರು ಹಾಕಿಕೊಟ್ಟ ದಾರಿಯಲ್ಲಿ ಎಲ್ಲರೂ ನಡೆಯಬೇಕು. ಕೋಮುವಾದ ಹಾಗೂ ಭಯೋತ್ಪಾದನೆಯಂತಹ ಪಿಡುಗಿನ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಡುವ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸುವಂತೆ ಮಾಡಬೇಕು ಎಂದರು. ನಂತರ ಹೊಸತೋಟ ಮುಖ್ಯ ರಸ್ತೆಯಲ್ಲಿ ಈದ್‍ಮಿಲಾದ್ ಜಾಥಾ ನಡೆಯಿತು. ಈ ಸಂದರ್ಭ ಜಮಾತ್ ಉಪಾಧ್ಯಕ್ಷ ಮಹಮ್ಮದ್, ಮಿಲಾದ್ ಕಮಿಟಿ ಅಧ್ಯಕ್ಷ ಹಂಸ, ಕಾರ್ಯದರ್ಶಿ ಜೈನುದ್ದೀನ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಮಾದಾಪುರದ ಜುಮ್ಮಾ ಮಸೀದಿಯಲ್ಲಿ ನಡೆದ ಈದ್ ಮಿಲಾದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ಗಫಾರ್ ವಹಿಸಿದ್ದರು. ಜಮಾತ್ ಕಾರ್ಯದರ್ಶಿ ಎಂ.ಎ. ಮಜೀದ್ ಸ್ವಾಗತಿಸಿದರು. ಖತೀಬ ಅಬ್ದುಲ್ ಹಮೀದ್ ಅವರು ದುವಾ ನೆರವೇರಿಸಿದರು. ಈ ಸಂದರ್ಭ ಪ್ರಮುಖರಾದ ಉಮ್ಮರ್ ಎ.ಬಿ., ಸೈಯದ್, ಇಬ್ರಾಹಿಂ ಸೀದಿ, ಮುಸ್ತಾಫ, ಲತೀಫ್ ಸೇರಿದಂತೆ ಜಮಾತ್ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ನಂತರ ಮಕ್ಕಳಿಂದ ದಫ್ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಕೊನೆಯಲ್ಲಿ ಬಹುಮಾನ ವಿತರಿಸಲಾಯಿತು.

ಇದರೊಂದಿಗೆ ಕಾಗಡಿಕಟ್ಟೆ, ಬಜೆಗುಂಡಿ, ತಣ್ಣೀರುಹಳ್ಳದ ಪ್ರಾರ್ಥನಾ ಮಂದಿರಗಳಲ್ಲೂ ಈದ್‍ಮಿಲಾದ್ ಆಚರಿಸಲಾಯಿತು.

ಸುಂಟಿಕೊಪ್ಪ: ಈದ್‍ಮಿಲಾದ್ ಹಬ್ಬದ ಪ್ರಯುಕ್ತ ಸೋಮವಾರ ವಿವಿಧ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮುಖಾಂತರ ಪಟ್ಟಣದ ಕನ್ನಡ ವೃತ್ತದಲ್ಲಿ ಮಕ್ಕಳಿಂದ ವಿಶೇಷ ದಫ್ ಪ್ರದರ್ಶನವನ್ನು ನೀಡಿದ ಮುಸ್ಲಿಂ ಬಾಂಧವರ ಮಕ್ಕಳು ಧರ್ಮಗುರುಗಳೊಂದಿಗೆ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಮುಸ್ಲಿಂ ಬಾಂಧವರು ಮೆರವಣಿಗೆ ನಡೆಸುವ ಮೂಲಕ ಸಂಭ್ರಮ ಸಡಗರದಿಂದ ಮಹಮ್ಮದ್ ಪೈಗಂಬರರ ಹುಟ್ಟು ಹಬ್ಬವನ್ನು ಆಚರಿಸಿದರು.

ಪ್ರವಾದಿ ಮಹಮ್ಮದ್ ಪೈಗಂಬರರ 1491 ನೇ ಜನ್ಮದಿನದ ಅಂಗವಾಗಿ ಮುಸ್ಲಿಂ ಬಾಂಧವರು ಪಟ್ಟಣದಲ್ಲಿರುವ ವಿವಿಧ ಮಸೀದಿಗಳಾದ ಸುನ್ನಿ ಮುಸ್ಲಿಂ ಜಮಾಅತ್, ಸುನ್ನಿಶಾಫಿ ಜುಮ್ಮ ಮಸೀದಿ, ನೂರಲ್ ಜುಮಾ ಮಸ್ಜಿದ್ ಗದ್ದೆಹಳ್ಳ ಹನಫಿ ಜಮಾಅತ್ ಮದ್ರಸಗಳಾದ ಮುನವ್ವರಲ್ ಇಸ್ಲಾಂ ಮದ್ರಸ, ಖತೀಜ ಉಮ್ಮ ಮದ್ರಸ, ನೂರಿಯ ಮದ್ರಸ, ಹನಫಿ ಮದ್ರಸಗಳಲ್ಲಿ 4 ದಿನಗಳ ಕಾಲ ರಾತ್ರಿಯ ವೇಳೆ ವಿಶೇಷ ಪ್ರಾರ್ಥನೆ ಮತ್ತು ಧಾರ್ಮಿಕ ಗುರುಗಳಿಂದ ಪ್ರವಚನ ಮತ್ತು ಮಕ್ಕಳಿಗೆ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಕೊನೆಯ ದಿನವಾದ ಇಂದು ಮುಸ್ಲಿಂ ಬಾಂಧವರು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ನಗರದ ಮುಖ್ಯ ಬೀದಿಗಳಲ್ಲಿ ವಿವಿಧ ವೇಷ ಭೂಷಣಗಳೊಂದಿಗೆ ದಫ್ ಹೂಗುಚ್ಚಗಳನ್ನು ಹಿಡಿದ ಪುಟಾಣಿ ಮಕ್ಕಳು, ಕಾಟಿನೃತ್ಯ ತಂಡದ ಮಕ್ಕಳು ವಾಹನಗಳ ಅಲಂಕಾರ ದೊಂದಿಗೆ ಮುಸ್ಲಿಂ ಧಾರ್ಮಿಕ ಗುರುಗಳೊಂದಿಗೆ ಶಾಂತಿ ಸೌಹರ್ದತೆಯ ಪ್ರವಾದಿ ಮಹಮ್ಮದ್ ಫೈಗಂಬರರ ಘೋಷ ಯಾತ್ರೆಯು ಗದ್ದೆಹಳ್ಳದ ಗಾಂಧಿವೃತ್ತದವರೆಗೆ ತೆರಳಿತು.

ನಂತರ ವಿವಿಧ ಮದ್ರಸಗಳಲ್ಲಿ ಧಾರ್ಮಿಕ ಧರ್ಮಗುರುಗಳಿಂದ ಮಹಮ್ಮದ್ ಪೈಗಂಬರರ ಜೀವನ ಚರಿತ್ರೆಯ ಕುರಿತು ಪ್ರಭೋದನೆಯನ್ನು ನಡೆಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಇದೇ ಸಂದರ್ಭ ಮಸೀದಿಗಳಲ್ಲಿ ಅನ್ನ ಸಂತರ್ಪಣೆ ಯನ್ನು ಏರ್ಪಡಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ.ಲತೀಫ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಿಲ್ಲಾದ್ ಸಮಿತಿ ಅಧ್ಯಕ್ಷ ಕೆ.ಎ.ಉಸ್ಮಾನ್, ಹೆಚ್.ಯು. ಇಸಾಕ್‍ಖಾನ್ ಅವರು ಈದ್‍ಮಿಲಾದ್ ಹಬ್ಬದ ಶುಭಾಶಯ ಗಳನ್ನು ಇದೇ ಸಂದರ್ಭ ಕೋರಿದರು.

ಈ ಸಂದರ್ಭ ನೂರಲ್ ಜುಮ ಮಸೀದಿಯÀ ಅಧ್ಯಕ್ಷ ಬಶೀರ್, ಕಾರ್ಯದರ್ಶಿ ಹಾಗೂ ಮಾಜಿ ಅಧ್ಯಕ್ಷ ಮೊಯ್ದು ಕುಟ್ಟಿ, ಅಧ್ಯಕ್ಷ ಕೆ.ಇ.ಕರೀಂ, ಮುನವ್ವರಲ್ ಇಸ್ಲಾಂ ಮದ್ರಸದ ಅಧ್ಯಕ್ಷ ಇಬ್ರಾಹಿಂ ಕೆಂಚಟ್ಟಿ, ಧಾರ್ಮಿಕ ಗುರುಗಳು, ಖತ್ತೀಜ ಉಮ್ಮ ಮದ್ರಸ ದಾರ್ಮಿಕ ಗುರುಗಳು, ಕೆ.ಐ. ರಫೀಕ್ ಮತ್ತಿತರರು ಉಪಸ್ಥಿತರಿದ್ದರು. ಪಟ್ಟಣದ ಮಸೀದಿ, ಮದ್ರಸ ಹಸಿರು, ನೀಲಿ, ಬಿಳಿ ಬಣ್ಣದ ಬಂಟಿಂಗ್ಸ್, ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿತ್ತು.