ಗೋಣಿಕೊಪ್ಪಲು, ಸೆ. 12 : ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಕ್ರೀಡಾಕೂಟ ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ತಾ. 20 ರಿಂದ ಆರಂಭಗೊಳ್ಳಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಕೆ ಪಾಂಡು ತಿಳಿಸಿದ್ದಾರೆ.1 ರಿಂದ 10 ನೇ ತರಗತಿವರೆಗಿನ ವಿಭಾಗಗಳಲ್ಲಿ ನಡೆಯುವ ಕ್ರೀಡೆಯಲ್ಲಿ 39 ವಿವಿಧ ಕ್ರೀಡೆಗಳು ನಡೆಯಲಿದೆ. ಸುಮಾರು 2 ಸಾವಿರ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾ. 15 ರಂದು ಚೆಸ್ ಮತ್ತು ಟಿಟಿ ಪಂದ್ಯಾಟ ಅರ್ವತೋಕ್ಲು ಸರ್ವದೈವತಾ ಶಾಲೆಯಲ್ಲಿ, ಶಟಲ್ ಬ್ಯಾಡ್ಮಿಂಟನ್ ನಿನಾದ ಶಾಲೆ, ಹ್ಯಾಂಡ್‍ಬಾಲ್, ಬ್ಯಾಡ್ಮಿಂಟನ್ ಪೊನ್ನಂಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ.

ತಾ. 20 ರಂದು ಬಾಲಕ, ಬಾಲಕಿಯರ ಫುಟ್‍ಬಾಲ್, ಖೋಖೋ, ಥ್ರೋಬಾಲ್, ಹಾಕಿ, ವಾಲಿಬಾಲ್, ಕಬಡ್ಡಿ ಪಂದ್ಯಾಟಗಳು ನಡೆಯಲಿವೆ ಎಂದರು. ಕ್ರೀಡಾಕೂಟಕ್ಕೆ 2.5 ಲಕ್ಷ ರೂ. ವೆಚ್ಚವಾಗಲಿದೆ. ಶಿಕ್ಷಣ ಇಲಾಖೆಯಿಂದ 50 ಸಾವಿರ ನೀಡಲಾಗುವದು. ಉಳಿದ ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸಿ ನಡೆಸಲಾಗುವದು. ಉತ್ತಮ ಟ್ರೋಫಿ, ಊಟದ ವ್ಯವಸ್ಥೆಗಳನ್ನು ನೀಡಲಾಗುವದು ಎಂದರು.

ಗೋಷ್ಠಿಯಲ್ಲಿ ಕ್ರೀಡಾಕೂಟ ಸಂಚಾಲಕ ಡ್ಯಾನಿ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ ಆರ್ ಸುಬ್ಬಯ್ಯ, ದೈಹಿಕ ಶಿಕ್ಷಣ ಪರಿವೀಕ್ಷÀಕಿ ರತಿ, ಸಿಆರ್‍ಪಿ ತಿರುನೆಲ್ಲಿಮಾಡ ಜೀವನ್ ಉಪಸ್ಥಿತರಿದ್ದರು.