ಭಾಗಮಂಡಲ, ಅ. 2: ದೇಶಕ್ಕೆ ಸ್ವಾತಂತ್ರ್ಯ ಲಭಿಸಲು ಗೋಮಾತೆಯ ಪಾತ್ರವೂ ಪ್ರಮುಖವಾಗಿದೆ. ಆದರೆ ಇಂದು ದೇಶದಲ್ಲಿ ಗೋಮಾತೆಗೆ ಸ್ವಾತಂತ್ರ್ಯ ಇಲ್ಲದಿರುವದು ವಿಷಾದನೀಯ ಎಂದು ಉತ್ತರಾಖಂಡ ಕಪಿಲಾಶ್ರಮದ ಶ್ರೀರಾಮಚಂದ್ರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.ಶ್ರೀ ರಾಮಚಂದ್ರಾಪುರ ಮಠ, ಹವ್ಯಕ ಮಹಾಮಂಡಲ, ಮುಳ್ಳೇರಿಯ ಮಂಡಲ ಹಾಗೂ ಕೊಡಗು ಹವ್ಯಕ ವಲಯದ ಆಶ್ರಯದಲ್ಲಿ ಮಧೂರಿನಿಂದ ಹೊರಟ ‘ಗೋ ಕಿಂಕರ ಯಾತ್ರೆ'ಯನ್ನು ಭಾಗಮಂಡಲ ದಲ್ಲಿ ಶ್ರೀ ಭಗಂಡೇಶ್ವರ ದೇವಾಲಯದವರು ಹಾಗೂ ಸಾರ್ವಜನಿಕರು ಸ್ವಾಗತಿಸಿದ ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸ್ವಾಮೀಜಿ ಸಾರ್ವಜ ನಿಕರನ್ನು ಉದ್ದೇಶಿಸಿ ಮಾತನಾಡಿದರು. ಗೋಮಾತೆಯನ್ನು ರಾಷ್ಟ್ರಮಾತೆಯನ್ನಾಗಿ ಘೋಷಿಸುವಂತೆ ಆಗ್ರಹಿಸುವ ಮತ್ತು ಗೋತಳಿಯನ್ನು ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ‘ಗೋ ಕಿಂಕರ ಯಾತ್ರೆ'ಯನ್ನು ಹಮ್ಮಿಕೊಳ್ಳಲಾಗಿದೆ. ಭಾಗಮಂಡಲ ಶ್ರೀ ಭಗಂಡೇಶ್ವರ ಹಾಗೂ ಜೀವನದಿ ಕಾವೇರಿ ಸನ್ನಿಧಿಗೆ ಬಂದುದರಿಂದ ಯಾತ್ರೆಗೆ ಮತ್ತಷ್ಟು ಶಕ್ತಿ ದೊರೆತಂತಾಗಿದೆ ಎಂದು ಸ್ವಾಮೀಜಿ ಹೇಳಿದರು. ಶ್ರೀ ತಲಕಾವೇರಿ ದೇವಸ್ಥಾನದ ಮುಖ್ಯ ಅರ್ಚಕ ನಾರಾಯಣಾಚಾರ್ ಮಾತನಾಡಿ, ದೇಶದಲ್ಲಿ ಶೇ. 75ರಷ್ಟು ಜನತೆ ರೈತಾಪಿ ವರ್ಗಕ್ಕೆ ಸೇರಿದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಯಾತ್ರೆಗೆ ಶಕ್ತಿ ತುಂಬುವ ಕೆಲಸ ಸರ್ಕಾರದಿಂದಲೂ ಆಗಬೇಕಾಗಿದೆ ಎಂದರು.

ಈ ಸಂದರ್ಭ ಮಾಜಿ ಜಿ.ಪಂ. ಸದಸ್ಯ ಪಿ.ಎಂ. ರಾಜೀವ್, ಗ್ರಾ.ಪಂ. ಸದಸ್ಯ ರಾಜುರೈ, ಪ್ರಮುಖರಾದ ವಿಠಲಾಚಾರ್, ಹರೀಶ್ ಭವನ್, ಪಾರುಪತ್ಯೆಗಾರ ಪಾಪಯ್ಯ ಹಾಗೂ ಇನ್ನಿತರರು ಇದ್ದರು. ಯಾತ್ರೆ ಬಳಿಕ ಪಾಡಿ ಇಗ್ಗುತಪ್ಪ ದೇವಾಲಯದತ್ತ ತೆರಳಿತು.

ಪಾಡಿಯಲ್ಲಿ ಭವ್ಯ ಸ್ವಾಗತ

ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್, ಶ್ರೀ ಸಂಸ್ಥಾನ ಗೋಕರ್ಣ ಮತ್ತು ಶ್ರೀ ರಾಮಚಂದ್ರಾಪುರ ಮಠದ ಸಂಯುಕ್ತಾಶ್ರಯದಲ್ಲಿ ನಾಡಿನ ಸಂತರ ನೇತೃತ್ವದಲ್ಲಿ ಸೆ. 8ರಂದು ಆರಂಭಗೊಂಡ ಮಂಗಲ ಗೋಯಾತ್ರೆಗೆ ಕೊಡಗಿನ ಪ್ರಸಿದ್ಧ ಕ್ಷೇತ್ರ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ಸ&divound;್ನಧಿಯಲ್ಲಿ ಭವ್ಯ ಸ್ವಾಗತ ನೀಡಲಾಯಿತು.

ಈ ಸಂದರ್ಭದಲ್ಲಿ ಗೋ - ಕಿಂಕರರನ್ನು ಉದ್ದೇಶಿಸಿ ಮಾತನಾಡಿದ ಕಪಿಲಾಶ್ರಮದ ಶ್ರೀ ರಾಮಚಂದ್ರ ಸ್ವಾಮೀಜಿ ಗೋವಿಗೆ ಸ್ವಾತಂತ್ರ್ಯ ಲಭಿಸಲು ನಾವೆಲ್ಲಾ ಒಗ್ಗಟ್ಟಾಗಿ ಹೋರಾಡುವ ಅಗತ್ಯವಿದೆ. ಇದರ ಹಿನೆÀ್ನಲೆಯಲ್ಲಿ ಮುಂದಿನ ಜನವರಿ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಶ್ರೀ ರಾಘವೇಶ್ವರ ಶ್ರೀಗಳು ದಕ್ಷಿಣ ಭಾರತದ ಗೋ - ರಕ್ಷಕರ ಬೃಹತ್ ಸಮಾವೇಶವವನ್ನು ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಗೋವನ್ನು ಭಾರತದ ರಾಷ್ಟ್ರ ಮಾತೆಯನ್ನಾಗಿ ಘೋಷಿಸಲು ಸರಕಾರದ ಮೇಲೆ ಒತ್ತಡ ಹೇರಲಾಗುವದು ಎಂದು ತಿಳಿಸಿದರು.

ಗೋವು ಪ್ರಾಣಿ ಎಂದು ಹೇಳಲು ಸಾಧ್ಯವಿಲ್ಲ. ಗೋವಿನಲ್ಲಿ ಕಳೆಯುವಂತಹ ಯಾವದೇ ವಸ್ತುವಿಲ್ಲ. ದೇಶಿ ಹಸುವಿನ ಗೋಮೂತ್ರದಲ್ಲಿ 186 ಔಷಧೀಯ ಗುಣಗಳಿವೆ. ಇದರ ಸೇವನೆಯಿಂದ ಕ್ಯಾನ್ಸರ್ ರೋಗವನ್ನು ವಾಸಿಮಾಡಬಹುದಾಗಿದೆ ಎಂದರು. ಈಶ್ವರನ ಪ್ರಿಯ ವಾಹನ ನಂದಿಯನ್ನು ಇಂದು ಇಂಟರ್‍ನೆಟ್‍ನಲ್ಲಿ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಗೋವಿಗೂ ಈ ದುರ್ಗತಿ ಬರುವಲ್ಲಿ ಸಂದೇಹವಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಗೋಯಾತ್ರೆಯಲ್ಲಿ ಪ್ರವೀಣ್, ಕೊಡಗು ಹವ್ಯಕ ಬ್ರಾಹ್ಮಣರ ಸಂಘದ ಅಧ್ಯಕ್ಷ ಕೆ.ಆರ್.ನಾರಾಯಣ ಮೂರ್ತಿ, ಕಾರ್ಯದರ್ಶಿ ಡಾ.ರಾಜಾರಾಮ್, ಪದಾಧಿಕಾರಿಗಳು, ಸ್ಥಳೀಯರಾದ ಎಂ.ಎಂ.ನರೇಂದ್ರ, ಎನ್.ಎಸ್.ಉದಯಶಂಕರ್, ಮಕ್ಕಿ ದಿವಾಕರ ಭಟ್, ರವಿ ಭಟ್, ನಾರಾಯಣ ಭಟ್, ಕಂಗಾಂಡ ಜಾಲಿ ಪೂವಪ್ಪ, ಕಾಂಡಂಡ ಸೂರಜ್ ಅಚ್ಚಪ್ಪ, ಕೋಲೆಯಂಡ ಅಶೋಕ್, ಪೆÇಂಗೇರ ಸುರೇಶ್, ಬಾಚಮಂಡ ಚಂಗುವಮ್ಮಯ್ಯ, ದೇವಳದ ಪರುಪತ್ತೆಗಾರ ಪರದಂಡ ತಮ್ಮಪ್ಪ, ಅರ್ಚಕರಾದ ಕುಶ ಭಟ್, ಲವ ಭಟ್, ಭಕ್ತಜನ ಸಂಘದ ವ್ಯವಸ್ಥಾಪಕ ಕಾಳಿಂಗ, ಶ್ರೀಕಾಂತ್ ಹೆಬ್ಬಾರ್ ಮತ್ತಿತರರು ಇದ್ದರು.