ನಾಪೆÇೀಕ್ಲು, ಮೇ 28: ನಾಪೆÇೀಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜಿಲ್ಲಾ ಗೊಲ್ಲ ಸಮಾಜದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಅರೆಯಂಡ, ಅಯ್ಯಂಗೇರಿ ‘ಬಿ’ ತಂಡಗಳು ಫೈನಲ್ ಪ್ರವೇಶಿಸಿವೆ.

ಅರೆಯಂಡ ಮತ್ತು ಪೆÇನ್ನಕಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಅರೆಯಂಡ ತಂಡ 4 ವಿಕೆಟ್ ನಷ್ಟಕ್ಕೆ 87 ರನ್‍ಗಳ ಗುರಿ ನೀಡಿತು. ಇದನ್ನು ಬೆನ್ನಟ್ಟಿದ ಪೆÇನ್ನಕಂಡ ತಂಡ 6 ವಿಕೆಟ್ ನಷ್ಟಕ್ಕೆ 44 ರನ್‍ಗಳಿಸಿ ಪರಾಭವಗೊಂಡಿತು. ನಂತರ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಡಗು ಜೂನಿಯರ್ಸ್ ತಂಡ ಎಲ್ಲಾ ವಿಕೆಟ್ ಕಳೆದುಕೊಂಡು 31 ರನ್‍ಗಳಿಸಿರೆ, ಅದನ್ನು ಬೆನ್ನಟ್ಟಿದ ಅಯ್ಯಂಗೇರಿ ‘ಬಿ’ 2 ವಿಕೆಟ್ ನಷ್ಟಕ್ಕೆ 32 ರನ್‍ಗಳಿಸಿ ವಿಜಯಪತಾಕೆ ಹಾರಿಸಿತು.

ಮಹಿಳೆಯರಿಗೆ ಏರ್ಪಡಿಸಿದ ಥ್ರೋಬಾಲ್ ಪಂದ್ಯಾಟದಲ್ಲಿ ಅರೆಯಂಡ ಮತ್ತು ಪೆÇಂಗೇರ ತಂಡಗಳ ನಡುವಿನ ಪಂದ್ಯಾಟದಲ್ಲಿ ಅರೆಯಂಡ ತಂಡ ಪೆÇಂಗೇರ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ಅರೆಯಂಡ ಮತ್ತು ಬಲ್ಲಮಾವಟಿ ತಂಡಗಳ ನಡುವೆ ಫೈನಲ್ ಪಂದ್ಯಾಟ ನಡೆಯಲಿದೆ. ಶಾಲಾ ಮಕ್ಕಳಿಗಾಗಿ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.