ಮಡಿಕೇರಿ, ಜ.10: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಒಟ್ಟು ಸ್ಥಾನಗಳ ತಾಲೂಕುವಾರು ವಿವರ: ಮಡಿಕೇರಿ ತಾಲೂಕಿಗೆ ಸಂಬಂಧಿಸಿದಂತೆ ಕೃಷಿಕರ ಕ್ಷೇತ್ರ-11, ವರ್ತಕರ ಕ್ಷೇತ್ರ-1 ಮತ್ತು ಸಹಕಾರ ಸಂಸ್ಕರಣ ಸಂಘಗಳ ಕ್ಷೇತ್ರ-1, ವೀರಾಜಪೇಟೆ ತಾಲೂಕಿನಲ್ಲಿ ಕೃಷಿಕರ ಕ್ಷೇತ್ರ 11, ವರ್ತಕರ ಕ್ಷೇತ್ರ-1, ಸೋಮವಾರಪೇಟೆ ತಾಲೂಕಿನಲ್ಲಿ ಕೃಷಿಕರ ಕ್ಷೇತ್ರ-11, ವರ್ತಕರ ಕ್ಷೇತ್ರ -1 ಒಟ್ಟು ಕೃಷಿಕರ ಕ್ಷೇತ್ರ-33, ವರ್ತಕರ ಕ್ಷೇತ್ರ 3 ಹಾಗೂ ಸಹಕಾರ ಸಂಸ್ಕರಣ ಸಂಘಗಳ ಕ್ಷೇತ್ರ-1.

ಅವಿರೋಧವಾಗಿ ಆಯ್ಕೆ ನಂತರ ಚುನಾವಣೆ ನಡೆಯಲಿರುವ ಸ್ಥಾನಗಳ ತಾಲೂಕುವಾರು ವಿವರ: ಮಡಿಕೇರಿ ತಾಲೂಕಿನಲ್ಲಿ ಕೃಷಿಕರ ಕ್ಷೇತ್ರ 8, ವರ್ತಕರ ಕ್ಷೇತ್ರ-1, ವೀರಾಜಪೇಟೆ ತಾಲೂಕಿನಲ್ಲಿ ಕೃಷಿಕರ ಕ್ಷೇತ್ರ 10, ವರ್ತಕರ ಕ್ಷೇತ್ರ 1, ಸೋಮವಾರಪೇಟೆ ತಾಲೂಕಿನಲ್ಲಿ ಕೃಷಿಕರ ಕ್ಷೇತ್ರ 11, ವರ್ತಕರ ಕ್ಷೇತ್ರ 1 ಒಟ್ಟು ಕೃಷಿಕರ ಕ್ಷೇತ್ರ 29 ಮತ್ತು ವರ್ತಕರ ಕ್ಷೇತ್ರ 3 ಆಗಿದೆ.

ಅವಿರೋಧವಾಗಿ ಆಯ್ಕೆಯಾದ ಸ್ಥಾನಗಳ ತಾಲೂಕುವಾರು ವಿವರ: ಮಡಿಕೇರಿ ತಾಲೂಕಿನಲ್ಲಿ ಕೃಷಿಕರ ಕ್ಷೇತ್ರದಲ್ಲಿ ನರಿಯಂದಡ, ನಾಪೋಕ್ಲು ಮತ್ತು ಮರಗೋಡು-3, ಸಹಕಾರ ಸಂಸ್ಕರಣ ಸಂಘಗಳ ಕ್ಷೇತ್ರಗಳು-1, ವೀರಾಜಪೇಟೆ ತಾಲೂಕಿನಲ್ಲಿ ಪೊನ್ನಂಪೇಟೆ-1, ಒಟ್ಟು 4 ಕೃಷಿಕರ ಕ್ಷೇತ್ರಕ್ಕೆ ಹಾಗೂ ಸಹಕಾರ ಸಂಸ್ಕರಣ ಸಂಘಗಳ ಕ್ಷೇತ್ರ -1 ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮತದಾರರ ವಿವರ: ಮೂರು ತಾಲೂಕುಗಳಲ್ಲಿ ಒಟ್ಟು 62,418 ಪುರುಷರು, 12,559 ಮಹಿಳೆಯರು ಒಟ್ಟು 74,977 ಮತದಾರರು ಇದ್ದಾರೆ. ಮಡಿಕೇರಿ ತಾಲೂಕಿನಲ್ಲಿ 19971 ಪುರುಷರು, 2,289 ಮಹಿಳೆ ಒಟ್ಟು 22,260 ಮತದಾರರಿದ್ದಾರೆ. ವೀರಾಜಪೇಟೆ ತಾಲೂಕಿನಲ್ಲಿ 22,941 ಪುರುಷರು ಮತ್ತು 6005 ಮಹಿಳೆ ಯರು ಒಟ್ಟು 28,946 ಮತದಾರರು ಇದ್ದಾರೆ. ಸೋಮವಾರಪೇಟೆ ತಾಲೂಕಿನಲ್ಲಿ 19,506 ಪುರುಷರು, 4,265 ಮಹಿಳೆಯರು ಒಟ್ಟು 23,771 ಮತದಾರರು ಇದ್ದಾರೆ.

ಮೂರು ತಾಲೂಕುಗಳಲ್ಲಿ ಒಟ್ಟು 91 ಮತಗಟ್ಟೆಗಳು, 6 ಹೆಚ್ಚುವರಿ ಮತಗಟ್ಟೆಗಳು ಒಟ್ಟು 97 ಮತಗಟ್ಟೆ ಗಳಿವೆ. ಮಡಿಕೇರಿ ತಾಲೂಕಿನಲ್ಲಿ 23 ಮತಗಟ್ಟೆಗಳು, 4 ಹೆಚ್ಚುವರಿ ಮತ ಗಟ್ಟೆಗಳು ಒಟ್ಟು 27 ಮತಗಟ್ಟೆಗಳಿವೆ. ವೀರಾಜಪೇಟೆ ತಾಲೂಕಿನಲ್ಲಿ 41 ಮತಗಟ್ಟೆಗಳು, 2 ಹೆಚ್ಚುವರಿ ಮತಗಟ್ಟೆ ಗಳು ಒಟ್ಟು 43 ಮತಗಟ್ಟೆಗಳಿವೆ. ಸೋಮವಾರಪೇಟೆ ತಾಲೂಕಿನಲ್ಲಿ 27 ಮತಗಟ್ಟೆಗಳಿವೆ.

ಅತೀ ಸೂಕ್ಷ್ಮ, ಸೂಕ್ಷ್ಮ ಮತ್ತು ಸಾಮಾನ್ಯ ಮತಗಟ್ಟೆಯ ವಿವರ: ಮೂರು ತಾಲೂಕುಗಳಲ್ಲಿ ಒಟ್ಟು 4 ಅತೀ ಸೂಕ್ಷ್ಮ, 30 ಸೂಕ್ಷ್ಮ, 1 ನಕ್ಸಲ್ ಪೀಡಿತ, 62 ಸಾಮಾನ್ಯ ಒಟ್ಟು 97 ಮತಗಟ್ಟೆಗಳಿವೆ.

ಮಡಿಕೇರಿ ತಾಲೂಕಿನಲ್ಲಿ 2 ಅತೀ ಸೂಕ್ಷ್ಮ, 9 ಸೂಕ್ಷ್ಮ, 16 ಸಾಮಾನ್ಯ, ಒಟ್ಟು 27 ಮತಗಟ್ಟೆಗಳು. ವೀರಾಜಪೇಟೆ ತಾಲೂಕಿನಲ್ಲಿ 2 ಅತೀ ಸೂಕ್ಷ್ಮ, 16 ಸೂಕ್ಷ್ಮ, 1 ನಕ್ಸಲ್ ಪೀಡಿತ, 24 ಸಾಮಾನ್ಯ ಒಟ್ಟು 43 ಮತಗಟ್ಟೆಗಳು. ಸೋಮವಾರಪೇಟೆ ತಾಲೂಕಿನಲ್ಲಿ 5 ಸೂಕ್ಷ್ಮ, 22 ಸಾಮಾನ್ಯ ಒಟ್ಟು 27 ಮತಗಟ್ಟೆಗಳಿವೆ.

ಜಿಲ್ಲೆಯಲ್ಲಿ ಒಟ್ಟು 97 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಪ್ರತಿಯೊಂದು ಮತಗಟ್ಟೆಗೂ ಒಬ್ಬ ಅಧ್ಯಕ್ಷಾಧಿಕಾರಿ ಮತ್ತು ಮೂರು ಮತಗಟ್ಟೆ ಅಧಿಕಾರಿಗಳು, ಒಟ್ಟು ಡಿ ದರ್ಜೆ ನೌಕರರನ್ನು ನೇಮಿಸಲಾಗುತ್ತದೆ.

ತಾಲೂಕುವಾರು ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 91 ಮತಗಟ್ಟೆಗಳು ಹಾಗೂ 6 ಹೆಚ್ಚುವರಿ ಮತಗಟ್ಟೆಗಳು ಸೇರಿದಂತೆ ಒಟ್ಟು 97 ಮತಗಟ್ಟೆಗಳಿಗೆ 103 ಪಿಆರ್‍ಒ, 103 ಎಪಿಆರ್‍ಒ, 206 ಪೋಲಿಂಗ್ ಅಧಿಕಾರಿ ಒಟ್ಟು 412 ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, 64 ಸಿಬ್ಬಂದಿಗಳನ್ನು ಕಾಯ್ದಿರಿಸಲಾಗಿದೆ.

ಚುನಾವಣೆಗಾಗಿ 16 ಮಿನಿ ಬಸ್, 20 ಮ್ಯಾಕ್ಸಿ ಕ್ಯಾಬ್, 30 ಜೀಪು ಒಟ್ಟು 66 ವಾಹನಗಳನ್ನು ನಿಯೋಜಿಸ ಲಾಗಿದೆ. ಮತದಾನವು ಜನವರಿ, 12 ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಮಸ್ಟರಿಂಗ್ ಕಾರ್ಯವು ತಾ. 11 ರಂದು ಬೆಳಗ್ಗೆ 8 ಗಂಟೆಗೆ ಮಡಿಕೇರಿ ಕೋಟೆ ಹಳೇ ವಿಧಾನ ಸಭಾಂಗಣ, ವೀರಾಜಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಸೋಮವಾರ ಪೇಟೆಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆಯಲಿದೆ.

ಹಾಗೆಯೇ ಡಿ ಮಸ್ಟರಿಂಗ್ ಕಾರ್ಯವು ಜನವರಿ, 12 ರಂದು ಆಯಾಯ ತಾಲೂಕು ಕೇಂದ್ರಗಳಲ್ಲಿ (ಇದೇ ಸ್ಥಳಗಳಲ್ಲಿ) ನಡೆಯಲಿದೆ. ಮತ ಎಣಿಕೆಯು ತಾ. 14 ರಂದು ಬೆಳಗ್ಗೆ 8 ಗಂಟೆಗೆ ಆಯಾಯ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಮಡಿಕೇರಿ ತಾಲೂಕಿಗೆ ಸಂಬಂಧಿಸಿದಂತೆ ನಗರದ ಕೋಟೆ ಹಳೇ ವಿಧಾನ ಸಭಾಂಗಣ, ವೀರಾಜಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಸೋಮವಾರಪೇಟೆಯ ಜೂನಿಯರ್ ಕಾಲೇಜಿನಲ್ಲಿ ನಡೆಯಲಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ಸಂಬಂಧ ಭಾರತೀಯ ಚುನಾವಣಾ ಆಯೋಗವು ನೀಡುವ ಭಾವಚಿತ್ರ ವಿರುವ ಗುರುತಿನ ಚೀಟಿ ಹೊಂದಿರದ ಮತದಾರರು ಯಾವದಾದರೂ ಒಂದನ್ನು ಹಾಜರು ಪಡಿಸಿ ಮತ ಚಲಾಯಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪಾಸ್ ಪೋರ್ಟ್, ಡ್ರೈವಿಂಗ್ ಲೈಸನ್ಸ್, ಆದಾಯ ತೆರಿಗೆ ಗುರುತಿನ ಚೀಟಿ, ರಾಜ್ಯ ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸಾರ್ವಜನಿಕ ವಲಯದ ಬ್ಯಾಂಕ್ ಕಿಸಾನ್ ಮತ್ತು ಅಂಚೆ ಕಚೇರಿ ನೀಡಿರುವ ಭಾವಚಿತ್ರ ವಿರುವ ಪಾಸ್ ಪುಸ್ತಕ, ಮಾನ್ಯತೆ ಪಡೆದ ನೋಂದಾಯಿತ ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕೊಟ್ಟಿರುವ ಗುರುತಿನ ಚೀಟಿಗಳು, ಭಾವಚಿತ್ರ ವಿರುವ ನೋಂದಾಯಿತ ಡೀಡ್‍ಗಳು ಪಟ್ಟಾಗಳು ಮುಂತಾದ ಆಸ್ತಿ ದಾಖಲೆಗಳು, ಭಾವಚಿತ್ರವಿರುವ ಪಡಿತರ ಚೀಟಿ ಸಕ್ಷಮ ಪ್ರಾಧಿಕಾರ ನೀಡಿರುವ ಎಸ್.ಸಿ,ಎಸ್.ಟಿ, ಓಬಿಸಿ ಭಾವಚಿತ್ರವಿರುವ ಪ್ರಮಾಣ ಪತ್ರಗಳು.

ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಪಿಂಚಣಿ ಪಾವತಿ ಆದೇಶಗಳು ಅಥವಾ ಮಾಜಿ ಯೋಧರ ಪಿಂಚಣಿ ಪುಸ್ತಕ ಪಿಂಚಣಿ ಸಂದಾಯ ಆದೇಶಗಳಂತಹ ಪಿಂಚಣಿ ದಾಖಲೆಗಳು, ವೃದ್ದಾಪ್ಯ ವೇತನ ಆದೇಶಗಳು, ವಿಧವಾ ವೇತನ ಆದೇಶಗಳು ಭಾವಚಿತ್ರವಿರುವ ಸ್ವಾತಂತ್ರ್ಯ ಯೋಧರ ಗುರುತಿನ ಚೀಟಿಗಳು. ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಶಸ್ತ್ರ ಪರವಾನಗಿ ಅಂಗವಿಕಲರಿಗೆ ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರ ವಿರುವ ಗುರುತಿನ ಚೀಟಿಗಳು ಮಾಜಿ ಯೋಧರ ಭಾವಚಿತ್ರವಿರುವ ಸಿ.ಎಸ್.ಡಿ. ಕ್ಯಾಂಟೀನ್ ಕಾರ್ಡ್ ಸಂಧ್ಯಾ ಸುರಕ್ಷಾ ಯೋಜನೆಯ ಭಾವಚಿತ್ರವಿರುವ ಗುರುತಿನ ಚೀಟಿ.

ಎನ್.ಆರ್.ಇ.ಜಿ ಯೋಜನೆಯ ಅಡಿಯಲ್ಲಿ ನೀಡಿರುವ ಭಾವಚಿತ್ರವಿರುವ ಉದ್ಯೋಗ ಕಾರ್ಡ್: ಭಾವಚಿತ್ರವಿರುವ ಯಶಸ್ವಿನಿ ಕಾರ್ಡ್ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿಗಳು ಇತ್ಯಾದಿ ಸ್ಥಳೀಯ ಸಂಸ್ಥೆಗಳು ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸರ್ಕಾರಿ ಇಲಾಖೆ ನೀಡಿರುವ ಭಾವಚಿತ್ರವಿರುವ ಹಿರಿಯ ನಾಗರಿಕರ ಗುರುತಿನ ಚೀಟಿ, ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ನೀಡಿರುವ ಕುಟುಂಬದ ಸದಸ್ಯರ ಹೆಸರು ಮತ್ತು ವಯಸ್ಸು ಹಾಗೂ ಕುಟುಂಬದ ಯಜಮಾನನೊಂದಿಗೆ ಹೊಂದಿರುವ ಸದಸ್ಯರ ಸಂಬಂಧ ಒಳಗೊಂಡ ಭಾವಚಿತ್ರ ಇರುವ ತಾತ್ಕಾಲಿಕ/ ಮೂಲ ಪಡಿತರ ಚೀಟಿ, ಭಾವಚಿತ್ರವಿರುವ ಆರೋಗ್ಯ ವಿಮಾ ಯೋಜನೆ ಸ್ಮಾರ್ಟ್ ಕಾರ್ಡ್‍ಗಳು (ಕಾರ್ಮಿಕ ಮಂತ್ರಾಲಯ ಯೋಜನೆ), ಆಧಾರ್ ಕಾರ್ಡ್.