ಕೂಡಿಗೆ, ಸೆ. 13: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು, ಜೇನುಕಲ್ಲುಬೆಟ್ಟ ವ್ಯಾಪ್ತಿಗಳಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಈ ವ್ಯಾಪ್ತಿಯ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಜೋಳವನ್ನು ಬೆಳೆದಿದ್ದಾರೆ.ಆದರೆ, ಬಾಣಾವರದಂಚಿನಿಂದ ಧಾವಿಸಿರುವ ಕಾಡಾನೆ ಹಿಂಡುಗಳು ಈ ವ್ಯಾಪ್ತಿಯ ರೈತರುಗಳಾದ ಗೋಪಾಲ, ಕೃಷ್ಣ, ಚಂದ್ರಶೇಖರ್, ಎಂಬವರ ಜಮೀನುಗಳಿಗೆ ಧಾಳಿ ನಡೆಸಿ, ಜಮೀನಿನಲ್ಲಿ ಬೆಳೆಸಲಾಗಿದ್ದ ಜೋಳ, ಗೆಣಸು, ಕೇನೆಗಳನ್ನು ತುಳಿದು ನಷ್ಟ ಪಡಿಸಿವೆ.

ಈ ಹಿನ್ನೆಲೆ ಅರಣ್ಯ ಇಲಾಖೆ ಅವೈಜ್ಞಾನಿಕವಾಗಿ ಕಂದಕಗಳನ್ನು ನಿರ್ಮಿಸಿರುವದು ಸರಿಯಾದ ಕ್ರಮವಲ್ಲ. ಸರ್ಕಾರದ ಹಣವನ್ನು ಪೋಲು ಮಾಡುತ್ತಿರುವ ಅರಣ್ಯ ಇಲಾಖೆಯವರು ಸ್ಥಳ ಪರಿಶೀಲಿಸಿ ಸಮರ್ಪಕವಾಗಿ ಆನೆ ದಾಟದಂತೆ ತೆಗೆಯಬೇಕಾದ ಅಂತರದ ಕಂದಕಗಳನ್ನು ತೆಗೆಯಬೇಕೆಂದು ಈ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಕೆ. ವಿಶ್ವನಾಥ್, ದಸ್ವಿ, ಗ್ರಾಮದ ಪ್ರಮುಖರುಗಳಾದ ಗೋಪಾಲಕೃಷ್ಣ, ಮಂಜಯ್ಯ ಸಂಬಂಧಪಟ್ಟವರನ್ನು ಆಗ್ರಹಿಸಿದ್ದಾರೆ.