ಕುಶಾಲನಗರ, ನ 15: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಜನವರಿಯಲ್ಲಿ ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅಧ್ಯಕ್ಷತೆಯಲ್ಲಿ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಸೋಮವಾರ ನಡೆಯಿತು. ಸಭೆಯಲ್ಲಿ ಪ್ರಮುಖವಾಗಿ ವಿವಿಧ ಉಪ ಸಮಿತಿಗಳ ರಚನೆ ಬಗ್ಗೆ ಚರ್ಚೆ ನಡೆದು ಅಧ್ಯಕ್ಷರು, ಸಂಚಾಲಕರು ಮತ್ತು ಸದಸ್ಯರನ್ನು ನೇಮಕ ಮಾಡಲಾಯಿತು.

ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಮಡಿಕೇರಿ ಶಾಸಕರು ಮತ್ತು ಉಸ್ತುವಾರಿ ಮಂತ್ರಿಗಳು, ಹಣಕಾಸು ಸಮಿತಿಗೆ ಅಧ್ಯಕ್ಷರನ್ನಾಗಿ ಮಡಿಕೇರಿ ಶಾಸಕರು, ಸಂಚಾಲಕರಾಗಿ ಕೂಡಾ ಮಾಜಿ ಅಧ್ಯಕ್ಷ ಎಸ್.ಎನ್. ನರಸಿಂಹಮೂರ್ತಿ, ನಗರ ಅಲಂಕಾರ ಸಮಿತಿ ಅಧ್ಯಕ್ಷರಾಗಿ ಪ.ಪಂ. ಅಧ್ಯಕ್ಷ ಎಂ.ಎಂ. ಚರಣ್, ಸಂಚಾಲಕರಾಗಿ ಪ.ಪಂ. ಉಪಾಧ್ಯಕ್ಷ ಟಿ.ಆರ್ ಶರವಣಕುಮಾರ್, ಮೆರವಣಿಗೆ ಸಮಿತಿ ಅಧ್ಯಕ್ಷರಾಗಿ ಪಿಲಿಪ್‍ವಾಸ್, ಸಂಚಾಲಕರಾಗಿ ಹೆಚ್.ಎನ್. ರಾಮಚಂದ್ರ, ಪ್ರಚಾರ ಸಮಿತಿ ಅಧ್ಯಕ್ಷರಾಗಿ ವಾರ್ತಾಧಿಕಾರಿ ಚಿನ್ನಸ್ವಾಮಿ, ಸಂಚಾಲಕರಾಗಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ವೇದಿಕೆ ನಿರ್ಮಾಣ ಸಮಿತಿ ಅಧ್ಯಕ್ಷರಾಗಿ ಎಪಿಸಿಎಂಎಸ್ ಅಧ್ಯಕ್ಷ ಹೆಚ್.ಬಿ. ಚಂದ್ರಪ್ಪ, ಸಂಚಾಲಕರಾಗಿ ಟಿ.ಕೆ. ಪಾಂಡುರಂಗ, ಆಹಾರ ಸಮಿತಿ ಅಧ್ಯಕ್ಷರಾಗಿ ಕೆ.ಸಿ. ನಂಜುಂಡಸ್ವಾಮಿ, ಸಂಚಾಲಕರಾಗಿ ಕೆ.ಎನ್. ಸುರೇಶ್, ವಿ.ಡಿ.ಪುಂಡರಿಕಾಕ್ಷ, ರಾಮದಾಸ್ ಅವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಲೋಕೇಶ್ ಸಾಗರ್ ತಿಳಿಸಿದ್ದಾರೆ.

ವಸತಿ ಸಮಿತಿ ಅಧ್ಯಕ್ಷರಾಗಿ ನಾಗೇಂದ್ರಪ್ರಸಾದ್, ಸ್ಮರಣ ಸಂಚಿಕೆ ಸಮಿತಿಗೆ ಅಧ್ಯಕ್ಷರಾಗಿ ಸಬಲಂ ಭೋಜಣ್ಣ ರೆಡ್ಡಿ, ಸಂಚಾಲಕರಾಗಿ ಕೆ.ವಿ.ಸುರೇಶ್, ಸ್ವಚ್ಛತೆ ಮತ್ತು ನೈರ್ಮಲ್ಯ ಸಮಿತಿಗೆ ಅಧ್ಯಕ್ಷರಾಗಿ ಪ.ಪಂ. ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ಪುಸ್ತಕ, ಸ್ತ್ರೀ ಶಕ್ತಿ ಸಂಘಗಳ ಕೈಗಾರಿಕೋತ್ಪನ್ನಗಳ ಮತ್ತು ಇತರೆ ವಸ್ತುಗಳ ಮಾರಾಟ ಮಳಿಗೆ ಸಮಿತಿ ಅಧ್ಯಕ್ಷರಾಗಿ ಕೆ.ಕೆ. ನಾಗರಾಜಶೆಟ್ಟಿ, ಸಂಚಾಲಕರಾಗಿ ಕೆ.ಎನ್. ಅಶೋಕ್, ಆರೋಗ್ಯ ಸಮಿತಿ ಅಧ್ಯಕ್ಷರಾಗಿ ಡಾ. ಧರಣೇಂದ್ರ, ಸಂಚಾಲಕರಾಗಿ ತಾಲೂಕು ವೈದ್ಯಾಧಿಕಾರಿ ಡಾ. ಪಾರ್ವತಿ, ಸಾಂಸ್ಕøತಿಕ ಸಮಿತಿಗೆ ಅಧ್ಯಕ್ಷರಾಗಿ ಬಾಲಕೃಷ್ಣ ರೈ, ಸಂಚಾಲಕರಾಗಿ ಕೆ.ಆರ್. ಮಂಜುಳಾ, ವೇದಿಕೆ ಅಲಂಕಾರ ಸಮಿತಿಗೆ ಅಧ್ಯಕ್ಷರಾಗಿ ಮಾಲಾದೇವಿ, ಸಂಚಾಲಕರಾಗಿ ಕಮಲಾಗಣಪತಿ, ದ್ವಾರಗಳ ಸಮಿತಿಗೆ ಅಧ್ಯಕ್ಷರಾಗಿ ಎಂ.ಡಿ. ರಂಗಸ್ವಾಮಿ, ಸಂಚಾಲಕರಾಗಿ ರವೀಂದ್ರ ರೈ, ವೇದಿಕೆ ನಿರ್ವಹಣಾ ಸಮಿತಿ ಅಧ್ಯಕ್ಷರಾಗಿ ಎನ್.ಎ. ಅಶ್ವತ್ಥ್‍ಕುಮಾರ್, ಸಂಚಾಲಕರಾಗಿ ಹಂಡ್ರಂಗಿ ನಾಗರಾಜ್, ಅತಿಥಿ ಸತ್ಕಾರ ಸಮಿತಿ ಅಧ್ಯಕ್ಷರಾಗಿ ಎಸ್.ಕೆ. ಸತೀಶ್, ನೀರು ಸರಬರಾಜು ಮತ್ತು ನಿರ್ವಹಣಾ ಸಮಿತಿ ಅಧ್ಯಕ್ಷರಾಗಿ ವಿ.ಎಸ್. ಆನಂದ್, ಸಂಚಾಲಕರಾಗಿ ವಸಂತ್, ರಕ್ಷಣಾ ಸಮಿತಿಗೆ ಪೊಲೀಸ್ ಇಲಾಖೆ, ಚಿತ್ರಕಲಾ ಪ್ರದರ್ಶನ ಸಮಿತಿಗೆ ಅಧ್ಯಕ್ಷರಾಗಿ ಉ.ರಾ. ನಾಗೇಶ್, ಕನ್ನಡ ಧ್ವಜ ನಿರ್ವಹಣಾ ಸಮಿತಿಗೆ ಅಧ್ಯಕ್ಷರಾಗಿ ಸದಾಶಿವಯ್ಯ ಎಸ್. ಪಲ್ಲೇದ್, ಸ್ವಯಂ ಸೇವಾ ಸಮಿತಿಗೆ ಅಧ್ಯಕ್ಷರಾಗಿ ಹೆಚ್.ವಿ .ಶಿವಪ್ಪ, ಸಂಚಾಲಕರಾಗಿ ಮಹೇಶ್ ಆವರನ್ನು ಆಯ್ಕೆ ಮಾಡಲಾಗಿದೆ ಎಂದು ಸಾಗರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.