ನಾಪೆÉÇೀಕ್ಲು, ಜ. 12: ಭಾರತೀಯ ಸೇನೆಗೆ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಆದರೆ ಸರಕಾರ ಅದನ್ನು ಗಣನೆಗೆ ತೆಗೆದುಕೊಳ್ಳದೆ ಜಿಲ್ಲೆಯ ಯೋಧರು ವಶಪಡಿಸಿಕೊಂಡಿರುವ ಪೈಸಾರಿ ಜಾಗವನ್ನು ವಶಪಡಿಸಿಕೊಳ್ಳುತ್ತಿರುವದು ವೀರ ಯೋಧರಿಗೆ ಮಾಡಿರುವ ಅಪಮಾನವಾಗಿದೆ. ಒತ್ತುವರಿ ತೆರವಿಗೆ ಮುಂದಾದರೆ ಉಗ್ರ ಹೋರಾಟ ಹಮ್ಮಿಕೊಳ್ಳÀಲಾಗುವದು ಎಂದು ಬೆಳೆಗಾರರ ಒಕ್ಕೂಟ ಸರಕಾರ ಮತ್ತು ಕಂದಾಯ ಇಲಾಖೆಯನ್ನು ಎಚ್ಚರಿಸಿದೆ.ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಕಾರ್ಯದರ್ಶಿ ಕೀಪಾಡಂಡ ಮಧು ಬೋಪಣ್ಣ ಈ ಹಿಂದೆ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ ಸೈನಿಕರಿಗೆ ಸರಕಾರ 10 ಏಕರೆ ಜಾಗವನ್ನು ಮೀಸಲಾಗಿರಿಸಿ ಸೌಲಭ್ಯವನ್ನು ಕಲ್ಪಿಸಲಾಗುತ್ತಿತ್ತು. ಹಾಗಿದ್ದರೂ ಕಳೆದ 50 ವರ್ಷಗಳಿಂದ ಅನುಭವ ಸ್ವಾಧೀನದಲ್ಲಿರುವ ಜಾಗವನ್ನು ತೆರವುಗೊಳಿಸುವ ಉದ್ದೇಶದ ಹಿಂದೆ ಷಡ್ಯಂತರ ಅಡಗಿದೆ ಎಂದು ಆರೋಪಿದರು. ಮೊದಲಿಗೆ ಪೈಸಾರಿ ಜಾಗ ನಂತರ ರೈತರ ಬಾಣೆ ಜಾಗವನ್ನು

(ಮೊದಲ ಪುಟದಿಂದ) ವಶಪಡಿಸಿಕೊಳ್ಳುವ ಹುನ್ನಾರ ಇದರ ಹಿಂದೆ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಯೋಧರು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಅವರಿಗೆ ಮಂಜೂರು ಮಾಡಿಕೊಡ ಬೇಕು. ಹಾಗೆಯೇ 5 ಏಕರೆ ಜಾಗದವರೆಗೆ ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿ ರುವ ರೈತರಿಗೆ ಆ ಜಾಗವನ್ನು ಮಂಜೂರು ಮಾಡಿಕೊಡಬೇಕು ತಪ್ಪಿದ್ದಲ್ಲಿ ಬೆಳೆಗಾರರ ಒಕ್ಕೂಟದಿಂದ ಉಗ್ರ ಹೋರಾಟ ನಡೆಸಲಾಗುವದು ಎಂದು ಎಚ್ಚರಿಸಿದರು.

ಬಿದ್ದಾಟಂಡ ಟಿ. ದಿನೇಶ್ ಮಾತನಾಡಿ ಕಳೆದ 50 ವರ್ಷದಿಂದ ಜಾಗದ ಮಂಜೂರಾತಿಗೆ ಕಾಯುತ್ತಿದ್ದ ಸೈನಿಕರಿಗೆ ಇದರ ಬಗ್ಗೆ ಪರಿಶೀಲನೆ ನಡೆಸಿ ಜಾಗ ಮಂಜೂರು ಮಾಡಿಕೊಡುವ ಬದಲು ವೀರಾಜಪೇಟೆ ತಹಶೀಲ್ದಾರ್ ಮಹದೇವ ಸ್ವಾಮಿ ಅವರ ಜಾಗವನ್ನು ತೆರವುಗೊಳಿಸಲು ಹೊರಟಿರುವದು ಕಂದಾಯ ಇಲಾಖೆಯ ಜನ ವಿರೋಧಿ ನೀತಿಯನ್ನು ತೋರಿಸುತ್ತದೆ. ತಹಶೀಲ್ದಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಪಾಡಂಡ ನರೇಶ್ ಮಾತನಾಡಿ ರಾಜ್ಯ ಸರಕಾರ ದೊಡ್ಡ ದೊಡ್ಡ ಕಂಪೆನಿಗಳು, ತೋಟಗಳು, ರೆಸಾರ್ಟ್‍ಗಳು ವಶಪಡಿಸಿಕೊಂಡಿರುವ ಜಾಗದ ತೆರವಿಗೆ ಮುಂದಾಗಬೇಕು. ಆ ಜಾಗವನ್ನು ಕೊಡಗಿನ ಮೂಲ ನಿವಾಸಿಗಳಿಗೆ, ಅರಣ್ಯವಾಸಿಗಳಿಗೆ ನೀಡಬೇಕು ಎಂದರು. ರಬ್ಬರ್ ತೋಟದವರು ಒತ್ತುವರಿ ಮಾಡಿಕೊಂಡಿರುವ ಪೈಸಾರಿ ಜಾಗವನ್ನು ತೆರವುಗೊಳಿಸಲು ನ್ಯಾಯಾಲಯದ ಆದೇಶವಿದ್ದರೂ ಜಿಲ್ಲಾಧಿಕಾರಿಗಳು ಏಕೆ ಮೌನವಾಗಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಜ. 20 ರಂದು ಪೈಸಾರಿ ತೆರವು ವಿರುದ್ಧ ಅಮ್ಮತಿಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಬೆಳೆಗಾರರ ಒಕ್ಕೂಟ ಸಂಪೂರ್ಣ ಬೆಂಬಲ ನೀಡುತ್ತಿದು, ಜಿಲ್ಲೆಯ ಸಮಸ್ತ ಜನತೆ ಸಹಕರಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.

ಗೋಷ್ಠಿಯಲ್ಲಿ ಡಾ. ಸಣ್ಣುವಂಡ ಕಾವೇರಪ್ಪ, ಬಿದ್ದಾಟಂಡ ಬಬ್ಬು ಬೋಪಣ್ಣ, ಜಿನ್ನು ನಾಣಯ್ಯ, ಎನ್.ಎಸ್. ಉದಯಶಂಕರ್, ಅಶೋಕ್ ಇದ್ದರು.

ಜಯಕರ್ನಾಟಕ ಸಂಘಟನೆಯಿಂದ ಬೆಂಬಲ

ಜ. 20 ರಂದು ಅಮ್ಮತ್ತಿಯಲ್ಲಿ ನಡೆಸಲು ಉದ್ದೇಶಿಸಿರುವ ಪೈಸಾರಿ ತೆರವು ವಿರುದ್ಧದ ಪ್ರತಿಭಟನೆಗೆ ಜಿಲ್ಲಾ ಜಯಕರ್ನಾಟಕ ಸಂಘಟನೆಯ ಪೂರ್ಣ ಬೆಂಬಲ ನೀಡುವದಾಗಿ ಜಯಕರ್ನಾಟಕ ಸಂಘಟನೆಯ ಮಡಿಕೇರಿ ತಾಲೂಕು ಅಧ್ಯಕ್ಷ ಬಿದ್ದಾಟಂಡ ಜಿನ್ನು ನಾಣಯ್ಯ ತಿಳಿಸಿದ್ದಾರೆ.