ಮಡಿಕೇರಿ, ನ.23 : ಟಿಪ್ಪು ಜಯಂತಿ ಸಂದರ್ಭ ಮತಬ್ಯಾಂಕ್ ರಾಜಕಾರಣ ನಡೆಸಲು ಹುನ್ನಾರ ನಡೆಸಿದ ಕಾಂಗ್ರೆಸ್ ಈ ಪ್ರಯತ್ನದಲ್ಲಿ ವಿಫಲವಾದ ಕಾರಣ ಐಗೂರು ಪ್ರಕರಣವನ್ನು ರಾಜಕೀಯ ಬೇಳೆಯ ನ್ನಾಗಿ ಬೇಯಿಸಿಕೊಳ್ಳುತ್ತಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಗೂರಿನ ಘಟನೆಗೆ ಕೇರಳ ದಿಂದ ಬಂದ ವ್ಯಕ್ತಿಗಳು ಕಾರಣ ರೆಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದು, ಆರೋಪಿ ಗಳು ಯಾರು ಎನ್ನುವದನ್ನು ಬಹಿರಂಗ ಪಡಿಸಲಿ ಎಂದು ಒತ್ತಾಯಿಸಿದರು.

ಇತ್ತೀಚೆಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಗ್ರಾಮಕ್ಕೆ ಭೇಟಿ ನೀಡಿದ್ದರಾದರು ಮಸೀದಿಗೆ ಭೇಟಿ ನೀಡಲಿಲ್ಲ ಎನ್ನುವ ಆರೋಪವಿದೆ. ಆದರೆ, ಈ ಮಸೀದಿ ಅಸ್ತಿತ್ವದಲ್ಲೆ ಇಲ್ಲವೆಂದು ಟೀಕಿಸಿದ ಸುಬ್ರಹ್ಮಣ್ಯ ಉಪಾಧ್ಯಾಯ ಕೇವಲ ಮೂರು ಕುಟುಂಬಗಳು ಹಬ್ಬಗಳ ಸಂದರ್ಭ ಪ್ರಾರ್ಥನೆ ಸಲ್ಲಿಸುತ್ತಿದ್ದವು. ಶೋಭಾ ಕರಂದ್ಲಾಜೆ ಅವರು ಸ್ಥಳ ಪರಿಶೀಲನೆಗೆ ಮುಂದಾದರಾದರೂ ಮಸೀದಿಗೆ ಬೀಗ ಹಾಕಲಾಗಿತ್ತು ಎಂದು ಅವರು ಸಮರ್ಥಿಸಿಕೊಂಡರು.

ತಾವು ಮಾತ್ರ ಅಲ್ಪಸಂಖ್ಯಾತರ ಹಿತೈಷಿಗಳು ಎನ್ನುವ ಭ್ರಮೆಯಲ್ಲಿ ಕಾಂಗ್ರೆಸಿಗರಿದ್ದು, ಎಮ್ಮೆಮಾಡಿನಲ್ಲಿ ನಿಷ್ಪಕ್ಷಪಾತವಾಗಿ ಮತದಾನ ಮಾಡಿದ ಅಲ್ಪಸಂಖ್ಯಾತರು ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಸಂಘ ಪರಿವಾರ ಹಾಗೂ ಬಿಜೆಪಿಯ ಸುಮಾರು ಹತ್ತು ಮಂದಿ ಕಾರ್ಯ ಕರ್ತರ ಹತ್ಯೆಯಾಗಿದ್ದು, ಅಭಿವೃದ್ಧಿಗೆ ಆದ್ಯತೆ ನೀಡದ ಸರ್ಕಾರ ಕೇವಲ ಮತಬ್ಯಾಂಕ್ ರಾಜಕಾರಣ ಮಾಡು ತ್ತಿದೆ ಎಂದು ಆರೋಪಿಸಿದರು.

ಐಗೂರಿನಲ್ಲಿ ನಡೆದ ಎರಡೂ ಘಟನೆಗಳನ್ನು ಸಿಐಡಿ ತನಿಖೆಗೆ ಒಪ್ಪಿಸ ಬೇಕೆಂದು ಆಗ್ರಹಿಸಿದ ಅವರು, ಕಳೆದ ಬಾರಿ ಟಿಪ್ಪು ಜಯಂತಿ ಸಂದರ್ಭ ಮೃತ ಪಟ್ಟ ಕುಟ್ಟಪ್ಪ ಅವರ ಸಾವಿನ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು. ಎರಡು ವರ್ಷಗಳ ಹಿಂದೆಯೇ ಪಕ್ಷದಿಂದ ಉಚ್ಛಾಟಿಸಲ್ಪಟ್ಟ ಕೋಡಿ ಪೆÀÇನ್ನಪ್ಪ ಅವರ ಪರ ಹೇಳಿಕೆ ನಿಡಿರುವ ಕರಿಕೆ ಭಾಗದ ಕೆಲವರಿಗೆ ಪಕ್ಷದಿಂದ ನೋಟಿಸ್ ನೀಡಲಾಗುವದೆಂದು ಸುಬ್ರಹ್ಮಣ್ಯ ಉಪಾಧ್ಯಾಯ ಸ್ಪಷ್ಟಪಡಿಸಿದರು.

ಬಿಜೆಪಿ ನÀಗರಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, 500 ಹಾಗೂ 1000 ಮುಖ ಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಿರುವ ಬಗ್ಗೆ ವಿರೋಧ ವ್ಯಕ್ತಪಡಿಸುವ ಮೂಲಕ ವಿರೋಧ ಪಕ್ಷಗಳು ಕ್ಷುಲ್ಲಕ ರಾಜಕಾರಣ ಮಾಡುತ್ತಿವೆಯೆಂದು ಅಸಮಾಧಾನ ವ್ಯಕ್ತÀಪಡಿಸಿದರು. ಕೆಲವರು ಪ್ರಚಾರಕ್ಕಾಗಿ ಪ್ರಧಾನಿ ಕ್ರಮವನ್ನು ಟೀಕಿಸುತ್ತಿದ್ದು, ದೇಶಕ್ಕೆ ಸಧ್ಯದಲ್ಲಿಯೇ ಅಚ್ಛೇ ದಿನ್ ಬರಲಿದೆಯೆಂದು ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಉಮೇಶ್ ಸುಬ್ರಮಣಿ ಹಾಗೂ ಪ್ರಮುಖರಾದ ಅನಿಲ್ ಉಪಸ್ಥಿತರಿದ್ದರು.