ಸುಂಟಿಕೊಪ್ಪ, ಡಿ. 25: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಬೈತೂರಪ್ಪ ಪೌವ್ವÀದಿ ಬಸವೇಶ್ವರ ದೇವಾಲಯ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ತಾ.26 ರಂದು ಮಂದ್ ತೆರೆಯುವ ಕಾರ್ಯಕ್ರಮ ನಡೆಯಲಿದೆ.

ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯ ಸಮಿತಿ ಹಾಗೂ ಗ್ರಾಮಸ್ಥರೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಕೊಡವ ಸಾಹಿತ್ಯ ಅಕಾಡೆಮಿ ಕೊಡವ ಸಾಹಿತ್ಯ ಪರಂಪರೆ, ಇತಿಹಾಸ ಮತ್ತು ಸಂಸ್ಕøತಿಯ ಬೆಳವಣಿಗೆಗೆ ಪೂರಕವಾಗಿ ಕೆಲಸ ನಿರ್ವಹಿಸುತ್ತಿದ್ದು ಕೊಡವ ಸಂಸ್ಕøತಿಯ ಕೊಂಡಿಯಾಗಿರುವ ಮಂದ್‍ನ ಪುನರ್ ಪ್ರಾರಂಭಿಸುವ ಕೆಲಸದಲ್ಲಿ ಗ್ರಾಮಸ್ಥರು ಭಾಗಿಯಾಗಿ ರುವದು ಸಂತಸ ತಂದಿದೆ. ನಾಲ್ಕು ದಶಕಗಳಿಂದ ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಶ್ರೀ ಬಸವೇಶ್ವರ ಊರ್ ಮಂದ್ ಮತ್ತೆ ತನ್ನ ಗತ ವೈಭವ ಆರಂಭಿಸುವದು ಆರೋಗ್ಯಕರ ಬೆಳವಣಿಗೆ ಎಂದು ಹೇಳಿದರು.

ಈ ಸಂದರ್ಭ ಪೊವ್ವದಿ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೊಕ್ಕಲೆರ ಎಸ್. ಪೂಣಚ್ಚ, ದೇವತಕ್ಕ ಜಗ್ಗಾರಂಡ ಎಂ. ಕಾರ್ಯಪ್ಪ, ಕಾರ್ಯದರ್ಶಿ ಬಿ.ಸಿ. ದಿನೇಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.