ಸಿದ್ದಾಪುರ, ಜ. 1: ಬರಡಿ ಅಂಗನವಾಡಿ ಕೇಂದ್ರದ 26ನೇ ವಾರ್ಷಿಕೋತ್ಸವ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು. ಜಿ.ಪಂ. ಸದಸ್ಯೆ ಸುನಿತಾ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‍ಎನ್‍ಡಿಪಿ ಜಿಲ್ಲಾಧ್ಯಕ್ಷ ಕೆ.ಎನ್. ವಾಸು ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಂಗನವಾಡಿ ಬಾಲ ವಿಕಾಸ ಸಮಿತಿ ಅಧ್ಯಕ್ಷ ಶಶಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಟಾಣಿಗಳ ನೃತ್ಯ ನೋಡುಗರ ಗಮನ ಸೆಳೆಯಿತು. ಅಂಗನವಾಡಿ ಕಟ್ಟಡಕ್ಕೆ ಸ್ಥಳ ದಾನ ನೀಡಿದ ಕೊಂಗೇರ ಬೋಪಯ್ಯ ಅವರನ್ನು ಅಂಗನವಾಡಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ನೆಲ್ಲಿಹುದಿಕೇರಿ ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ, ತಾ.ಪಂ. ಮಾಜಿ ಅಧ್ಯಕ್ಷ ವಿ.ಕೆ. ಲೋಕೇಶ್, ತಾ.ಪಂ. ಸದಸ್ಯೆ ಸುಹಾದ ಅಶ್ರಫ್, ಗ್ರಾ.ಪಂ. ಸದಸ್ಯ ಶಂಶೀರ್, ಯೋಗೇಶ್, ಶೈಲ, ಪಿ.ಡಿ.ಓ. ನಂಜುಂಡ ಸ್ವಾಮಿ ಮತ್ತಿತರರು ಇದ್ದರು.