*ಗೋಣಿಕೊಪ್ಪಲು, ಅ. 9: ಸಮಕಾಲೀನ ಸಮಸ್ಯೆಗಳನ್ನು ತಮ್ಮ ಕವಿತೆಗಳ ಮೂಲಕ ಬಿತ್ತರಿಸಿದ ಕವಿಗಳು ಸಮಾಜ ಸಮಸ್ಯೆಗಳಿಗೆ ಧ್ವನಿಯಾದರು.

ಗೋಣಿಕೊಪ್ಪಲು ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ಕವಿತೆಗಳನ್ನು ವಾಚನ ಮಾಡಿದ ಕವಿಗಳು ಬರಗಾಲ,ಕಾವೇರಿ ಸಮಸ್ಯೆ,ಮೊಬೈಲ್ ಸಮಸ್ಯೆ ಮೊದಲಾದ ವಾಸ್ತವಗಳನ್ನು ತೆರೆದಿಟ್ಟರು.

ಎಳೆಯ ವಯಸ್ಸಿನ ಕವಯತ್ರಿ ಮುಲ್ಲೆಂಗಡ ಮಮತಾ ದೇಚಮ್ಮ ಶಿಖಾ ಕಾವ್ಯವನ್ನು ವಾಚಿಸಿದರೆ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮುಲ್ಲೆಂಗಡ ದರ್ಶನ್ ಸುಬ್ಬಯ್ಯ ನಮ್ಮ ಊರು ಕಾವ್ಯವನ್ನು ವಾಚಿಸಿದರು.