ಮಡಿಕೇರಿ, ಆ. 28: ಕಾರು ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿ ಮೂವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಕಾಸರಗೋಡುವಿನಿಂದ ಮೈಸೂರಿನತ್ತ ತೆರಳುತ್ತಿದ್ದ ಕಾರಿಗೆ (ಕೆಎ 21, ಬಿ-2534) ಬೋಯಿಕೇರಿ ಶಾಲೆ ಬಳಿ ಎದುರಿನಿಂದ ಬಂದ ಸರ್ಕಾರಿ ಬಸ್ (ಕೆಎ-09, ಎಫ್-5247) ಡಿಕ್ಕಿಯಾಗಿದೆ. ಪರಿಣಾಮ ಕಾರುಚಾಲಕ ಕುಮಾರ್, ಕಾರಿನಲ್ಲಿದ್ದ ಯೋಗೇಶ್ ಹಾಗೂ ಭವ್ಯ ಎಂಬವರುಗಳು ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.