ಪೊನ್ನಂಪೇಟೆ, ನ. ೨೬: ಕೊಡವ ಎಜುಕೇಷನ್ ಸೊಸೈಟಿ ಅಧೀನದ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಸಿಐಟಿ) ಹಾಗೂ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಪಿಯು ಕಾಲೇಜು (ಸಿಐಪಿಯುಸಿ) ಸಂಯುಕ್ತ ಆಶ್ರಯದಲ್ಲಿ ೭೧ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿAದ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಅತಿಥಿ ಗಣ್ಯರು ನಾಡಧ್ವಜಾರೋಹಣ ನೆರವೇರಿಸಿದರು. ಬಳಿಕ ವೀರಗಾಸೆ ಹಾಗೂ ಡೊಳ್ಳು ಕುಣಿತ ಕಲಾತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ ಸಿಐಟಿ ಕಾಲೇಜಿನ ಆವರಣದಿಂದ ಸಭಾಂಗಣದವರೆಗೆ ಮೆರವಣಿಗೆ ನಡೆಯಿತು. ನಂತರ ಅತಿಥಿಗಳು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಡಿಕೇರಿ ಆಕಾಶವಾಣಿಯ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಮಾತನಾಡಿ, ಹಲ್ಮಿಡಿ ಶಾಸನದಲ್ಲಿನ ಹಳೆಗನ್ನಡದ ಬಳಕೆ ಕನ್ನಡ ಭಾಷೆಯ ಪ್ರಾಚೀನತೆಗೆ ಮಹತ್ವದ ಸಾಕ್ಷಿಯಾಗಿದೆ. ಜಾನಪದ ಸಾಹಿತ್ಯದಿಂದ ಆರಂಭಗೊAಡು ಆದಿಕವಿ ಪಂಪ, ಕುಮಾರವ್ಯಾಸರ ಮೂಲಕ ಕುವೆಂಪು ಹಾಗೂ ಬೇಂದ್ರೆಯವರವರೆಗೆ ಕನ್ನಡ ಸಾಹಿತ್ಯ ಬೆಳೆದು ಬಂದ ಹಾದಿಯನ್ನು ವಿವರಿಸಿದರು.

ಅನ್ಯಭಾಷೆಗಳ ಪ್ರಭಾವದ ನಡುವೆಯೂ ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಕನ್ನಡ ನಾಡು-ನುಡಿಯ ಶ್ರೀಮಂತಿಕೆಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕೆಂದು ಒತ್ತಿಹೇಳಿದ ಅವರು, ತಮ್ಮ ಕಂಠಸಿರಿಯಲ್ಲಿ ಮಹಾಭಾರತದ ಕಾವ್ಯಸಾಲುಗಳನ್ನು ಹಾಡುವ ಮೂಲಕ ಕನ್ನಡದ ಶ್ರೀಮಂತ ಕಾವ್ಯಪರಂಪರೆಯ ಸೊಗಡನ್ನು ಪರಿಚಯಿಸಿದರು.

ಮೈಸೂರಿನ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಭಾಷಾ ವಿಭಾಗದ ಎಸ್‌ಎಲ್‌ಎಸ್ ಡಾ. ಭೀಮರಾಜು ಈರೇಗೌಡ ಮಾತನಾಡಿ, ಕನ್ನಡ ರಾಜ್ಯೋತ್ಸವ ಕೇವಲ ಆಚರಣೆಯಾಗಬಾರದು, ಅದು ಅನುಕರಣೆಯಾಗಬೇಕು ಎಂದರು.

ಎರಡು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಶ್ರೀಮಂತಿಕೆಯನ್ನು ಒಳಗೊಂಡಿದೆ. ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಕನ್ನಡವನ್ನು ಸ್ವಾಭಿಮಾನದಿಂದ ಬಳಸುವುದರೊಂದಿಗೆ ಮುಂದಿನ ಪೀಳಿಗೆಗೆ ಭಾಷಾ ಪರಂಪರೆಯನ್ನು ತಲುಪಿಸುವ ಕೆಲಸವಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡವ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಸಿ.ಪಿ. ರಾಕೇಶ್ ಪೂವಯ್ಯ ಮಾತನಾಡಿ, ವಿದೇಶಗಳಲ್ಲಿ ಉದ್ಯೋಗ ಪಡೆದರೂ ನಮ್ಮ ಜನ್ಮಭೂಮಿಯನ್ನು ಮರೆಯಬಾರದು. ಹೆಮ್ಮೆಯಿಂದ ನಾವು ಕನ್ನಡನಾಡಿನವರು ಎಂದು ಹೇಳಿಕೊಳ್ಳುವ ನಾಡಪ್ರೇಮ ಪ್ರತಿಯೊಬ್ಬರಲ್ಲೂ ಮೂಡಬೇಕು. ಇಂದಿನ ಉದ್ಯಮ ಕ್ಷೇತ್ರದಲ್ಲಿ ವೃತ್ತಿಪರ ಕೌಶಲ್ಯಗಳ ಜೊತೆಗೆ ಭಾಷಾ ಪ್ರೌಢಿಮೆಯೂ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಈ ಸಂದರ್ಭ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ಸಿಐಪಿಯುಸಿ ವಿದ್ಯಾರ್ಥಿನಿ ಧೀಮಹಿ ಅವರನ್ನು ಅಭಿನಂದಿಸಲಾಯಿತು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಜಾನಪದ ವಸ್ತುಪ್ರದರ್ಶನ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪುಷ್ಪಲತಾ ಮತ್ತು ತಂಡ ಪ್ರಥಮ, ತತ್ವೋಭವಿ ಮತ್ತು ತಂಡ ದ್ವಿತೀಯ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಗಾನ್ಯಾ ತೃತೀಯ ಸ್ಥಾನ ಪಡೆದರು.

‘ಅಕ್ಷರೋತ್ಸವ’ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಸಿಐಟಿ ಸಿವಿಲ್ ಎಂಜಿನಿಯರಿAಗ್ ವಿಭಾಗದ ಐದನೇ ಸೆಮಿಸ್ಟರ್ ವಿದ್ಯಾರ್ಥಿನಿ ಕವನ ಸಿ. ಪ್ರಥಮ ಹಾಗೂ ಇಸಿ ವಿಭಾಗದ ಏಳನೇ ಸೆಮಿಸ್ಟರ್ ವಿದ್ಯಾರ್ಥಿನಿ ಜಾನ್ವಿ ಪ್ರಸಾದ್ ದ್ವಿತೀಯ ಸ್ಥಾನ ಗಳಿಸಿದರು.

ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೈಬರ್ ಸೆಕ್ಯುರಿಟಿ ವಿಭಾಗದ ಕಿರಣ್ ಮತ್ತು ತಂಡ ವಿಜೇತರಾದರೆ, ಎಐ ಮತ್ತು ಎಂಎಲ್ ವಿಭಾಗದ ಚಿದಾನಂದ್ ಮತ್ತು ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು.

ರೂಪದರ್ಶಿ ಸ್ಪರ್ಧೆಯಲ್ಲಿ ಸಿಐಟಿ ಅಂತಿಮ ವರ್ಷದ ಸಿವಿಲ್ ವಿಭಾಗದ ವಿದ್ಯಾರ್ಥಿನಿ ಯಶಸ್ವಿನಿ ಮಿಸ್ ಕನ್ನಡತಿ ಕಿರೀಟ ಮುಡಿಗೇರಿಸಿಕೊಂಡರೆ, ಪ್ರಥಮ ವರ್ಷದ ಡೇಟಾ ಸೈನ್ಸ್ ವಿಭಾಗದ ವಿದ್ಯಾರ್ಥಿ ಶರತ್ ಟಿ.ವಿ. ‘ಮಿಸ್ಟರ್ ಕನ್ನಡಿಗ’ ಪ್ರಶಸ್ತಿಗೆ ಭಾಜನರಾದರು.

ಸಿಐಟಿ ಪ್ರಾಂಶುಪಾಲ ಡಾ. ಎಂ. ಬಸವರಾಜ್, ಸಿಐಪಿಯುಸಿ ಪ್ರಾಂಶುಪಾಲೆ ಡಾ. ರೋಹಿಣಿ ತಿಮ್ಮಯ್ಯ, ಕಾರ್ಯಕ್ರಮ ಸಂಯೋಜಕ ಹಾಗೂ ಸೈಬರ್ ಸೆಕ್ಯುರಿಟಿ ವಿಭಾಗದ ಮುಖ್ಯಸ್ಥ ಡಾ. ಯತಿರಾಜ್ ಜಿ.ಆರ್. ಮತ್ತು ವಿದ್ಯಾರ್ಥಿ ಪ್ರತಿನಿಧಿಗಳಾದ ವಂದನಾ ಹಾಗೂ ಪ್ರಾರ್ಥನ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ನೀತಾ ಸ್ವಾಗತ ನೃತ್ಯ ಪ್ರದರ್ಶಿಸಿದರು. ಇಸಿ ವಿಭಾಗದ ಪ್ರಾಧ್ಯಾಪಕಿ ಪ್ರೊ. ಸುಷ್ಮಾ ಸ್ವಾಗತಿಸಿದರು. ಸಿಐಟಿ ವಿದ್ಯಾರ್ಥಿನಿ ರಂಜಿತಾ ವಂದಿಸಿದರು. ಸಿಐಟಿ ಸಿವಿಲ್ ವಿಭಾಗದ ಪ್ರಾಧ್ಯಾಪಕಿ ಪ್ರೊ. ದೀಪಿಕಾ ಹಾಗೂ ಸಿಐಪಿಯುಸಿ ಕನ್ನಡ ಉಪನ್ಯಾಸಕಿ ಡಾ. ಸುಶ್ಮಿತಾ ಪಿ.ವಿ. ಕಾರ್ಯಕ್ರಮ ನಿರೂಪಿಸಿದರು.